ಧಾರವಾಡ:- ಜಿಲ್ಲೆಯಲ್ಲಿ ಬೀದಿಗೆ ಇಳಿದು ಪಿಡಿಓಗಳಿಂದ ಪ್ರತಿಭಟನೆ ಧರಣಿ ನಡೆದಿದೆ. Pdo ನಾಗರಾಜ ಆತ್ಮಹತ್ಯೆಗೆ ಕಾಣರಾಗಿರುವವರ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ನಗರದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಪ್ರತಿಭಟನೆ ಜರುಗಿದೆ.
ಕಳೆದ ನ.29 ರಂದು ಧಾರವಾಡದ ಯರಿಕೊಪ್ಪ ಗ್ರಾ.ಪಂ ಪಿಡಿಓ ಆತ್ಮಹತ್ಯೆ ಯತ್ನಿಸಿದರು. ನಾಗರಾಜ ಗಿನಿಮಾವಲೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎನ್ನಲಾಗಿದೆ. ನಕಲಿ ಆರ್ಟಿಐ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಲಾಗಿದೆ.
ರಾಜ್ಯ ಪಂಚಾಯತ್ ಅಭಿವೃದ್ಧಿ ಕೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆದಿದೆ. ನಕಲಿ ಆರ್ ಟಿ ಐ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲು ಒತ್ತಾಯ ಮಾಡಲಾಗಿದೆ. ಯರಿಕೊಪ್ಪ ಪಿಡಿಓ ನಾಗರಾಜ ಅವರು ಆರ್ಟಿಐ ಕಾರ್ಯಕರ್ತರೊಬ್ಬರು ಹೆಸರು ಹೇಳಿದ್ದಾರೆ. ಹೆಸರು ಹೇಳಿ ವಿಷ ಕುಡಿಯುತ್ತಿರುವಾಗ ವಿಡಿಯೋ ಮಾಡಿದ್ದಾರೆ. ವಿಡಿಯೋ ಅವರು ಅವರ ಸ್ನೇಹಿತರಿಗೆ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಘಟನೆ ನಡೆದು ಇಷ್ಟು ದಿನವಾದರು ಆತ್ಮಹತ್ಯೆಗೆ ಕಾರಣವಾಗಿರುವ ಆರೋಪಿ ಬಂಧನವಾಗಿಲ್ಲ. ಪೊಲೀಸ್ ಇಲಾಖೆಯು ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದೆ. ಈ ಕೂಡಲೇ ಪ್ರಕರಣ ಗಂಭೀರತೆಯನ್ನು ಪೊಲೀಸ್ ಇಲಾಖೆ ತಿಳಿದುಕೊಳ್ಳಬೇಕು. ನಾಗರಾಜ ಆತ್ಮಹತ್ಯೆ ಯತ್ನಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಎಲ್ಲಿಯವರೆಗೆ ಅವರ ಬಂಧನ ಆಗುವುದಿಲ್ಲ ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಪಂಚಾಯತ್ ಅಭಿವೃದ್ಧಿ ಕೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರಾಜು ವಾರದ ಎಚ್ಚರಿಕೆ ನೀಡಿದ್ದಾರೆ.