ಕಲಬುರಗಿ;-ಸೆಂಟ್ರಲ್ ರೈಲ್ವೇಯ ಸೊಲ್ಲಾಪುರ ವಿಭಾಗವು ಕಲಬುರಗಿಯಲ್ಲಿ ಎರಡನೇ ಪಿಟ್ಲೈನ್ಗೆ ಟೆಂಡರ್ ಆಹ್ವಾನಿಸಿದೆ ಅಂತ ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ..
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜಾಧವ್ ನೆನೆಗುದ್ದಿಗೆ ಬಿದ್ದಿರುವ ಪಿಟ್ ಲೈನ್ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಮಾತ್ರವಲ್ಲ 19.5 ಕೋಟಿ ರೂ ಟೆಂಡರ್ ಗೆ ಇದೀಗ ಅನುಮೋದನೆ ನೀಡಿದೆ ಅಂತ ಹೇಳಿದ್ದಾರೆ. ಈಗಾಗಲೇ ಒಂದು ಪಿಟ್ ಲೈನ್ ಹೊಂದಿದ್ದು ಕಲಬುರಗಿ-ಕೊಲ್ಹಾಪುರ ರೈಲು ನಿರ್ವಹಣೆ ಮಾಡಲಾಗುತ್ತಿದೆ,
ಎರಡನೇ ಪಿಟ್ ಲೈನ್ ಪೂರ್ಣಗೊಂಡ ನಂತರ ಕಲಬುರಗಿ ನಿಲ್ದಾಣದಿಂದ ಹೆಚ್ಚಿನ ರೈಲುಗಳನ್ನು ಪ್ರಾರಂಭಿಸಬಹುದು.ಹೀಗಾಗಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವರವರಿಗೆ ನಾನು ಧನ್ಯವಾದ ಹೇಳ್ತೇನೆ ಅಂದಿದ್ದಾರೆ..