ವಿರಾಟ್ ಕೊಹ್ಲಿಯ ಸ್ಟ್ರೆಕ್ ರೇಟ್ ಅನ್ನು ಸುನೀಲ್ ಗವಾಸ್ಕರ್ ಕಟುವಾಗಿ ಟೀಕೆ ಮಾಡಿದ್ದಾರೆ.
Eshwarappa: ಚಿತ್ರನಟರನ್ನು ನೋಡಿ ಜನ ಮತ ಹಾಕಲ್ಲ – ಕೆ ಎಸ್ ಈಶ್ವರಪ್ಪ ವ್ಯಂಗ್ಯ..!
ಗುರುವಾರ ಎಸ್ ಆರ್ ಎಚ್ ವಿರುದ್ಧದ ಪಂದ್ಯದಲ್ಲಿ ಪವರ್ ಪ್ಲೇ ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ವಿರಾಟ್ ಕೊಹ್ಲಿ ನಂತರ ಟೆಸ್ಟ್ ಮಾದರಿಯಂತೆ ಬ್ಯಾಟಿಂಗ್ ನಡೆಸಿದ ಕೊಹ್ಲಿ 43 ಎಸೆತಗಳಲ್ಲಿ 51 ರನ್ ಸಿಡಿಸಿ ವೇಗಿ ಜಯದೇವ್ ಉನಾದ್ಕಟ್ ಗೆ ವಿಕೆಟ್ ಒಪ್ಪಿಸಿದ್ದರು. ಆರ್ ಸಿಬಿ ಮಾಜಿ ನಾಯಕ ಸ್ಟ್ರೆಕ್ ರೇಟ್ ಕಡೆಗೂ ಗಮನ ಹರಿಸಬೇಕು ಎಂದು ಲಿಟ್ಲ್ ಮಾಸ್ಟರ್ ಸಲಹೆ ನೀಡಿದ್ದಾರೆ.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 41ನೇ ಪಂದ್ಯದಲ್ಲಿ ಟಾಸ್ ಗೆದ್ದ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡರು. ವಿರಾಟ್ ಕೊಹ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ದಾಖಲಿಸಿದರು ನಂತರ ಪ್ಯಾಟ್ ಕಮಿನ್ಸ್ ಗೆ ಬೌಂಡರಿ ಮೂಲಕ ಸ್ವಾಗತ ನೀಡಿದರು. ಪವರ್ ಪ್ಲೇ ಅಂತ್ಯಕ್ಕೆ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 18 ಎಸೆತಗಳಲ್ಲಿ 32 ರನ್ ಸಿಡಿಸಿದ್ದ ಕೊಹ್ಲಿ, ನಂತರ ಸ್ಪಿನ್ನರ್ ಗಳಾದ ಮಯಾಂಕ್ ಮಾರ್ಕಂಡೆ ಹಾಗೂ ಶಹಬಾಜ್ ಅಹ್ಮದ್ ಓವರ್ ಗಳಲ್ಲಿ ರನ್ ಬರ ಎದುರಿಸಿದ ಕೊಹ್ಲಿ, 6 ಓವರ್ ಗಳ ನಂತರ ಬೌಂಡರಿ ಗಳಿಸುವಲ್ಲಿ ವಿಫಲರಾಗಿ ಜಯದೇವ್ ಉನಾದ್ಕಟ್ ಗೆ ವಿಕೆಟ್ ಒಪ್ಪಿಸಿದರು.
ಯುವ ಆಟಗಾರ ರಜತ್ ಪಾಟಿದಾರ್ ಮಯಾಂಕ್ ಮಾರ್ಕಂಡೆ ಓವರ್ ನಲ್ಲಿ ಸತತ 4 ಸಿಕ್ಸರ್ ಸಿಡಿಸುವ ಮೂಲಕ 20 ಎಸೆತಗಳಲ್ಲೇ 250 ಸ್ಟ್ರೈಕ್ ರೇಟ್ ನಲ್ಲಿ 50 ರನ್ ಸಿಡಿಸಿ ತಂಡದ ಮೊತ್ತವನ್ನು 206/7 ಕ್ಕೆ ತಲುಪಿಸಿದರು. ಈ ಕಠಿಣ ಗುರಿ ಹಿಂಬಾಲಿಸಿದ ಎಸ್ ಆರ್ ಎಚ್ ನಂತಹ ಬಲಿಷ್ಠ ಬ್ಯಾಟಿಂಗ್ ಬಲವನ್ನು ಪವರ್ ಪ್ಲೇ ನಲ್ಲೇ ನಿಯಂತ್ರಿಸಿದ ಆರ್ ಸಿಬಿ ಬೌಲರ್ಸ್ ಅಂತಿಮವಾಗಿ 171/8 ಕಟ್ಟಿಹಾಕುವ ಮೂಲಕ ತಂಡಕ್ಕೆ 35 ರನ್ ಗಳ ಗೆಲುವು ತಂದುಕೊಟ್ಟರು. ಪಾಟಿದಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸ್ಟಾರ್ ಸ್ಪೋರ್ಟ್ಸ್ ಜೊತೆ ಸಂವಾದ ನಡೆಸಿದ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದ್ದಾರೆ.
ಪಂದ್ಯದ ಮಧ್ಯಮ ಓವರ್ ಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಸ್ಪರ್ಶವನ್ನು ಕಳೆದುಕೊಂಡಂತೆ ಬ್ಯಾಟ್ ಮಾಡಿದ್ದರು. ನನಗೆ ಅಂಕಿಗಳ ಬಗ್ಗೆ ಖಚಿತತೆ ಇಲ್ಲ. ಆದರೆ 31-32 ರನ್ ಗಳಿಸಿದ್ದಾಗ ಅವರು ತಮ್ಮ ಲಯವನ್ನು ಕಳೆದುಕೊಂಡರು. ಆನಂತರ ಅವರು ಒಂದೇ ಒಂದು ಬೌಂಡರಿ ಗಳಿಸಲಿಲ್ಲ. ಆದ್ದರಿಂದ ಪಂದ್ಯದಲ್ಲಿ ಆತ ವಿಕೆಟ್ ಒಪ್ಪಿಸಿದ ನಂತರ ಮೊದಲ ಎಸೆತದಲ್ಲಿ ನೀವು ಎದುರಿಸಿದಾಗ ಇದ್ದ ಸ್ಟ್ರೈಕ್ ರೇಟ್ ಹಾಗೂ 14 ಅಥವಾ 15ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದಾಗ ನೀವು ಕೇವಲ 118 ಸ್ಟ್ರೆಕ್ ರೇಟ್ ಹೊಂದಿದ್ದೀರಿ, ತಂಡವು ನಿಮ್ಮಿಂದ ಖಂಡಿತ ಇಂತಹ ಪ್ರದರ್ಶನವನ್ನು ನಿರೀಕ್ಷೆ ಮಾಡಿರಲಿಲ್ಲ” ಎಂದು ಸುನೀಲ್ ಗವಾಸ್ಕರ್ ಟೀಕಿಸಿದ್ದಾ