ಹಾವೇರಿ :- ಹೊಸದಾಗಿ ಬಂದಿರುವ ಹಾಸ್ಟೆಲ್ ವಾರ್ಡನ್ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಮಕ್ಕಳಿಗೆ ಥಳಿಸಿದ ಆರೋಪ ಒಂದು ಕೇಳಿ ಬರುತ್ತಿದೆ.
ಮುಗ್ಧ ಮುಕ್ಕಳನ್ನ ಮನಸೊಯಿಚ್ಚೆ ಥಳಿಸಿರುವ ಆರೋಪ ಹಿನ್ನಲೆ ಪ್ರತಿಭಟನೆ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಘಟನೆ ಜರುಗಿದೆ. ವಸತಿ ಶಾಲೆಯ ಮಕ್ಕಳಿಗೆ ನಾನಾ ಕಾರಣಗಳಿಂದ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬರುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಹಲವು ಫೋಟೋಗಳು ಲಭ್ಯವಾಗಿದೆ
ಥಳಿಸಿರುವ ಕಾರಣ ಮಕ್ಕಳಿಗೆ ಮೈತುಂಬಾ ರಕ್ತದ ಗಾಯಗಳು ಆಗಿದೆ. ಮೂಲಭೂತ ಸೌಕರ್ಯಗಳಿಂದ ವಂಚಿಸಿ, ಊಟ ಕೇಳಿದ ಸಮಸ್ಯೆಗಳನ್ನು ಹೇಳಿಕೊಂಡ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಹಲ್ಲೆ ಮಾಡಿದ ವಸತಿ ನಿಲಯದ ಮೇಲ್ವಿಚಾರಕಿ, ಶಿಕ್ಷಕಿ ಹುದ್ದೆಯಿಂದ ಅಮಾನತು ಮಾಡಬೇಕೆಂದು ಒತ್ತಾಯ ಮಾಡಲಾಗಿದೆ.
ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ನೀಡಿರುವ ಶಾಲಾ ವಿದ್ಯಾರ್ಥಿಗಳು, ಇಂದು ವಸತಿ ಶಾಲೆಯ ಬಳಿ ಬಂದ್ ಮಾಡಿ ಹೋರಾಟ ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳನ್ನು ಈ ರೀತಿ ಥಳಿಸಿ ಶಿಕ್ಷೆ ನೀಡಿದರೆ ಖಂಡಿತ ಇದು ಸರಿ ಅಲ್ಲ ಎಂಬುದಾಗಿ ಹಲವಾರು ಜನರು ಹೇಳುತ್ತಿದ್ದಾರೆ. ರಾಣೇಬೆನ್ನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ಇನ್ನು ಮೇಲೆ ಈ ಕುರಿತು ವಿಚಾರಣೆ ನಡೆಯಲಿದೆ.
ಮಕ್ಕಳ ಮೊಣಕಾಲು, ಬೆನ್ನು, ಸೊಂಟ ಕೈ ಹೀಗೆ ಹಲವಾರು ಜಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ಒಬ್ಬ ವಿದ್ಯಾರ್ಥಿಯ ಕಣ್ಣಿನ ಮೇಲೂ ಸಹ ಗಾಯವಾಗಿದೆ