ಮೈಸೂರು: ಹಸು ಮೇಲೆ ಹುಲಿ ದಾಳಿ ನಡೆಸಿದ ಘಟನೆ ಹೆಚ್ ಡಿ ಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ. ಬೆಲೆಬಾಳುವ ಹಸು ಕಳೆದುಕೊಂಡ ರೈತ ಕಣ್ಣೀರಿಟ್ಟಿದ್ದಾರೆ. ಗ್ರಾಮದ ಸಮೀಪ ಇತ್ತೀಚೆಗೆ ಹುಲಿ ದಾಳಿಗೆ ಮಗುವೊಂದು ಬಲಿಯಾಗಿತ್ತು.
Congress Guarantee: ಬಿಗ್ ಶಾಕ್.! 5 ಉಚಿತ ಗ್ಯಾರಂಟಿ ಕ್ಯಾನ್ಸಲ್: ಕೈ ಶಾಸಕನ ಸ್ಫೋಟಕ ಹೇಳಿಕೆ
ಇದೀಗ ಗ್ರಾಮದ ಬಸವರಾಜಪ್ಪ ಎಂಬುವವರಿಗೆ ಸೇರಿದ ಹಸು ಬಲಿಯಾಗಿದ್ದು, ಅಕ್ಕಪಕ್ಕದ ಗ್ರಾಮದ ರೈತರಲ್ಲಿ ಆತಂಕ ಮನೆಮಾಡಿದೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಕೂಡಲೇ ಹುಲಿ ಸೆರೆಯಿಡಿಯುವಂತೆ ಆಗ್ರಹಿಸಿದ್ದಾರೆ.