ಬೆಳಗಾವಿ:-ಪಂಚಮಸಾಲಿ 2A ಮೀಸಲಾತಿ ಹೋರಾಟ ವಿಚಾರವಾಗಿ ಪಂಚಮಸಾಲಿ ಮುಖಂಡರ ಸಭೆ ಕುತೂಹಲ ಕೆರಳಿಸಿದೆ. ಬೆಳಗಾವಿಯ ಮಯೂರ ಬೆಳಗಾಂ ಪ್ರೆಸಿಡೆನ್ಸಿ ಹೊಟೆಲ್ ನಲ್ಲಿ ಸಭೆ ನಡೆದಿದ್ದು, ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ಜರುಗಿದೆ.
ಸಭೆಯಲ್ಲಿ ಸಚಿವರಾದ ಶಿವಾನಂದ ಪಾಟೀಲ್, ಶಾಸಕರಾದ ವಿನಯ್ ಕುಲಕರ್ಣಿ, ಅರವಿಂದ ಬೆಲ್ಲದ, ಎಂ ವಾಯ್ ಪಾಟೀಲ್, ಬಿ ಆರ್ ಪಾಟೀಲ್, ಸಿದ್ದು ಸವದಿ, ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್, ಪಂಚಮಸಾಲಿ ಮುಖಂಡರಾದ ಕಿರಣ್ ಸಾಧುನವರ, ವಿ ಐ ಪಾಟೀಲ್ ಸೇರಿದಂತೆ, ಲಕ್ಷ್ಮೀ ಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ್ ಸೇರಿ ಅನೇಕರು ಭಾಗಿಯಾಗಿದ್ದಾರೆ.