ರಾಮನಗರ: ಇಂದಿನಿಂದ ಲೋಕಸಭಾ ಚುನಾವಣಾ(Loksabha) ರಣಕಣ ರಂಗೇರಲಿದ್ದು, ಮೊದಲ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಇಂದಿನಿಂದ ನಾಮಪತ್ರ(Nomination) ಸಲ್ಲಿಕೆ ಮಾಡಲಾಗುವುದು. ಈ ನಡುವೆ ನಾಮಪತ್ರ ಸಲ್ಲಿಕೆಗೂ ಮುನ್ನ ಡಿ.ಕೆ ಸುರೇಶ್ ತಮ್ಮ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಿಮಗೆ ಗೊತ್ತೇ..? ಶುಗರ್, ಕೊಲೆಸ್ಟ್ರಾಲ್, ತೂಕ ಕಂಟ್ರೋಲ್ʼನಲ್ಲಿರಲು ಹೆಸರು ಕಾಳು ಸೇವಿಸಬೇಕಂತೆ..!
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ.ಕೆ.ಸುರೇಶ್ ಇಂದು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದು ಅದಕ್ಕೂ ಮುನ್ನ ತಮ್ಮ ಮನೆ ದೇವರು ಸ್ವಕ್ಷೇತ್ರ ಕನಕಪುರದ ಕೆಂಕೇರಮ್ಮ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಡಿ.ಕೆ ಸುರೇಶ್ ಸಹೋದರ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಉಪಸ್ಥಿತರಿದ್ದರು.