ತಾಲೂಕಿನ ಕೊಂಚಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶುಕ್ರವಾರ ಬೆಳಿಗ್ಗೆ 10.30ರ ವೇಳೆಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಸ್ಥಳದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೀಲಾವತಿ ಉದ್ಘಾಟಿಸಿ ಮಾತನಾಡಿ ಇಂದು ನಿಮ್ಮ ಹತ್ತಿರ ಆರೋಗ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಲು ಬಂದಿದ್ದಾರೆ.
ಎಲ್ಲರೂ ತಪ್ಪದಂತೆ ಶಿಬಿರದ ಸದುಪಯೋಗವನ್ನು ಪಡಿಸಿಕೊಳ್ಳಿ ಬಿಪಿ ಶುಗರ್ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವುದು ಕೂಲಿ ಕೆಲಸಕ್ಕೆ ಬರಬೇಡಿ ಆದಷ್ಟು ಆರೋಗ್ಯದ ಕಡೆ ಹೆಚ್ಚಿನ ಜಾಗೃತಿಯನ್ನು ವಹಿಸಿರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್ ಕಾಸಿಂ ನಿರ್ಜಲೀಕರಣ ಶಾಖಾಘಾತದ ಲಕ್ಷಣ ಮತ್ತು ಚಿಕಿತ್ಸೆ, ಓ ಆರ್ ಎಸ್ ಜೀವ ದ್ರಾವಣ ತಯಾರಿಕೆ ಮತ್ತು ಬೆಳಸುವ ವಿಧಾನ ಹಾಗೂ ಕೈ ತೊಳೆಯುವ ವಿಧಾನ ಶುದ್ಧವಾದ ಕುಡಿಯುವ ನೀರನ್ನು ಬಳಕೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ ಸಮುದಾಯ ಅಧಿಕಾರಿ ಷಡಕ್ಷರಪ್ಪ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಗಂಗಮ್ಮ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯತಿ ಸದಸ್ಯರು ನರೇಗಾ ಕೂಲಿಕಾರ್ಮಿಕರು ಇದ್ದರು.