ನಾಳೆಯಿಂದ ಇಂಗ್ಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಚುಟುಕು ಮಾದರಿಯಲ್ಲಿ ಯಶಸ್ಸು ಕಂಡಿರುವ ಹರ್ಮನ್‌ಪ್ರೀತ್ ಕೌರ್ ಪಡೆ ಗೆಲುವಿನ ಓಟ ಮುಂದುವರೆಸುವ ಲೆಕ್ಕಾಚಾರದಲ್ಲಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದಲ್ಲಿ ತಂಡ ಯಶಸ್ವಿ ಕ್ರಿಕೆಟ್ ವರ್ಷವನ್ನು ಕಂಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ, ಬಾಂಗ್ಲಾದೇಶ ವಿರುದ್ಧದ 2-1 ಅಂತರದಲ್ಲಿ ಸರಣಿ ಜಯಿಸಿತ್ತು. ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ಒಳಗೊಂಡ ತ್ರಿಕೋನ ಸರಣಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಇನ್ನೊಂದೆಡೆ, ಇಂಗ್ಲೆಂಡ್ ವನಿತೆಯರು ತವರಿನಲ್ಲಿ ಶ್ರೀಲಂಕಾ ವಿರುದ್ಧ 1-2 ಅಂತರದಲ್ಲಿ ಸೋತ ನಿರಾಶೆ ನೀಗಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ತಂಡವು ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಾಖಲೆೆ ಹೊಂದಿದೆ. ಐಸಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಭಾರತವು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 9 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆಂಗ್ಲ ವನಿತೆಯರು ಇದೇ ಭರವಸೆಯಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಇದಲ್ಲದೇ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ 27 ಬಾರಿ ಮುಖಾಮುಖಿಯಾಗಿದ್ದು ಕೇವಲ…
Author: AIN Author
ಬೆಂಗಳೂರು:- ನನ್ನ ಹೇಳಿಕೆ ತಿರುಚಿದ ತೇಜಸ್ವಿ ಸೂರ್ಯ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜಕೀಯ ದುರುದ್ದೇಶದಿಂದ ಈ ವಿಡಿಯೋವನ್ನು ತಿರುಚಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ, ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಸಂಸದನಲ್ಲಿ ಕಿಂಚಿತ್ತು ಮಾನ ಮರ್ಯಾದೆ ಏನಾದರೂ ಉಳಿದುಕೊಂಡಿದ್ದರೆ ತಾನು ಮಾಡಿರುವ ತಪ್ಪು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವೆಂದು ತಿಳಿಸಿದ್ದು ಮಾತ್ರವಲ್ಲ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದು ತಿಳಿಸಿದ್ದೇನೆ. ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಪ್ರಾಂಜಲ್ ಅವರ ಕುಟುಂಬಕ್ಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕಂಪ್ಲಿ: ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಲಯ ಪೊಲೀಸ್ ಅಧೀಕ್ಷಕ ಎಂ.ಎನ್.ಶಶಿಧರ ಅವರ ನೇತೃತ್ವದಲ್ಲಿ ಚಿತ್ರದುರ್ಗ ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯುಂಜಯ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಪಿ.ಐ ಗಳಾದ ಸಂಗಮೇಶ,ಮಹ್ಮದ ರಫಿ ಅವರ ಸಿಬ್ಬಂದಿಗಳ ತಂಡದಿಂದ ಮಂಗಳವಾರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ದೂರಿನ ಮೇಲೆ ಕಂಪ್ಲಿ ನಿವಾಸಿ ಬೋಯಾ ಮಾರುತಿ,ಅರಣ್ಯ ಅಧಿಕಾರಿ ಮನೆ ಹಾಗೂ ಪ್ರಾದೇಶಿಕ ವಲಯ ಉಪವಲಯ ಅರಣ್ಯಾಧಿಕಾರಿ ಕಚೇರಿ ಗಂಗಾವತಿ ಕೊಪ್ಪಳ ಜಿಲ್ಲೆ ಆರೋಪಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ಜರುಗಿತು. ಬೆಳ್ಳೆಂಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸೂರ್ಯೋದಯಕ್ಕೂ ಮುನ್ನವೇ ಫೀಲ್ಡ್‌ಗೆ ಇಳಿದಿದ್ದ ಲೋಕಾಯುಕ್ತ ಪೊಲೀಸರು ರಾಜ್ಯದ ಉದ್ದಗಲಕ್ಕೂ ಹಲವು ಕಡೆ ದಾಳಿ ಮಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗಳನ್ನು ಪರಿಶೀಲಿಸಿದರು. ಭ್ರಷ್ಟಾಚಾರ ಆರೋಪ ಸಂಬಂಧ…
ಆನೇಕಲ್:- ಬಾಸ್ಕೆಟ್ ಬಾಲ್ ಆಟವಾಡುವಾಗ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಆನೇಕಲ್ ತಾಲ್ಲೂಕಿನ ಎಸ್ಎಫ್ಎಸ್ ಶಾಲೆಯಲ್ಲಿ ನಡೆದಿದೆ. ಚಾರ್ವಿ(16) ಮೃತ ಬಾಲಕಿ. ಮದ್ಯಾಹ್ನ ಸ್ಪೋರ್ಟ್ಸ್ ತರಗತಿಯಲ್ಲಿ ಆಟವಾಡುವಾಗ ಮುಂಬಾಗಕ್ಕೆ ಕುಸಿದು ಬಿದ್ದು ಮೂಗಿನಿಂದ ರಕ್ತಸ್ರಾವವಾಗಿದೆ. ಕೂಡಲೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮದ್ಯೆ ಸಾವನ್ನಪ್ಪಿದ್ದಾಳೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಘಟನೆ ಜರುಗಿದೆ.
ಆನೇಕಲ್:- ಚಾಕುವಿನಿಂದ ಚುಚ್ಚಿ ತಂದೆಯಿಂದಲೇ ಮಗನ ಬರ್ಬರ ಹತ್ಯೆ ನಡೆದಿರುವ ಘಟನೆ ಆನೇಕಲ್ ಪಟ್ಟಣ ಸಮೀಪದ ನಾರಾಯಣಪುರದಲ್ಲಿ ಜರುಗಿದೆ. ತಂದೆ ಯಲ್ಲಪ್ಪನಿಂದ ಕೃತ್ಯ ನಡೆದಿದೆ. ಸುರೇಶ್(35) ಕೊಲೆಯಾದ ವ್ಯಕ್ತಿ. ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಇಂದು ಸಹ ಕುಡಿದು ಬಂದು ಗಲಾಟೆ ಮಾಡಿದ್ದ. ಕುಡಿದು ಬಂದು ತಾಯಿಯನ್ನ ಹಿಡಿದು ಸುರೇಶ್ ಹೊಡೆಯುತ್ತಿದ್ದ. ಗಲಾಟೆ ಬಿಡಿಸಲು ಬಂದ ತಂದೆಯ ಮೇಲೂ ಹಲ್ಲೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಸುರೇಶ್ ಕತ್ತಿಗೆ ತಂದೆ ಹಾಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಸಾವನ್ನಪ್ಪಿದ್ದಾನೆ. ಆನೇಕಲ್ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.
ಕಲಬುರಗಿ;-ಸೆಂಟ್ರಲ್ ರೈಲ್ವೇಯ ಸೊಲ್ಲಾಪುರ ವಿಭಾಗವು ಕಲಬುರಗಿಯಲ್ಲಿ ಎರಡನೇ ಪಿಟ್‌ಲೈನ್‌ಗೆ ಟೆಂಡರ್ ಆಹ್ವಾನಿಸಿದೆ ಅಂತ ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜಾಧವ್ ನೆನೆಗುದ್ದಿಗೆ ಬಿದ್ದಿರುವ ಪಿಟ್ ಲೈನ್ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಮಾತ್ರವಲ್ಲ 19.5 ಕೋಟಿ ರೂ ಟೆಂಡರ್ ಗೆ ಇದೀಗ ಅನುಮೋದನೆ ನೀಡಿದೆ ಅಂತ ಹೇಳಿದ್ದಾರೆ. ಈಗಾಗಲೇ ಒಂದು ಪಿಟ್ ಲೈನ್ ಹೊಂದಿದ್ದು ಕಲಬುರಗಿ-ಕೊಲ್ಹಾಪುರ ರೈಲು ನಿರ್ವಹಣೆ ಮಾಡಲಾಗುತ್ತಿದೆ, ಎರಡನೇ ಪಿಟ್ ಲೈನ್ ಪೂರ್ಣಗೊಂಡ ನಂತರ ಕಲಬುರಗಿ ನಿಲ್ದಾಣದಿಂದ ಹೆಚ್ಚಿನ ರೈಲುಗಳನ್ನು ಪ್ರಾರಂಭಿಸಬಹುದು.ಹೀಗಾಗಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವರವರಿಗೆ ನಾನು ಧನ್ಯವಾದ ಹೇಳ್ತೇನೆ ಅಂದಿದ್ದಾರೆ..
ಮಹದೇವಪುರ:- ದೇಶಾದ್ಯಂತ ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ವಿದ್ಯುತ್ ಚಾಲಿತ ವಾಹನ ತಯಾರಿಕೆಯಲ್ಲಿ ಹೊಸ ಹೊಸ ಕಂಪನಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಇಂದು ಬೆಂಗಳೂರು ಓಲ್ಡ್ ಮದ್ರಾಸ್ ರಸ್ತೆಯ ಹೊಸಕೋಟೆ ಟೋಲ್ ಬಳಿ ನೂತನವಾಗಿ ತೆರೆದಿರುವ ಬೆಂಗಳೂರಿನ ಮೊದಲನೇಯ ಶಾಖೆ ಒಮೇಗ ಸೆಇಕಿ ಮೊಬೈಲಿಟಿ’ಸ್ ಎಲೆಕ್ಟ್ರಿಕ್ ಶೋರೂಂ ಅನ್ನು ಮಹದೇವಪುರ ಕ್ಷೇತ್ರದ ಮಾಜಿ ಶಾಸಕರು, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಉದ್ಘಾಟನೆ ಮಾಡಿ ಶುಭಹಾರೈಸಿದರು. ಬೆಂಗಳೂರಿನಲ್ಲಿ ಮೊದಲ ಶಾಕೆ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಒಮೇಗ ಸೆಇಕಿ ಮೊಬೈಲಿಟಿ ಸಂಸ್ಥಾಪಕ ಅಧ್ಯಕ್ಷರಾದ ಉದಯ್ ನಾರಾಂಗ್, ಇಂದು ದೇಶಾದ್ಯಂತ ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ,ಪೆಟ್ರೋಲ್ ಹಾಗೂ ಡೀಸಲ್ ವಾಹನಗಳಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ…
ಬೆಳಗಾವಿ:-ಪಂಚಮಸಾಲಿ 2A ಮೀಸಲಾತಿ ಹೋರಾಟ ವಿಚಾರವಾಗಿ ಪಂಚಮಸಾಲಿ ಮುಖಂಡರ ಸಭೆ ಕುತೂಹಲ ಕೆರಳಿಸಿದೆ. ಬೆಳಗಾವಿಯ ಮಯೂರ ಬೆಳಗಾಂ ಪ್ರೆಸಿಡೆನ್ಸಿ ಹೊಟೆಲ್ ನಲ್ಲಿ ಸಭೆ ನಡೆದಿದ್ದು, ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಜರುಗಿದೆ. ಸಭೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ್, ಶಾಸಕರಾದ ವಿನಯ್ ಕುಲಕರ್ಣಿ, ಅರವಿಂದ ಬೆಲ್ಲದ, ಎಂ ವಾಯ್ ಪಾಟೀಲ್, ಬಿ ಆರ್ ಪಾಟೀಲ್, ಸಿದ್ದು ಸವದಿ, ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್, ಪಂಚಮಸಾಲಿ ಮುಖಂಡರಾದ ಕಿರಣ್ ಸಾಧುನವರ, ವಿ ಐ ಪಾಟೀಲ್ ಸೇರಿದಂತೆ, ಲಕ್ಷ್ಮೀ ಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ್ ಸೇರಿ ಅನೇಕರು ಭಾಗಿಯಾಗಿದ್ದಾರೆ.
ಹುಬ್ಬಳ್ಳಿ: ಮುಸ್ಲೀಮರಿಗೆ ದೇಶದ ಸಂಪತ್ತು ಹಂಚುತ್ತೇವೆ ಎಂದು ಸಿಎಮ್ ಹೇಳಿಕೆ ವಿಚಾರ ಒಳ್ಳೆಯದು ಎಂದು ಅಬಕಾರಿ ಸಚಿವ ಆರ್ . ಬಿ. ತಿಮ್ಮಾಪುರ ಹೇಳಿದರು. ನಗರದಲ್ಲಿ ಮಂಗಳವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮುಖ್ಯಮಂತ್ರಿಗಾದ ಸಿದ್ದರಾಮಯ್ಯ ಸಾಹೆಬ್ರು ಹೇಳಿದ್ದು ನೂರಕ್ಕೆ ನೂರು ಸತ್ಯವಿದೆ ಮುಸ್ಲೀಮರು ನಮ್ಮ ನಾಡಿನವರು, ಈ ನೆಲದ ಮೇಲೆ ಅವರಿಗೂ ಹಕ್ಕಿದೆ ಎಂದ ಅವರು ಮುಸ್ಲಿಂ ಸಮುದಾಯದವರಿಗೆ ಹಕ್ಕು ಕೊಡುವುದರಲ್ಲಿ ತಪ್ಪೇನಿದೆ? ಭಾರತೀಯ ಜನತಾ ಪಕ್ಷದ ವರು ಹಿಂದೂ ಓಲೈಕೆ ಮಾಡ್ತಾರೆ, ಮುಸ್ಲೀಮರ ಗಲಾಟೆ ಹಚ್ತಾರೆ ನಾನು, ಸಿದ್ದರಾಮಯ್ಯ ಹಿಂದೂಗಳು ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದುತ್ವ ಬಳಸುತ್ತಿದ್ದಾರೆ ನಾನು ಜನರ ಕಲ್ಯಾಣಕ್ಕಾಗಿ ಕಾರ್ಯ ಮಾಡತಾ ಇದ್ದೇವೆ ಎಂದರು. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ಆಗಲಿ, ಇನ್ನು ಸದನ ಸುಮ್ಮನೆ ಹಾಳಾಗಬಾರದು ಉತ್ತರ ಕರ್ನಾಟಕದ ಹಲವಾರು ಸಮಸ್ಯೆಗಳಿವೆ ವಿರೋಧ ಪಕ್ಷ ನಾಯಕರಿಗೆ ವಿನಂತಿ ಮಾಡುತ್ತೇವೆ ಬೇರೆಬೇರೆ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಗದ್ದಲದಲ್ಲಿ ಅಧಿವೇಶನ…
ಹಾವೇರಿ :- ಹೊಸದಾಗಿ ಬಂದಿರುವ ಹಾಸ್ಟೆಲ್ ವಾರ್ಡನ್ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಮಕ್ಕಳಿಗೆ ಥಳಿಸಿದ ಆರೋಪ ಒಂದು ಕೇಳಿ ಬರುತ್ತಿದೆ. ಮುಗ್ಧ ಮುಕ್ಕಳನ್ನ ಮನಸೊಯಿಚ್ಚೆ ಥಳಿಸಿರುವ ಆರೋಪ ಹಿನ್ನಲೆ ಪ್ರತಿಭಟನೆ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಘಟನೆ ಜರುಗಿದೆ. ವಸತಿ ಶಾಲೆಯ ಮಕ್ಕಳಿಗೆ ನಾನಾ ಕಾರಣಗಳಿಂದ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬರುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಹಲವು ಫೋಟೋಗಳು ಲಭ್ಯವಾಗಿದೆ ಥಳಿಸಿರುವ ಕಾರಣ ಮಕ್ಕಳಿಗೆ ಮೈತುಂಬಾ ರಕ್ತದ ಗಾಯಗಳು ಆಗಿದೆ. ಮೂಲಭೂತ ಸೌಕರ್ಯಗಳಿಂದ ವಂಚಿಸಿ, ಊಟ ಕೇಳಿದ ಸಮಸ್ಯೆಗಳನ್ನು ಹೇಳಿಕೊಂಡ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಹಲ್ಲೆ ಮಾಡಿದ ವಸತಿ ನಿಲಯದ ಮೇಲ್ವಿಚಾರಕಿ, ಶಿಕ್ಷಕಿ ಹುದ್ದೆಯಿಂದ ಅಮಾನತು ಮಾಡಬೇಕೆಂದು ಒತ್ತಾಯ ಮಾಡಲಾಗಿದೆ. ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ನೀಡಿರುವ ಶಾಲಾ ವಿದ್ಯಾರ್ಥಿಗಳು, ಇಂದು ವಸತಿ ಶಾಲೆಯ ಬಳಿ ಬಂದ್ ಮಾಡಿ ಹೋರಾಟ ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳನ್ನು ಈ…