ಮಹದೇವಪುರ:- ದೇಶಾದ್ಯಂತ ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ವಿದ್ಯುತ್ ಚಾಲಿತ ವಾಹನ ತಯಾರಿಕೆಯಲ್ಲಿ ಹೊಸ ಹೊಸ ಕಂಪನಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅದೇ ರೀತಿ ಇಂದು ಬೆಂಗಳೂರು ಓಲ್ಡ್ ಮದ್ರಾಸ್ ರಸ್ತೆಯ ಹೊಸಕೋಟೆ ಟೋಲ್ ಬಳಿ ನೂತನವಾಗಿ ತೆರೆದಿರುವ ಬೆಂಗಳೂರಿನ ಮೊದಲನೇಯ ಶಾಖೆ ಒಮೇಗ ಸೆಇಕಿ ಮೊಬೈಲಿಟಿ’ಸ್ ಎಲೆಕ್ಟ್ರಿಕ್ ಶೋರೂಂ ಅನ್ನು ಮಹದೇವಪುರ ಕ್ಷೇತ್ರದ ಮಾಜಿ ಶಾಸಕರು, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಉದ್ಘಾಟನೆ ಮಾಡಿ ಶುಭಹಾರೈಸಿದರು.
ಬೆಂಗಳೂರಿನಲ್ಲಿ ಮೊದಲ ಶಾಕೆ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಒಮೇಗ ಸೆಇಕಿ ಮೊಬೈಲಿಟಿ ಸಂಸ್ಥಾಪಕ ಅಧ್ಯಕ್ಷರಾದ ಉದಯ್ ನಾರಾಂಗ್, ಇಂದು ದೇಶಾದ್ಯಂತ ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ,ಪೆಟ್ರೋಲ್ ಹಾಗೂ ಡೀಸಲ್ ವಾಹನಗಳಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಬೆಲೆಯೂ ಹೆಚ್ಚು ಎನ್ನುವ ಕೂಗುಗಳು ಕೇಳಿ ಬರುತ್ತವೆ. ಹೀಗಿರುವಾಗ ವಿದ್ಯುತ್ ಚಾಲಿತ ವಾಹನಗಳು ಇಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಜನರಿಗೆ ಉತ್ತಮ ಬೆಲೆಯಲ್ಲಿ ವಾಹನಗಳು ಸಿಗಲಿದೆ ಎಂದರು.
ಪೆಟ್ರೋಲ್, ಡೀಸೆಲ್ ದರವು ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ರಸ್ತೆಗಿಳಿಯುತ್ತಿರುವ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಲೇ ಇದೆ. ದ್ವಿಚಕ್ರ, ಕಾರುಗಳಷ್ಟೇ ಅಲ್ಲ, ಸರಕು ಸಾಗಣೆ ಮಾಡುವ ಇ-ವಾಹನಗಳೂ ಜಾಸ್ತಿಯಾಗುತ್ತಿವೆ ಎಂದರು.
ಈ ವೇಳೆ ಶೋರೂಂ ಮಾಲಿಕರಾದ ಕೃಷ್ಣೇಗೌಡ, ಮುಖಂಡರಾದ ನಟರಾಜ್, ಶ್ರೀಧರ್, ಪಾಪಣ್ಣ, ಸುರೇಶ್ ಬಾಬು, ಯಲ್ಲಪ್ಪ ಸೇರಿದಂತೆ ಸಂಸ್ಥೆಯ ಆಡಳಿತ ಮುಖ್ಯಸ್ಥರು, ಸಿಬ್ಬಂದಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.