ಬೈರ್ಸ್ಟೋವ್-ಶಶಾಂಕ್ ಬ್ಯಾಟಿಂಗ್ ಅಬ್ಬರಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ಮಂಕಾಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನಿಗದಿತ 20 ಓವರ್ ಗಳಿಗೆ 261 ರನ್ ಗಳಿಗೆ ಕಟ್ಟಿ ಹಾಕಿತು.
ಸೊಂಟದ ಈ ಐದು ಅಂಗಗಳಲ್ಲಿ ನೋವು ಕಂಡ್ರೆ ಹೃದಯಾಘಾತದ ಮುನ್ಸೂಚನೆ!
ಬಳಿಕ ರನ್ ಚೇಸಿಂಗ್ ನಲ್ಲಿ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ ಕೇವಲ 18.4 ಓವರ್ ಗಳಲ್ಲಿ 262 ರನ್ ಗಳಿಸುವ ಮೂಲಕ ಎದುರಾಳಿ ವಿರುದ್ಧ ಗೆಲುವು ದಾಖಲಿಸಿತು. ಐಪಿಎಲ್ ನಲ್ಲಿ ತಂಡವೊಂದು ರನ್ ಚೇಸ್ ನಲ್ಲಿ 250 ರನ್ ಗಳಿಗೂ ಅಧಿಕ ರನ್ ಗಳಿಸಿದ ದಾಖಲೆಯನ್ನು ಪಂಜಾಬ್ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ. ಇದಷ್ಟೇ ಅಲ್ಲದೇ ಅತ್ಯಂತ ದೊಡ್ಡ ಮೊತ್ತದ ಟಾರ್ಗೆಟ್ ಬೆನ್ನಟ್ಟಿ ಗೆಲುವು ದಾಖಲಿಸಿದ ತಂಡ ಎಂಬ ದಾಖಲೆಯನ್ನೂ ಪಂಜಾಬ್ ನಿರ್ಮಿಸಿದೆ
ಕೆಕೆಆರ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 224 ರನ್ ಚೇಸ್ ಮಾಡಿದ್ದ ದಾಖಲೆಯನ್ನು ಪಂಜಾಬ್ ತಂಡ ಮುರಿದಿದೆ.
ಪಂಜಾಬ್ ಕಿಂಗ್ಸ್ ಪರ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೇರ್ಸ್ಟೋ ಕೇವಲ 5.6 ಓವರ್ ಗಳಲ್ಲಿ ಮೊದಲ ವಿಕೆಟ್ಗೆ 93 ರನ್ ಗಳಿಸುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡಿದರು
ಆ ಮೂಲಕ 2024ರ ಐಪಿಎಲ್ನಲ್ಲಿ ಪಂಜಾಬ್ ಮೂರನೇ ಗೆಲುವು ದಕ್ಕಿಸಿಕೊಂಡಿತು. ಕೆಕೆಆರ್ ನೀಡಿದ್ದ 262 ರನ್ಗಳ ಬೃಹತ್ ಮೊತ್ತವನ್ನು ಪಂಜಾಬ್ ಕಿಂಗ್ಸ್ ತಂಡ ಇನ್ನು 8 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಸ್ಪೋಟಕ ಬ್ಯಾಟ್ ಮಾಡಿದ ಜಾನಿ ಬೈರ್ಸ್ಟೋವ್ (108*), ಶಶಾಂಕ್ ಸಿಂಗ್ (68* ಹಾಗೂ ಪ್ರಭ್ಸಿಮ್ರನ್ (54) ಪಂಜಾಬ್ನ ಯಶಸ್ವಿ ಚೇಸಿಂಗ್ನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು
ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಭ್ಸಿಮ್ರನ್ ಸಿಂಗ್ ಹಾಗೂ ಜಾನಿ ಬೈರ್ಸ್ಟೋವ್ ಮುರಿಯದ ಮೊದಲನೇ ವಿಕೆಟ್ಗೆ 93 ರನ್ ಗಳಿಸಿ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಆರಂಭದಲ್ಲಿ ಅಬ್ಬರಿಸಿದ್ದ ಪ್ರಭ್ಸಿಮ್ರನ್ ಕೇವಲ 20 ಎಸೆತಗಳಲ್ಲಿ 54 ರನ್ ಸಿಡಿಸಿ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟು ರನ್ಔಟ್ಗೆ ಬಲಿಯಾಗಿದ್ದರು.
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಕೊನೆಯವರೆಗೂ ಬ್ಯಾಟ್ ಮಾಡಿದ್ದ ಜಾನಿ ಬೈರ್ಸ್ಟೋವ್ ಕೆಕೆಆರ್ ಬೌಲರ್ಗಳನ್ನು ಬೆವರಿಳಿಸಿದ್ದರು. ಇವರು ಎದರುಸಿದ್ದ ಕೇವಲ 48 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 108 ರನ್ ಸಿಡಿಸಿದರು. ಆ ಮೂಲಕ ಪಂಜಾಬ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.