ಆನೇಕಲ್:- ಚಾಕುವಿನಿಂದ ಚುಚ್ಚಿ ತಂದೆಯಿಂದಲೇ ಮಗನ ಬರ್ಬರ ಹತ್ಯೆ ನಡೆದಿರುವ ಘಟನೆ ಆನೇಕಲ್ ಪಟ್ಟಣ ಸಮೀಪದ ನಾರಾಯಣಪುರದಲ್ಲಿ ಜರುಗಿದೆ. ತಂದೆ ಯಲ್ಲಪ್ಪನಿಂದ ಕೃತ್ಯ ನಡೆದಿದೆ.
ಸುರೇಶ್(35) ಕೊಲೆಯಾದ ವ್ಯಕ್ತಿ. ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಇಂದು ಸಹ ಕುಡಿದು ಬಂದು ಗಲಾಟೆ ಮಾಡಿದ್ದ.
ಕುಡಿದು ಬಂದು ತಾಯಿಯನ್ನ ಹಿಡಿದು ಸುರೇಶ್ ಹೊಡೆಯುತ್ತಿದ್ದ. ಗಲಾಟೆ ಬಿಡಿಸಲು ಬಂದ ತಂದೆಯ ಮೇಲೂ ಹಲ್ಲೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಸುರೇಶ್ ಕತ್ತಿಗೆ ತಂದೆ ಹಾಕಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಸಾವನ್ನಪ್ಪಿದ್ದಾನೆ. ಆನೇಕಲ್ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.