ವಿರಾಟ್ ಕೊಹ್ಲಿ ವಿರುದ್ಧ ಕ್ರಿಕೆಟ್ ಮೈದಾನದಲ್ಲಿ ಎಗರಾಡಿ ಗೆದ್ದವರು ಯಾರೂ ಇಲ್ಲ ಬಿಡಿ. ಯಾಕಂದ್ರೆ ವಿರಾಟ್ ಕೊಹ್ಲಿಗೆ ಇರುವ ಕೆಪಾಸಿಟಿ ಏನು ಅಂತಾ ಎಲ್ಲರಿಗೂ ಗೊತ್ತು. ಒಮ್ಮೆ ಎದುರಾಳಿ ತಂಡದ ಆಟಗಾರರು ಕೆಣಕಿಕೊಂಡು ಬಂದರೆ, ವಿರಾಟ್ ಕೊಹ್ಲಿ ಅಲ್ಲೇ ಡ್ರಾ & ಅಲ್ಲೇ ಬಹುಮಾನ ಅಂತಾ ಘೋಷಣೆ ಮಾಡಿ ಬಿಡುತ್ತಾರೆ. ಇಷ್ಟು ಇಲ್ಲದಿದ್ದರೆ ವಿರಾಟ್ಗೆ ಆಸ್ಟ್ರೇಲಿಯಾ ತಂಡವನ್ನು ಸೈಲೆಂಟ್ ಮಾಡುವುದು ಸಾಧ್ಯವಾಗುತ್ತಿತ್ತಾ? ಅಥವಾ ಜಗತ್ತಿಗೇ ಸ್ಲೆಡ್ಜಿಂಗ್ ಮಾಡುವುದನ್ನ ಕಲಿಸಿಕೊಟ್ಟ ಆಸ್ಟ್ರೇಲಿಯಾ ಆಟಗಾರರು ವಿರಾಟ್ ಕೊಹ್ಲಿಯನ್ನ ಕಂಡು ಸೈಲೆಂಟ್ ಆಗಿದ್ದು ನಿಮಗೆಲ್ಲಾ ಗೊತ್ತು. ಹಿಂಗಿದ್ದಾಗ ವಿರಾಟ್ ಕೊಹ್ಲಿಗೆ ಶುಭ್ಮನ್ ಗಿಲ್ ಯಾವ ಲೆಕ್ಕ ಹೇಳಿ? ವಿರಾಟ್ ಕೊಹ್ಲಿ ರಿವೇಂಜ್ ವಿಡಿಯೋ ನೋಡಲು ಮುಂದೆ ಓದಿ.
ಹೌದು 2023ರ ಐಪಿಎಲ್ ಟೂರ್ನಿ ಅಂದ್ರೆ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಮ್ಮ RCB ತಂಡವು ಲೀಗ್ ಹಂತದಲ್ಲೇ ಹೊರಗೆ ಬಿದ್ದಿತ್ತು. ಆಗ ಆರ್ಸಿಬಿ ಟೂರ್ನಿಯಿಂದ ಹೊರ ಬೀಳುವುದಕ್ಕೆ ಕಾರಣವಾಗಿದ್ದು ಇದೇ ಗುಜರಾತ್ ಟೈಟಾನ್ಸ್ ತಂಡ. ಯಾಕಂದ್ರೆ ಕಳೆದ ಬಾರಿ ಅಂದ್ರೆ, 2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಒಟ್ಟು 13 ಪಂದ್ಯಗಳನ್ನು ಆಡಿ ಅದರಲ್ಲಿ 9 ಮ್ಯಾಚ್ ಗೆದ್ದು ಅದಾಗಲೇ ಸೆಮಿಫೈನಲ್ಗೆ ಹೋಗಿತ್ತು.
ಹೀಗಿದ್ದಾಗ ತನ್ನ ಕೊನೆಯ ಪಂದ್ಯ, ಅಂದ್ರೆ 14ನೇ ಪಂದ್ಯವನ್ನ ಆರ್ಸಿಬಿ ತಂಡದ ಎದುರು ಆಡಿತ್ತು ಗುಜರಾತ್ ಟೈಟಾನ್ಸ್. ಹೀಗೆ ತಾನು ಸೆಮಿಫೈನಲ್ ಹಂತಕ್ಕೆ ಹೋಗಿದ್ದರೂ, ಆರ್ಸಿಬಿ ತಂಡದ ವಿರುದ್ಧದ ಕೊನೆಯ ಪಂದ್ಯ ಗೆದ್ದೇ ಗೆಲ್ಲಬೇಕು ಎಂಬ ಹಠದಲ್ಲಿ ಗುಜರಾತ್ ತಂಡ ಮುನ್ನುಗ್ಗಿತ್ತು. ಇದು ಆರ್ಸಿಬಿ ಅಭಿಮಾನಿಗಳಿಗೆ ಮಾತ್ರವಲ್ಲ ಆರ್ಸಿಬಿ ಆಟಗಾರರಿಗೆ ಕೂಡ ನೋವು ನೀಡಿತ್ತು. ಅದ್ರಲ್ಲೂ ಹೆಲ್ಮೆಟ್ ತೋರಿಸಿ, ವಿರಾಟ್ ಕೊಹ್ಲಿ ಹೊಟ್ಟೆ ಉರಿಸಿದ್ದರಂತೆ ಶುಭ್ಮನ್ ಗಿಲ್!
2023ರಲ್ಲಿ ಅಕಸ್ಮಾತ್ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಗೆದ್ದಿದ್ದರೆ ಕಪ್ ಗೆಲ್ಲುವ ಚಾನ್ಸ್ ಇತ್ತು. ಆದ್ರೆ ಅಂದು ಆಗಿದ್ದೇ ಬೇರೆ, ಅದರಲ್ಲೂ ಗಿಲ್ ಹಾರಾಟ ಜೋರಾಗಿ ಇತ್ತು. ಅಂದು ಗುಜರಾತ್ ಟೈಟಾನ್ಸ್ ತಂಡಕ್ಕೆ ಆರ್ಸಿಬಿ ವಿರುದ್ಧ ಗೆಲ್ಲಬೇಕಾದ ಅನಿವಾರ್ಯತೆ ಏನು ಇರಲಿಲ್ಲ. ಆದರೂ ಆರ್ಸಿಬಿ ವಿರುದ್ಧ ಗೆದ್ದು, ಆರ್ಸಿಬಿ ತಂಡ ಐಪಿಎಲ್ ಟೂರ್ನಿಯಿಂದ ಹೊರಬೀಳಲು ಕಾರಣವಾಗಿದ್ದ ಗುಜರಾತ್ ತಂಡ ಆರ್ಸಿಬಿ ಆಟಗಾರರನ್ನ ಉರಿಸಿತ್ತು. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಎದುರು ಶುಭ್ಮನ್ ಗಿಲ್ ಹೆಲ್ಮೆಟ್ ತೆಗೆದು ಎಗರಾಡಿದ್ದರು.
ಆಗ ಶುಭ್ಮನ್ ಗಿಲ್ ಎಗರಾಡಿದ್ದಕ್ಕೆ ಈಗ ವಿರಾಟ್ ಕೊಹ್ಲಿ ರಿವೇಂಜ್ ತೆಗೆದುಕೊಂಡಿದ್ದಾರೆ ಅಂತಾ ಆರ್ಸಿಬಿ ಅಭಿಮಾನಿಗಳು ಹೇಳುತ್ತಿದ್ದಾರೆ. ಮೊನ್ನೆ ಮೊನ್ನೆ ನಡೆದಿದ್ದ ಆರ್ಸಿಬಿ & ಗುಜರಾತ್ ತಂಡದ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಹಾಗೆಯೇ ‘ಗಿಲ್ ನೀನು ಹೋಗಿ ಗಿಲ್ಲಿದಾಂಡು ಆಡು…’ ಅಂತಾ ಆರ್ಸಿಬಿ ಫ್ಯಾನ್ಸ್ ಈಗ ಶುಭ್ಮನ್ ಗಿಲ್ ಅವರನ್ನು ರೇಗಿಸುತ್ತಿದ್ದಾರೆ.