ಕಂಪ್ಲಿ: ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಲಯ ಪೊಲೀಸ್ ಅಧೀಕ್ಷಕ ಎಂ.ಎನ್.ಶಶಿಧರ ಅವರ ನೇತೃತ್ವದಲ್ಲಿ ಚಿತ್ರದುರ್ಗ ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯುಂಜಯ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಪಿ.ಐ ಗಳಾದ ಸಂಗಮೇಶ,ಮಹ್ಮದ ರಫಿ ಅವರ ಸಿಬ್ಬಂದಿಗಳ ತಂಡದಿಂದ ಮಂಗಳವಾರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ದೂರಿನ ಮೇಲೆ ಕಂಪ್ಲಿ ನಿವಾಸಿ ಬೋಯಾ ಮಾರುತಿ,ಅರಣ್ಯ ಅಧಿಕಾರಿ ಮನೆ ಹಾಗೂ ಪ್ರಾದೇಶಿಕ ವಲಯ ಉಪವಲಯ ಅರಣ್ಯಾಧಿಕಾರಿ ಕಚೇರಿ ಗಂಗಾವತಿ ಕೊಪ್ಪಳ ಜಿಲ್ಲೆ ಆರೋಪಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ಶೋಧ ಕಾರ್ಯ ಜರುಗಿತು.
ಬೆಳ್ಳೆಂಬೆಳಿಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು
ರಾಜ್ಯದ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸೂರ್ಯೋದಯಕ್ಕೂ ಮುನ್ನವೇ ಫೀಲ್ಡ್ಗೆ ಇಳಿದಿದ್ದ ಲೋಕಾಯುಕ್ತ ಪೊಲೀಸರು ರಾಜ್ಯದ ಉದ್ದಗಲಕ್ಕೂ ಹಲವು ಕಡೆ ದಾಳಿ ಮಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳ ಮನೆ, ಕಚೇರಿಗಳನ್ನು ಪರಿಶೀಲಿಸಿದರು. ಭ್ರಷ್ಟಾಚಾರ ಆರೋಪ ಸಂಬಂಧ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು. ಆದರಂತೆ ಗಂಗಾವತಿ ಅರಣ್ಯ ಅಧಿಕಾರಿ ಬಿ.ಮಾರುತಿ ಕಂಪ್ಲಿ ನಿವಾಸ ಹಾಗೂ ಗಂಗಾವತಿ ಕಚೇರಿ, ಸಂಬಂಧಿಕರ ನಿವಾಸದ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಬೋಯಾ ಮಾರುತಿ, ಅರಣ್ಯ ಅಧಿಕಾರಿ ಡಿಆರ್ ಎಫ್ ಒ ಪ್ರಾದೇಶಿಕ ವಲಯ ಉಪವಲಯ ಅರಣ್ಯಾಧಿಕಾರಿ ಕಚೇರಿ ಗಂಗಾವತಿ ಅರಣ್ಯ ಇಲಾಖೆ, ಕೊಪ್ಪಳ ಜಿಲ್ಲೆ ಆರೋಪಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಶೋಧ ನಡೆದಿದೆ.
ಕಂಪ್ಲಿ ನಿವಾಸದಲ್ಲಿ ಪತ್ತೆಯಾದ ಆಸ್ತಿ ವಿವರ
ಎರಡೂವರೆ ಲಕ್ಷ ನಗದು ಹಣ
250 ಗ್ರಾಂ ಬಂಗಾರದ ಆಭರಣ
ಒಂದೂವರೆ ಕೆ.ಜಿ ಬೆಳ್ಳಿಯ ಆಭರಣ
ಒಂದು ಕಾರು ಒಂದು ಬೈಕ್ 15 ಎಕರೆ ಜಮೀನು 6 ನಿವೇಶನ ಹೊಂದಿರುವ ಬಗ್ಗೆ ಮಾಹಿತಿ
75 ಲಕ್ಷ 19 ಸಾವಿರ ಮೌಲ್ಯ ಅಕ್ರಮ ಆಸ್ತಿ ಜೊತೆಗೆ 104% ಆಸ್ತಿ ಹೆಚ್ಚಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳ ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.