ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣವನ್ನು ವಾಪಸ್ ಪಡೆಯುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G.Parameshwara) ಸ್ಪಷ್ಟಪಡಿಸಿದ್ದಾರೆ. https://ainlivenews.com/is-your-manhood-only-against-hindu-activists-ct-ravi-question/ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಯಾಬಿನೆಟ್ ತೀರ್ಮಾನ ಅಂತಿಮ ಆಗಿರುತ್ತದೆ. ಇಷ್ಟೊಂದು ಪ್ರಕ್ರಿಯೆ ಇರುವಾಗ ಪತ್ರ ಬರೆದರು ಎಂದು ಹೇಳಿ ಬೊಬ್ಬೆ ಹೊಡೆದರೆ ಏನು ಮಾಡಬೇಕು? ಡಿಸಿಎಂ ಅವರಿಗೆ ಶಾಸಕರು ಯಾರೋ ಪತ್ರ ಬರೆದಿರುತ್ತಾರೆ. ಅದರ ಆಧಾರದಲ್ಲಿ ಡಿಕೆಶಿ ಪತ್ರ ಬರೆದಿರಬಹುದು. ನಾನು ಇನ್ನೂ ಪತ್ರ ನೋಡಿಲ್ಲ. ನನಗೆ ನೇರವಾಗಿ ಬಂದಾಗ ಕ್ಯಾಬಿನೆಟ್ ಸಬ್ ಕಮಿಟಿಗೆ ಬರೆಯುತ್ತೇನೆ. ಅದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ. ಶಾಸಕರು ಹಾಗೂ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದರೆ ಅದನ್ನು ನಮಗೆ ಕಳುಹಿಸಿ ಕೊಡ್ತಾರೆ. ಆ ಮನವಿ ನನಗೆ ಅಥವಾ ನಮ್ಮ ಇಲಾಖೆಗೆ ಬರುತ್ತದೆ. ಆಗ ನಾವು ಅದನ್ನ ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ಇಟ್ಟು ಪರಿಶೀಲಿಸುತ್ತೇವೆ. ಸಂಪೂರ್ಣವಾಗಿ ಪರಿಶೀಲನೆ ಮಾಡಿ, ಯಾವ ಸೆಕ್ಷನ್ ಹಾಕಿದ್ದಾರೆ. ಕಾನೂನು ಪ್ರಕಾರ…
Author: AIN Author
ರಾಜ್ಯದಲ್ಲಿ ಇಂದು ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿಗೆ ಭಾರೀ ಮಳೆ ಅಲರ್ಟ್ ನೀಡಿದ್ದು, ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ. https://ainlivenews.com/canteen-to-provide-lunch-and-snacks-at-the-depots/ ಕರಾವಳಿಯಲ್ಲಿ ಗಾಳಿ ವೇಗ ಹೆಚ್ಚಾಗಿರುವ ಸಾಧ್ಯತೆ ಹಿನ್ನೆಲೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಸಂಜೆ ಬಳಿಕ ಅಥವಾ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಂಗಳೂರು: ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ ಎಂದು ಮಾಜಿ ಸಚಿವ ಸಿ.ಟಿ. ರವಿ ಪ್ರಶ್ನಿಸಿದರು. ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮತಾಂಧರ ಕಟೌಟ್ ಹಾಕಿದ ಉದ್ದೇಶ ಏನು? ವಿಭಜನೆಯಿಂದ ಇನ್ನೂ ನೀವು ಸಮಾಧಾನ ಆಗಿಲ್ಲ ಅಂತ ಅರ್ಥಾನಾ? ಭಾರತದಲ್ಲಿ ಮತ್ತೊಂದು ವಿಭಜನೆಗೆ ಸರ್ಕಾರ ಪ್ರೋತ್ಸಾಹ ಕೊಡ್ತಿದೆಯಾ? ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ? ಈಗ ಎಲ್ಲಿ ಬಚ್ಚಿಟ್ಕೊಂಡಿದ್ದೀರಿ ಮರಿ ಖರ್ಗೆ? ಹೊರಗೆ ಬಂದು ಮಾತಾಡಿ ಎಂದು ಹೇಳಿದರು Bengaluru; ಡೆಂಟಿಸ್ಟ್ ಸಂಧ್ಯಾ ಪಾಟೀಲ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಐಟಿ ದಾಳಿ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದರು. ಕುವೆಂಪು. ಅವರು ಜನಿಸಿದ ಜಿಲ್ಲೆಯಲ್ಲೇ ಮತಾಂಧರ ಅಟ್ಟಹಾಸಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ಟಿಪ್ಪು ಜಯಂತಿಗೆ ಅವಕಾಶ…
ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಮೂರು ತಂಡಗಳು ಇಂದೇ ರಾಜ್ಯಕ್ಕೆ ಅಗಮಿಸುತ್ತಿದ್ದು ನಾಳೆಯಿಂದ ನಾಲ್ಕು ದಿನಗಳ ಕಾಲ ವಿವಿಧ ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಿವೆ.ಕೇಂದ್ರ ತಂಡ ಹತ್ತು ಸದಸ್ಯರನ್ನೊಗೊಂಡಿದ್ದುರಾಜ್ಯದ ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಎಲ್ಲಾ ಸದಸ್ಯರು ರಂದು ಬೆಂಗಳೂರಿಗೆ ಅಗಮಿಸಿ ವಾಸ್ತವ್ಯ ಮಾಡಲಿದ್ದಾರೆ.ಅ5 ರಂದುಮೂರೂ ತಂಡಗಳು ಬೆಳಿಗ್ಗೆ 9.30-10.30ರ ವರಗೆ ಕರ್ನಾಟಕ ರಾಜ್ಯ ಪೃಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ನಡೆಯಲಿವೆ. ಮಧ್ಯಾಹ್ನ 12 ಗಂಟೆಗೆ ವಿಧಾನ ಸೌಧ ಕೊಠಡಿಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಸಂಕ್ಷಿಪ್ತ ವಿವರ ಪಡೆದು ಜಿಲ್ಲೆಗಳಿಗೆ ತೆರಳಲಿವೆ. Breaking: ಬೆಂಗಳೂರಲ್ಲಿ ಸ್ಕೂಲ್ ಟೈಮ್ ಚೇಂಜ್ ಆಗುತ್ತಾ..?: ಖಾಸಗಿ ಶಾಲಾ ಒಕ್ಕೂಟಗಳು ಹೇಳಿದ್ದೇನು? ಜಿಲ್ಲಾ ಪ್ರವಾಸ ವಿವರ ಮೊದಲ ತಂಡ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಐ.ಎ.ಎಸ್. ಅವರ ನೇತೃತ್ವ.ಇದರಲ್ಲಿ ಎಣ್ಣೆ ಬೀಜಗಳ ಅಭಿವೃದ್ದಿ ಇಲಾಖೆಯ ನಿರ್ದೇಶಕರಾದ…
ಹಾಸನ: ಮುಂದಿನ 15 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುವುದನ್ನು ಯಾರೂ ತಪ್ಪಿಸಲಾಗದು ಎಂದು ಜಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಸಚಿವರು, ” ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಇಳಿಯುವುದರಿಂದ ಮುಂದಿನ 15 ವರ್ಷಗಳ ಕಾಲ ಅಧಿಕಾರ ನಡೆಸುವುದನ್ನು ಯಾರೂ ತಪ್ಪಿಸಲಾಗದು ಎಂದು ಹೇಳಿದರು. https://ainlivenews.com/attack-on-sanatan-dharma-will-create-crisis-of-humanity-yogi-adityanath/ ಮುಖ್ಯಮಂತ್ರಿಯ ಅವಧಿ ಎಷ್ಟು ವರ್ಷ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹ್ಮದ್, ” ಕಾಂಗ್ರೆಸ್ ಪಕ್ಷ ಹೈಕಮಾಂಡ್ ಅಣತಿಯಂತೆ ನಡೆಯುವ ಪಕ್ಷ, ಎಲ್ಲ ತೀರ್ಮಾಮಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಮತ್ತು ಪಕ್ಷದ ಸದಸ್ಯರೆಲ್ಲಾ ಅದಕ್ಕೆ ಬದ್ಧರಾಗಿರುತ್ತಾರೆ. ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಇಳಿಯುವುದರಿಂದ ಮುಂದಿನ 15 ವರ್ಷಗಳ ಕಾಲ ಅಧಿಕಾರ ನಡೆಸುವುದನ್ನು ಯಾರೂ ತಪ್ಪಿಸಲಾಗದು ” ಎಂದರು.
ಬೆಂಗಳೂರಿಗೆ ಸಿಲಿಕಾನ್ ಸಿಟಿ ಖ್ಯಾತಿ ಜೊತೆಗೆ ಟ್ರಾಫಿಕ್ ಸಿಟಿ ಅನ್ನೋ ಕುಖ್ಯಾತಿಯೂ ಇದೆ. ನಗರದ ಯಾವ ರಸ್ತೆಗಳಲ್ಲಿ ನೋಡಿದ್ರೆ ಬರೀ ಟ್ರಾಫಿಕ್ಸ್ . ಟ್ರಾಫಿಕ್ ಕಂಟ್ರೋಲ್ ಗೆ ಸರ್ಕಾರ ಎಷ್ಟೇ ಶಯಪ್ರಯತ್ನ ಮಾಡಿದ್ರೂ ನಿಯಂತ್ರಣಕ್ಕೆ ಬರುತ್ತಿಲ್ಲ.ಇದೀಗ ನಗರದಲ್ಲಿ ಪೀಕ್ ಅವರ್ ನಲ್ಲಿ ಸಂಚಾರ ದಟ್ಟನೆ ನಿಯಂತ್ರಿಸಲು ಮತ್ತೊಂದು ಪ್ಲಾನ್ ಮಾಡೋಕೆ ಮುಂದಾಗಿದೆ.ಆ ಪ್ಲಾನ್ ಏನಾಂದ್ರೆ ಸ್ಕೂಲ್ ಟೈಮ್ ಚೇಂಜ್. ಹೌದು ಶಾಲಾ ಸಮಯ ಬದಲಾವಣೆಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ನಾಳೆ ಈ ಸಂಬಂಧ ಶಿಕ್ಷಣ ಇಲಾಖೆ ಮೀಟಿಂಗ್ ಮಾಡ್ತಿದೆ ಎಲ್ಲಾ ಜಾತಿಯ ಜನರು ಇರೋ ಏಕೈಕ ಪಕ್ಷ ಇಂಡಿಯಾದಲ್ಲಿ ಕಾಂಗ್ರೆಸ್ ಒಂದೇ : ಸಚಿವ KJ ಜಾರ್ಜ್ ಸಿಲಿಕಾನ್ ಸಿಟಿ ಬೆಳೆದಂತೆ ಟ್ರಾಫಿಕ್ ದಟ್ಟನೆ ಕೂಡ ಹೆಚ್ಚಾಗ್ತಿದೆ. ಸಂಚಾರ ದಟ್ಟನೆಗೆ ಎಷ್ಟೇ ಫ್ಲೈಓವರ್, ಮೆಟ್ರೋ ನಿರ್ಮಿಸಿದ್ರೂ ಟ್ರಾಫಿಕ್ ಕಂಟ್ರೋಲ್ ಗೆ ಬರುತ್ತಿಲ್ಲ.ಇದು ಸರ್ಕಾರಕ್ಕೆ ಬಾರಿ ತಲೆನೋವು ತಂದಿದೆ. ಆದ್ರೆ ಇದೀಗ ಮತ್ತೊಂದು ಸೂತ್ರ ಕಂಡುಹಿಡಿದಿರುವ ಸರ್ಕಾರ ಶಾಲಾ ಸಮಯದ ಅವಧಿಯನ್ನೇ…
ಬೆಂಗಳೂರು : ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಿರೋಧ ಪಕ್ಷದ ಮೈತ್ರಿಯನ್ನು “ಹಾವು ಮತ್ತು ಮುಂಗುಸಿಗಳು’ ಒಟ್ಟಿಗೆ ಸೇರಿದಂತೆ ಎಂದು ಬಣ್ಣಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟ ರಚನೆಗೂ ಮುನ್ನಾ ಇವರು ರಹಸ್ಯವಾಗಿ ಹಿಂದೂ ವಿರೋಧಿ ರಾಜಕೀಯ ಮಾಡುತ್ತಿದ್ದರು. ಜಾತ್ಯತೀತತೆಯ ಬುರ್ಖಾ ಹಾಕಿಕೊಂಡು ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ರಾಜಕಾರಣ ಮಾಡುತ್ತಿದ್ದರು. ಆದರೆ ಇಂದು ಅವರು ಬಹಿರಂಗವಾಗಿ ಸನಾತನ ಸಂಸ್ಕೃತಿ ಮತ್ತು ಸನಾತನ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಶಿವಮೊಗ್ಗ ಗಲಭೆ ಬಗ್ಗೆ ಮಾತನಾಡಿದ ಅವರು, ನಾವು ಯಾರೋ ಅಮಾಯಕರು ಇದ್ದಾರೆ, ಅನ್ಯಾಯ ಆಗಬಾರದು ಎಂದಯ ಲೋಕಲ್ ಮನವಿಯಿಂದ ನಾವು ಮಾಡಿದ್ದೇವೆ ಕಾನೂನು ಪ್ರಕಾರ ಪರಿಶೀಲನೆ ಮಾಡ್ತಾರೆ, ಕಾನೂನು ಚೌಕಟ್ಟಿನಲ್ಲಿ ಮಾಡಲು ಅವಕಾಶ ಇದ್ರೆ ಅದಕ್ಕೊಂದು ಸಬ್ ಕಮಿಟಿಯಿದೆ, ಅಧಿಕಾರಿಗಳು ಮಾಡಬಹುದು ಎಂದಾದರೆ ಶಿಫಾರಸು ಮಾಡ್ತಾರೆ ಆಗ ಸರ್ಕಾರ ಮಾಡುತ್ತದೆ, ನನ್ನ ಮೇಲೂ ಬೇಕಾದಷ್ಟು ಕೇಸ್ ಹಾಕಿದ್ದಾರೆ ಈಗಲೂ ಕೇಸ್ ಗಳು ನಡೆಯುತ್ತಿವೆ ಇವೆಲ್ಲ ರಾಜಕೀಯ ಉದ್ದೇಶದಿಂದ…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಿದ್ದ ಬಂಜಾರ ಭವನವನ್ನು ಉದ್ಘಾಟಿಸಿದರು. https://ainlivenews.com/ven-if-there-is-dirt-in-bjps-house-talking-about-someone-else-is-a-job-dks-sarcas/ ಆ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಬಂಜಾರ ಜನಾಂಗವನ್ನು SCಗೆ ಸೇರಿಸಿದ್ದು ದೇವರಾಜ ಅರಸು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಬೆಂಗಳೂರಿನ ವಸಂತನಗರದಲ್ಲಿ ಬಂಜಾರ ಭವನ ಉದ್ಘಾಟಿಸಿ ಮಾತನಾಡಿದ ಅವರು ‘ಶಿಕ್ಷಣ ಇಲ್ಲದಿದ್ದರೆ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಈ ಸಮುದಾಯಕ್ಕೆ ರೆಸಿಡೆನ್ಷಿಯಲ್ ಸ್ಕೂಲ್ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ಸೇವಾ ಲಾಲ್ ಜೈನ ಪೀಠ ಆಗಿದ್ದು, ಸೇವಾಲಾಲ್ ಜಯಂತಿ ಮಾಡಿದ್ದು ಸಹ ನಮ್ಮ ಸರ್ಕಾರ. ಬಜೆಟ್ನಲ್ಲಿ ಬಂಜಾರ ಸಮುದಾಯ ಅಭಿವೃದ್ಧಿಗೆ 275 ಕೋಟಿ ಕೊಟ್ಟಿದೆ ಎಂದರು. ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಶಾಸಕರಾದ ನೇಮಿರಾಜನಾಯ್ಕ್, ಅವಿನಾಶ್ ಜಾದವ್, ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಸಿದ್ಯಾನಾಯ್ಕ್, ಮಾಜಿ…
ಕಂಪ್ಲಿ..4 ನಗರದ ಶ್ರೀ ಪ್ರಭು ಸ್ವಾಮಿಗಳವರ ಕಲ್ಮಠ ಪ್ರೌಢಶಾಲೆಯ 1994 -95ನೇ ಸಾಲಿನ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಇತ್ತೀಚಿಗೆ ಖಾಸಗಿ ರೆಸ್ಟೋರೆಂಟ್ ನಲ್ಲಿ ಆಯೋಜಿಸಲಾಯಿತು. ಜಯಚಂದ್ರಿಕಾ ಲೋಕೇಶ್ ಸುನಿಲ್ ರಾಜಶೇಖರ್ ಅಶೋಕ್ ಬಸಮ್ಮ ಶರಣಪ್ಪ ಸಜ್ಜನ್ ಹನುಮೇಶ ಬಟಾರಿ ಇವರ ನೇತೃತ್ವದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಾಗೂ ವಿದೇಶದಲ್ಲಿರುವ ವಿದ್ಯಾರ್ಥಿಗಳನ್ನು ಸಮ್ಮಿಲನದಲ್ಲಿ ತೊಡಗಿಸಿ ಕೊಳ್ಳುವದರ ಮೂಲಕ 65 ಹಳೆಯ ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು ಈ ಸಂದರ್ಭದಲ್ಲಿ ಪರಸ್ಪರ ಮಾತುಕತೆ ಯೋಗ ಕ್ಷೇಮ ಕುರಿತು ಚರ್ಚಿಸಲಾಯಿತು. ಬಳಿಕ ಇತ್ತೀಚಿಗಷ್ಟೇ ಭಾರತೀಯ ಸೇನೆಯಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಆಗಮಿಸಿದ ಗೆಳೆಯ ಸುರೇಶ್ ಕಸುಮೂರ್ತಿ ಹಾಗೂ ಬಳ್ಳಾರಿ ಜಿಲ್ಲೆಯ ಪ್ರೌಢಶಾಲೆಯ ವಿಭಾಗದಲ್ಲಿ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ ಪಡೆದ ಡಾಕ್ಟರ್. ಸುನಿಲ್ ಅವರನ್ನು ಎಲ್ಲಾ ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು ಬಳಿಕ ಸಂಸ್ಕೃತಿಕ ಕಾರ್ಯಕ್ರಮ ಅಡಿಯಲ್ಲಿ ಹಾಡು ಮಿಮಿಕ್ರಿ ವ್ಯಕ್ತಿಗತ ಅನುಭವಗಳನ್ನು ಹಂಚಿಕೊಳ್ಳಲಾಯಿತು.. ಇದೇ ಸಂದರ್ಭದಲ್ಲಿ ಮುಂದಿನ ದಿನದಲ್ಲಿ…
ಗದಗ;- ಉದ್ಯಮಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ಅಭಿನವ ಹಾಲಶ್ರೀ ಮುಂಡರಗಿಯನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದರಿಂದ ಮುಂಡರಗಿ ಪೊಲೀಸರಿಂದ ಹಾಲಶ್ರೀ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹಾಲಶ್ರೀ ಯನ್ನ ಮುಂಡರಗಿಯಿಂದ ಹಿರೇಹಡಗಲಿ ಮಠಕ್ಕೆ ಕರೆದುಕೊಂಡ ಹೋಗಿದ್ದ ಪೊಲೀಸರು ಸ್ಥಳ ಮಹಜರು ಕಾರ್ಯ ಮಾಡಿದ್ದಾರೆ. ನಂತರ ಮುಂಡರಗಿ ಪಟ್ಟಣದ ಪಿಡಿಒ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಭಿನವ ಹಾಲಶ್ರೀಗಳು ಶಿರಹಟ್ಟಿ ಮೀಸಲು ಮತಕ್ಷೇತ್ರದ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ. ಶ್ರೀಗಳಿಗೆ 10 ಲಕ್ಷ ರೂ., 40 ಲಕ್ಷ ರೂ. ಹಾಗೂ 50 ಲಕ್ಷ ರೂ.ನಂತೆ ಒಟ್ಟು 1 ಕೋಟಿ ರೂಪಾಯಿ ನೀಡಿರುವುದಾಗಿ ಅಮಾನತಿನಲ್ಲಿರುವ ಪಿಡಿಒ ಸಂಜಯ ಚವಡಾಳ ಸೆ.18ರಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೆ.25ರಂದು ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.