ಧಾರವಾಡ:- ಜಿಲ್ಲೆಯಲ್ಲಿ ಬೀದಿಗೆ ಇಳಿದು ಪಿಡಿಓಗಳಿಂದ ಪ್ರತಿಭಟನೆ ಧರಣಿ ನಡೆದಿದೆ. Pdo ನಾಗರಾಜ ಆತ್ಮಹತ್ಯೆಗೆ ಕಾಣರಾಗಿರುವವರ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ನಗರದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಪ್ರತಿಭಟನೆ ಜರುಗಿದೆ. ಕಳೆದ ನ.29 ರಂದು ಧಾರವಾಡದ ಯರಿಕೊಪ್ಪ ಗ್ರಾ.ಪಂ ಪಿಡಿಓ ಆತ್ಮಹತ್ಯೆ ಯತ್ನಿಸಿದರು. ನಾಗರಾಜ ಗಿನಿಮಾವಲೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎನ್ನಲಾಗಿದೆ. ನಕಲಿ ಆರ್‌ಟಿಐ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಲಾಗಿದೆ. ರಾಜ್ಯ ಪಂಚಾಯತ್ ಅಭಿವೃದ್ಧಿ ಕೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆದಿದೆ. ನಕಲಿ ಆರ್ ಟಿ ಐ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲು ಒತ್ತಾಯ ಮಾಡಲಾಗಿದೆ. ಯರಿಕೊಪ್ಪ ಪಿಡಿಓ ನಾಗರಾಜ ಅವರು ಆರ್‌ಟಿಐ ಕಾರ್ಯಕರ್ತರೊಬ್ಬರು ಹೆಸರು ಹೇಳಿದ್ದಾರೆ. ಹೆಸರು ಹೇಳಿ ವಿಷ ಕುಡಿಯುತ್ತಿರುವಾಗ ವಿಡಿಯೋ ಮಾಡಿದ್ದಾರೆ. ವಿಡಿಯೋ ಅವರು ಅವರ ಸ್ನೇಹಿತರಿಗೆ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಘಟನೆ ನಡೆದು ಇಷ್ಟು ದಿನವಾದರು ಆತ್ಮಹತ್ಯೆಗೆ ಕಾರಣವಾಗಿರುವ ಆರೋಪಿ ಬಂಧನವಾಗಿಲ್ಲ. ಪೊಲೀಸ್ ಇಲಾಖೆಯು…
Author: AIN Author
ಹಾವೇರಿ :-ಜಿಲ್ಲೆ ಹಾನಗಲ್ಲ ತಾಲೂಕಿನ ಹಿರೇಕೌಂಶಿಯಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ರೈತ ಸಂಘದ ಅಧ್ಯಕ್ಷ ಮರೀಗೌಡ ಪಾಟೀಲ ಗಿಡಕ್ಕೆ ನಿರೇರೆದು ಉದ್ಘಾಟಿಸಿದರು. ಹೆಚ್ಚುತ್ತಿರುವ ಕಲ್ಮಶ, ವಿಷಪೂರೀತ ವಾಯು ಹಾಗೂ ಅತೀಯಾದ ರಾಸಾಯನಿಕ ಮಿಶ್ರಿತ ಕೃಷಿಯಿಂದ ಭೂಮಿ ತಾಯಿಯ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮೋಹನಕುಮಾರ ಹೇಳಿದರು. ತಾಲೂಕಿನ ಹಿರೇಕಾಂಶಿಯಲ್ಲಿ ಕೃಷಿ ಇಲಾಖೆ ಹಾಗೂ ಲೋಕಪರಮೇಶ್ವರಿ ರೈತ ಉತ್ಪಾದಕ ಕಂಪನಿ ಸಹಯೋಗದಲ್ಲಿ ಮಂಗಳವಾರ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಕೃಷಿ ಜ್ಞಾನ ಅಪಾರವಾಗಿದೆ. ಆದರೂ ಕೂಡಾ ಆಹಾರದ ಕೊರತೆ ಉಂಟಾಗಿ ಹಸಿರು ಕ್ರಾಂತಿ ಮಾಡಬೇಕಾಗಿ ಬಂತು. ಹೆಚ್ಚಿನ ಇಳುವರಿ ಆಸೆಗೆ ಕ್ರಿಮಿನಾಶಕ, ರಾಸಾಯನಿಕ ಮಿಶ್ರಿತ ಗೊಬ್ಬರ, ಬೀಜ ಬಳಸುತ್ತಿರುವುದರಿಂದ ಭೂಮಿ ಕಲುಷಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ರೈತರು ಸಾಧ್ಯವಾದಷ್ಟು ರಾಸಯನಿಕ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು. ಮಣ್ಣನ್ನು ನಾವು ರಕ್ಷಿಸಿದರೆ…
ಬೆಂಗಳೂರು/ಬೆಳಗಾವಿ:- ಮುಂದಿನ ದಿನಗಳಲ್ಲಿ ಕುಡಿಯುವ ನೀರಿ ಪೂರೈಕೆ, ಗೋಶಾಲೆ, ಮೇವಿನ ಬ್ಯಾಂಕ್ ನಿರ್ವಹಣೆ ಇತರೆ ತುರ್ತು ಬರ ನಿರ್ವಹಣೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ರೂ.ಗಳನ್ನು ಕಳೆದ ಅಕ್ಟೋಬರ್ ಮಾಹೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಎಂದು ಕೃಷಿ ಸಚಿವರಾದ ಚೆಲುವ ನಾರಾಯಣಸ್ವಾಮಿ ಅವರು ಹೇಳಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಗೋವಿಂದರಾಜು ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಆರ್‌ಬಿಐ ನಿರ್ದೇಶನದಂತೆ ರೈತರ ಬೆಳೆ ಸಾಲದ ಮರುಪಾವತಿ ಅವಧಿಯನ್ನು ಅಲ್ಪಾವಧಿಯಿಂದ ಮಧ್ಯಾವಧಿ ಅಥವಾ ದೀರ್ಘಾವಧಿವರೆಗೆ ರೀ ಸ್ಟçಕ್ಚರ್ ಮಾಡಲು ಎಸ್‌ಎಲ್‌ಬಿಸಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಈಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ವರದಿಯನ್ವಯ 46.11 ಲಕ್ಷ ಹೆಕ್ಟೇರ್ ಕೃಷಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿದಂತೆ ಒಟ್ಟು 48.17 ಲಕ್ಷ…
ದಾವಣಗೆರೆ:- ಜಿಲ್ಲೆಯ ವಿನೋಬನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇಲ್ಲಿ ಸುಮಾರು 10 ರಿಂದ 15 ನಾಯಿಗಳಿದ್ದು, ರಸ್ತೆಯಲ್ಲಿ ಬರುತ್ತಿದ್ದಂತೆ ಜನರ ಮೇಲೆ ಎರಗುತ್ತಿವೆ. ಕೆಲವರನ್ನು ಈಗಾಗಲೇ ಕಚ್ಚಿ ಗಾಯಗೊಳಿಸಿದ್ದು, ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಪೋಷಕರು ಹೆದರುತ್ತಿದ್ದಾರೆ. ಹಿಂಡು ಹಿಂಡಾಗಿ ಬರುವ ನಾಯಿಗಳು ರಸ್ತೆಯಲ್ಲಿ ಹೋಗುವವರಿಗೆ ಕಚ್ಚಿ ಗಾಯಗೊಳಿಸುತ್ತಿವೆ. ಭಯದ ವಾತಾವರಣದಲ್ಲಿ ಜನರು ಕಾಲ ಕಳೆಯುವಂತಾಗಿದೆ. ಈಗಾಗಲೇ ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ನಾಯಿಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ. ಬೈಕ್ ಗಳ ಸೀಟ್ ಕವರ್ ಹಾಗೂ ಕಾರ್ ಗಳ ಕವರ್ ಗಳನ್ನು ಕಚ್ಚಿ ಹರಿದು ಹಾಕುತ್ತಿವೆ. ಆದಷ್ಟು ಬೇಗ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರು, ಪುರುಷರೂ ಸಹ ರಸ್ತೆಯಲ್ಲಿ ನಾಯಿಗಳ ತೊಂದರೆಯಿಂದ ರಸ್ತೆಯಲ್ಲಿ ಹೋಗಲು ಭಯಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳನ್ನು ನಾಯಿಗಳು ಬೆನ್ನತ್ತಿಕೊಂಡು ಹೋಗುತ್ತಿರುವುದು ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಮಹಾನಗರ…
ತುಮಕೂರಿನ:- ಗುಂಚಿ ಸರ್ಕಲ್ ಬಳಿಯಿರುವ ಎಸ್ಎನ್ಡಿ ಜ್ಯುವೆಲ್ಲರಿ ಶಾಪ್ನಲ್ಲಿ ತಾಯಿ-ಮಗಳ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್ ಗೆ ಎಂಟ್ರಿಕೊಟ್ಟಿದ್ದ ಖತರ್ನಾಕ್ ಖದೀಮರು, ಚಿನ್ನ ಖರೀದಿಸುವ ನೆಪದಲ್ಲಿ ಬರೊಬ್ಬರಿ 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಘಟನೆ ಜರುಗಿದೆ. ಇವರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖದೀಮರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಈ ಘಟನೆ ಕಳೆದ ಡಿ.2 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇವರ ಕೃತ್ಯ ಸಿಸಿಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಅದರಲ್ಲಿ ತಾಯಿ -ಮಗಳ ಸೋಗಿನಲ್ಲಿ ಎಂಟ್ರಿ ಕೊಟ್ಟಿರುವ ಓರ್ವ ಯುವತಿ ಹಾಗೂ ಮಹಿಳೆ. ಚಿನ್ನದ ಸರ ಖರೀದಿ ಮಾಡುವುದಾಗಿ ಚಿನ್ನದ ಸರಗಳನ್ನು ವಿಕ್ಷೀಸುತ್ತಿದ್ದಾರೆ. ಬಳಿಕ ಮಾತಿನ ಮೂಲಕ ಜ್ಯುವೆಲ್ಲರಿ ಶಾಪ್ ಮಾಲೀಕನ ಗಮನ ಬೇರೆಡೆ ಸೆಳೆದ ಓರ್ವ ಯುವತಿ ಹಾಗೂ ಮಹಿಳೆ, ಸರ ಕದ್ದು, ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಎಸ್ಕೇಪದದ ಆಗಿದ್ದಾರೆ.…
ಬೆಂಗಳೂರು : ದೇಶಕ್ಕಾಗಿ ಉಗ್ರರ ವಿರುದ್ಧದ ಹೋರಾಟದಲ್ಲಿ ವೀರ ಮರಣ ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಕೊಟ್ಟ ವಾಗ್ದಾನದಂತೆ ಸಹಾಯಾರ್ಥವಾಗಿ 50 ಲಕ್ಷ ಚೆಕ್ ಇಂದು ಜಿಲ್ಲಾಡಳಿತದ ಮೂಲಕ ಹಸ್ತಾಂತರ ಮಾಡಿದೆ. ಕ್ಯಾಪ್ಟನ್ ಪ್ರಾಂಜಲ್ ಅಂತಿಮ ದರ್ಶನ ಪಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹುತಾತ್ಮ ವೀರ ಸೇನಾನಿ ಕುಟುಂಬಕ್ಕೆ 50 ಲಕ್ಷ ರಾಜ್ಯ ಸರ್ಕಾರದಿಂದ ಸಹಾಯಾರ್ಥವಾಗಿ ನೀಡುವುದಾಗಿ ಘೋಷಣೆ ಮಾಡಿದ್ದರು. ಕೊಟ್ಟ ಮಾತಿನಂತೆ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ್, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆ ನಿರ್ದೆಶಕರು ಶಶಿಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಬಳಿಯ ನಂದನವನ ಬಡಾವಣೆಯಲ್ಲಿರುವ ಹುತಾತ್ಮ ಯೋಧ ಪ್ರಾಂಜಲ್ ಪೋಷಕರ ನಿವಾಸಕ್ಕೆ ಆಗಮಿಸಿ ರಾಜ್ಯ ಸರ್ಕಾರದ ಪರವಾಗಿ ಚೆಕ್ ಹಸ್ತಾಂತರ ಮಾಡಿದ್ದಾರೆ. ಪ್ರಾಂಜಲ್ ತಾಯಿ ಅನುರಾಧ ಮತ್ತು ಪತ್ನಿ ಅದಿತಿ ರವರೆಗೆ ತಲಾ 25 ಲಕ್ಷ ಚೆಕ್ ಹಸ್ತಾಂತರ…
ಪೀಣ್ಯ ದಾಸರಹಳ್ಳಿ:’ ಸಂಸ್ಕೃತಿಯ ಲೋಕಕ್ಕೆ ಪುಸ್ತಕಗಳು ತಾಯಿ ಬೇರಿದ್ದಂತೆ. ಈ ‘ಸಿಕ್ಕು’ ಕೃತಿಯಲ್ಲಿ ವ್ಯಕ್ತಿಯ ಭಾವನೆ, ಮಾನಸಿಕ ಸಂಘರ್ಷಗಳ ಸೂಕ್ಷ್ಮತೆಯನ್ನು ‘ಸಿಕ್ಕು’ ಕಾದಂಬರಿಯಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ’ ಎಂದು ಕಾದಂಬರಿಗಾರ್ತಿ ಸಾಯಿಸುತೆ ತಿಳಿಸಿದರು. ಎಂಟನೇ ಮೈಲಿ ಹತ್ತಿರದ ಅಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಸನಾತನಿ ವೇದಿಕೆ ಮತ್ತು ಧ್ಯಾನ ಪ್ರಕಾಶನ ವತಿಯಿಂದ ಆಯೋಜಿಸಲಾದ ಕಾದಂಬರಿಗಾರ್ತಿ ಮಮತಾ ವಾರನಹಳ್ಳಿ ಅವರ ‘ಸಿಕ್ಕು’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು. ವಿಸ್ಮಯ ಜಗತ್ತಿನ ಮನುಷ್ಯ ಸಂಬಂಧಗಳ ತೊಳಲಾಟವನ್ನು ಮನಮುಟ್ಟುವಂತೆ ಮಮತಾ ಅವರು ಕಟ್ಟಿಕೊಟ್ಟಿದ್ದಾರೆ’ ಎಂದರು. ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ’ ಮಹಿಳೆ ತಮ್ಮ ಭಾವನೆಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾಳೆ. ಸಾಹಿತ್ಯ, ಸಂಗೀತ ಕೂಡ ಹೆಣ್ಣಿನ ಸಾಮರ್ಥ್ಯದಿಂದ ಬರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಸಿಕ್ಕು, ಒಗಟುಗಳು ಇರುತ್ತವೆ. ಅದನ್ನು ವಿವೇಚನೆ ಮತ್ತು ವ್ಯವಧಾನದಿಂದ ಬಿಡಿಸಿಕೊಂಡರೆ ಬದುಕು ಸುಂದರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. ಶಾಸಕ ಎಸ್. ಮುನಿರಾಜು ಮಾತನಾಡಿ’ ವಿದ್ಯಾಭ್ಯಾಸದ ಜೊತೆಗೆ ಒಳ್ಳೊಳ್ಳೆ ಪುಸ್ತಕಗಳನ್ನು ಓದುವಂತಹ, ಬರೆಯುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು…
ಕಣ್ಣಿನ ಸುತ್ತ ಕೆಂಪು ಬಣ್ಣ,,ಕಡುಗಪ್ಪು ದಪ್ಪ ಹುಬ್ಬುಗಳು, ಕತ್ತಲೇ ಬಟ್ಟೆಯಾದಂಥ ನಿಲುವಂಗಿ, ಕೆಂಪು ಚೂಪು ಕೋಡುಗಳು ಒಂದೆಡೆ ಇಷ್ಟು ಭೀಕರ ರೂಪದ ರಕ್ಕಸರ ಗುಂಪು…. ಇನ್ನೊಂದೆಡೆ ಶಾಂತ ಭಾವವನ್ನು ಸೂಸುವ, ಬಿಳಿಯುಡುಗೆಯಲ್ಲಿ ನಗುನಗುತ್ತ ನಿಂತಿರುವವ, ನೆತ್ತಿಯ ಮೇಲೂ ಬಿಳಿಯಾದ ಹೂತೊಟ್ಟ ಗಂಧರ್ವರು. ಯಾವುದಿದು ಗಂಧರ್ವ-ರಕ್ಕಸರ ಮುಖಾಮುಖಿ? ಈ ಪ್ರಶ್ನೆಗೆ ಉತ್ತರ JioCinemaಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಇದೆ. ‘ಬಿಗ್‌ಬಾಸ್ ಮನೆ ಈ ಕ್ಷಣದಿಂದ ಬಿಗ್‌ಬಾಸ್ ಲೋಕ ಎಂಬ ಕಾಲ್ಪನಿಕ ಜಗತ್ತಾಗಿ ಬದಲಾಗುತ್ತದೆ. ಈ ಲೋಕದಲ್ಲಿ ಗಂದರ್ವರು ಹಾಗೂ ರಾಕ್ಷಸರು ಎಂಬ ಎರಡು ಗುಂಪುಗಳಿವೆ’ ಎಂದು ಬಿಗ್‌ಬಾಸ್ ಘೋಷಿಸಿದಾಗ ಎಲ್ಲ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ. ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್ ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡು, ಕೋಡುಗಳುಳ್ಳ ಕಡುಗಪ್ಪು-ಕೆಂಪು ಉಡುಪು ತೊಟ್ಟ ರಕ್ಕಸರಾಗಿ ಬದಲಾದರೆ, ವಿನಯ್, ನಮ್ರತಾ, ವರ್ತೂರು, ತುಕಾಲಿ ಸಂತೋಷ್ ಎಲ್ಲರೂ ಬಿಳಿಯುಡುಗೆ ತೊಟ್ಟು ಗಂಧರ್ವರಾಗಿದ್ದಾರೆ. ಕಾರ್ತಿಕ್, ಅಡುಗೆ ಮನೆಯಲ್ಲಿ ನೀರು ಚೆಲ್ಲಿ, ಬೆಡ್‌ರೂಮಿನಲ್ಲಿ ಬಟ್ಟೆಗಳನ್ನೆಲ್ಲ ಚೆಲ್ಲಿ ಕಿರುಚಾಡುತ್ತ ಕುಣಿದಾಡಿದ್ದಾರೆ. ಸಂಗೀತಾ, ವಿನಯ್…
ಬೆಳಗಾವಿ:- ಮುಸ್ಲಿಮರಿಗೆ ಸಂಪತ್ತು ಹಂಚುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷದ ಸಂಪತ್ತು ಇದ್ದರೆ ಹಂಚಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ. ಟಿಪ್ಪು ಅಂದರೆ ಸಿದ್ದರಾಮಯ್ಯನವರಿಗೆ ಬಹಳ ಪ್ರೀತಿ. ಅವರ ಹೇಳಿಕೆ ದೇಶ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಟಿಪ್ಪು ಮೇಲೆ ಅತಿಯಾದ ಪ್ರೀತಿ ತೋರಿಸಿ ಹಿಂದೆ ಏನಾಯ್ತು? ಎಂಬುದನ್ನು ಅವರು ಮನಗಾಣಬೇಕು ಎಂದು ಟೀಕಿಸಿದರು. ಹಿಂದೂಗಳನ್ನ ಎರಡನೇ ದರ್ಜೆಯ ಪ್ರಜೆಗಳ ರೀತಿ ನೋಡುತ್ತಿದ್ದಾರೆ. ಎಲ್ಲರಿಗೂ ಸಮಾನತೆ ಇರಬೇಕು. ಟಿಪ್ಪು ಜಯಂತಿ, ಶಾದಿ ಭಾಗ್ಯ, ಮುಸ್ಲಿಂ ವಿವಾಹಕ್ಕೆ ಧನ ಸಹಾಯ ಈ ರೀತಿ ಕಾರ್ಯಕ್ರಮಗಳನ್ನ ತಂದರು. ಮುಸ್ಲಿಂಮರನ್ನ ವೋಟಿನ ಗಾಳವಾಗಿ ಕಾಂಗ್ರೆಸ್ ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು. ಬಿಜೆಪಿ ಕಾರ್ಯಕರ್ತನ ಮೇಲೆ ಚಾಕು ಇರಿತ ಪ್ರಕರಣ ಕುರಿತು ಮಾತನಾಡಿದ ಅಶೋಕ್, ನಾನು ಸಂಜೆ ಪೃಥ್ವಿರಾಜ್ ಅವರನ್ನು ಭೇಟಿಯಾಗುತ್ತೇನೆ. ಘಟನೆಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಪಕ್ಕಾ ಇದೆ ಎಂದು ಆರೋಪಿಸಿದರು.
ಬಿಗ್‌ಬಾಸ್ ಮನೆಯಲ್ಲಿ ಹೀಗೊಂದು ಫ್ಲವರ್ ವರ್ಸಸ್ ಫೈಯರ್ ಟೆಸ್ಟ್ ನಡೆದಿದೆ. ಇದರ ಪರಿಣಾಮವಾಗಿ ವಿನಯ್-ಸಂಗೀತಾ ಮಧ್ಯ ಮತ್ತೆ ಹಳೆಯ ಕಿಡಿ ಹೊತ್ತಿಕೊಂಡಿರುವಂತಿದೆ. ಅದರ ಸುಳಿವು JioCinema ಬಿಡುಗಡೆ ಮಾಡಿರುವ ದಿನದ ಮೊದಲ ಪ್ರೋಮೊದಲ್ಲಿಯೇ ಕಾಣಿಸಿಕೊಂಡಿದೆ. ಮನೆಯ ಸ್ಪರ್ಧಿಗಳಿಗೆ ಬಿಗ್‌ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಒಂದಿಷ್ಟು ಬಿಳಿ ಮತ್ತೊಂದಿಷ್ಟು ಕಪ್ಪು ಹೂಗಳನ್ನು ಇಡಲಾಗಿದೆ. ಒಬ್ಬೊಬ್ಬ ಸದಸ್ಯನೂ, ಮನೆಯೊಳಗೆ ತಮ್ಮ ದೃಷ್ಟಿಯಲ್ಲಿ ಅತ್ಯಂತ ಧನಾತ್ಮಕ ವ್ಯಕ್ತಿ ಯಾರು ಎಂದು ಆರಿಸಿ ಅವರಿಗೆ ಬಿಳಿ ಹೂವು ನೀಡಬೇಕು. ಹಾಗೆಯೇ ಯಾರು ಅತ್ಯಂತ ಋಣಾತ್ಮಕ ವ್ಯಕ್ತಿ ಎಂಬುದನ್ನೂ ಆರಿಸಿ ಅವರಿಗೆ ಕಪ್ಪು ಹೂವು ನೀಡಬೇಕು. ಈ ಟಾಸ್ಕ್‌ನಲ್ಲಿ ಬೆಳ್ಳಗಿನ ಹೂಗಳನ್ನು ಪಡೆದುಕೊಂಡವರ ಮುಖದಲ್ಲಿ ಹೂವಿನಂಥದ್ದೇ ನಗು ಅರಳಿದರೆ, ಕಪ್ಪು ಹೂವು ಪಡೆದವರ ಕಣ್ಣುಗಳಲ್ಲಿ ಅಸಮಧಾನದ ಹೊಗೆ ಎದ್ದಿದೆ. ಅದರಲ್ಲಿಯೂ ವಿಶೇಷವಾಗಿ ಸಂಗೀತಾ, ವಿನಯ್ ಅವರಿಗೆ ಕಪ್ಪುಹೂವು ನೀಡಿ, ‘ಮೊದಲಿಂದಾನೂ ನೆಗೆಟಿವಿಟಿಯ ರೂಟೇ ನೀವು’ ಎಂದು ಆರೋಪಿಸಿದ್ದಾರೆ. ಅದಕ್ಕೆ ಠಕ್ಕರ್ ನೀಡಿದ ವಿನಯ್, ‘ನಾನು ನೆಗೆಟಿವಿಟಿಗೆ ಬೇರು. ಆದರೆ…