ಬೆಂಗಳೂರು:- ಅತ್ಯಾಚಾರಕ್ಕೆ ಒಳಾಗದ ಸಂತ್ರಸ್ತೆಯನ್ನೇ ಮದುವೆಯಾದ ಆರೋಪಿಯ ಕೇಸ್ ಅನ್ನು ಹೈಕೋರ್ಟ್ ರದ್ದು ಮಾಡಿದೆ. ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ಈ ಆದೇಶ ಮಾಡಿದೆ. ಅತ್ಯಾಚಾರ ಘಟನೆ ನಡೆದಾಗ ಸಂತ್ರಸ್ತೆಯು ಅಪ್ರಾಪ್ತೆಯಾಗಿದ್ದರು. ಸಂತ್ರಸ್ತೆ ಲೈಂಗಿಕ ಸಂಭೋಗಕ್ಕೆ ಗುರಿಯಾಗಿದ್ದಾಳೆ ಎಂಬುದಾಗಿ ವೈದ್ಯಕೀಯ ದಾಖಲೆಗಳು ಬಹಿರಂಗಪಡಿಸುತ್ತವೆ. ಇದೀಗ ವಿಚಾರಣೆಗೆ ಹಾಜರಾಗಿರುವ ಸಂತ್ರಸ್ತೆ, ಆರೋಪಿಯನ್ನು ಮದುವೆಯಾಗುವುದಾಗಿ ದೃಢೀಕರಿಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ ಆರೋಪಿ ಸಹ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯದ ವಿಚಾರಣೆ ವೇಳೆ ಪ್ರಕರಣದ ಸಾಕ್ಷಿಯಾಗಿರುವ ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ನುಡಿದ್ದಾರೆ. ಪ್ರಾಸಿಕ್ಯೂಷನ್‌ನ್ನು ಬೆಂಬಲಿಸುವ ಯಾವೊಂದು ಸಾಕ್ಷ್ಯವನ್ನೂ ಪಾಟಿ ಸವಾಲಿನಲ್ಲಿ ಸಂತ್ರಸ್ತೆ ದಾಖಲಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರೋಪಿ ವಿರುದ್ಧದ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ಮುಂದುವರಿದರೆ, ಆತ ಸೆರೆಮನೆ ವಾಸದಲ್ಲಿ ಮುಂದುವರಿಯಲಿದ್ದು, ಹೆಚ್ಚಿನ ಸಂಕಟ ಅನುಭವಿಸುತ್ತಾನೆ. ಜೊತೆಗೆ, ಸಂತ್ರಸ್ತೆಗೆ ನ್ಯಾಯ ಸಿಗುವುದಕ್ಕಿಂತ ಹೆಚ್ಚಿನ ದುಃಖ ಒದಗುತ್ತದೆ. ನ್ಯಾಯದಾನದೊಂದಿಗೆ ಪ್ರಕರಣ ಅಂತ್ಯವಾಗುವುದಿಲ್ಲ. ಬದಲಿಗೆ ಕಾನೂನಿನ ಪ್ರಕ್ರಿಯೆ…
Author: AIN Author
ಬೆಂಗಳೂರು:- ಇನ್ಮುಂದೆ ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ತಾಜಾ ಮೀನು ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದು ಹಾಗೂ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುವ ಉದ್ದೇಶದಿಂದ ಸರ್ಕಾರ ಮತ್ಸ್ಯವಾಹಿನಿ ವಾಹನ ಆರಂಭಿಸಿದೆ. ಸದ್ಯ 150 ವಾಹನ ಸೇವೆಯನ್ನು ಮೀನುಗಾರಿಕಾ ಇಲಾಖೆ ಆರಂಭಿಸಿದ್ದು, ಮುಂದೆ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಈ 150 ಮತ್ಸ್ಯವಾಹಿನಿ ವಾಹನಗಳು ಬೆಂಗಳೂರು ನಗರದಲ್ಲಿ ಸಂಚರಿಸಲಿದ್ದು, ಬೆಳಗ್ಗೆ ತಾಜಾ ಮೀನು, ಸಂಜೆ ಮೀನು ಖಾದ್ಯಗಳ ಮಾರಾಟ ಮಾಡಲಾಗುತ್ತದೆ. ವಾಹನ ಭದ್ರತಾ ಠೇವಣಿ 2 ಲಕ್ಷ ರೂ ಹಾಗೂ ಮಾಸಿಕ 3000 ರೂ. ಬಾಡಿಗೆಯನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಮೀನು ಖಾದ್ಯ ಮಾಡುವ ವ್ಯವಸ್ಥೆ ಕೂಡ ಇದ್ದು, ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೆ 150 ವಾಹನಗಳನ್ನು ಸರ್ಕಾರ ವಿತರಿಸುವ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ…
ತೆಲಂಗಾಣ: ಪಂಚ ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ತೆಲಂಗಾಣ ರಾಜ್ಯದ ಜಗ್ತಿಯಾಲ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ತೆಲಂಗಾಣ ರಾಜ್ಯದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಶೇ. 4 ಮೀಸಲಾತಿಯನ್ನು ಪರಿಶಿಷ್ಟ ಜಾತಿ, https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮರು ಹಂಚಿಕೆ ಮಾಡೋದಾಗಿ ಭರವಸೆ ನೀಡಿದ್ದಾರೆ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಕ್ಕೆ ಮೀಸಲಾತಿ ಮರು ಹಂಚಿಕೆ ಮಾಡಬೇಕಿದೆ. ಹೀಗಾಗಿ, ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ನೀಡಲಾಗಿರುವ ಶೇ. 4 ಮೀಸಲಾತಿಯನ್ನು ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
ಬೆಂಗಳೂರು:- ನಿಗಮ- ಮಂಡಳಿ ನೇಮಕ ಕುರಿತು ಸುರ್ಜೆವಾಲ ಜೊತೆಗೆ ಸಭೆ ನಡೆದಿದ್ದು, ಸಭೆಯ ಬಳಿಕ DCM ಡಿಕೆಶಿ ಮಹತ್ವದ ಮಾಹಿತಿ ನೀಡಿದ್ದಾರೆ. ಪಕ್ಷದ ಸಂಘಟನೆ, ನಿಗಮ ಮಂಡಳಿ ನೇಮಕ ಸೇರಿದಂತೆ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ನೀಡುವ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. ಶಾಸಕರಿಗೆ ಜವಾಬ್ದಾರಿ ನೀಡುವ ಬಗ್ಗೆ ಮೊದಲ ಸುತ್ತಿನ ಚರ್ಚೆ ಆಗಿದ್ದು, ಈಗಿನ ಪಟ್ಟಿಯನ್ನು ಕೇಂದ್ರ ನಾಯಕರು ಪರಿಶೀಲಿಸಲಿದ್ದಾರೆ. ನಂತರ ಎರಡನೇ ಸುತ್ತಿನ ಚರ್ಚೆ ಆಗಲಿದೆ.” ಈ ಪ್ರಕ್ರಿಯೆ ಪೂರ್ಣಗೊಳ್ಳಲು ಎಷ್ಟು ಸಮಯಾವಕಾಶ ಬೇಕು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, “ಪಂಚರಾಜ್ಯ ಚುನಾವಣೆ ನಡೆಯುತ್ತಿದ್ದು, ಮುಖ್ಯಮಂತ್ರಿಗಳು ಹಾಗೂ ನಾನು ಪ್ರಚಾರಕ್ಕೆ ಹೋಗಬೇಕಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಮಾಡುತ್ತೇವೆ” ಎಂದರು. ಗೃಹಸಚಿವರು ಮುನಿಸಿಕೊಂಡಿದ್ದಾರೆ ಎಂಬ ಬಗ್ಗೆ ಚರ್ಚೆ ಆಗುತ್ತಿದೆಯಲ್ಲ ಎಂದು ಕೇಳಿದಾಗ, “ಗೃಹಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿಯಿಂದ ಬಂದು ಚರ್ಚೆ ಮಾಡಿದ್ದಾರೆ. ಯಾರು ಯಾಕೆ ಮುನಿಸಿಕೊಳ್ಳುತ್ತಾರೆ” ಎಂದು ಕೇಳಿದರು. ಲೋಕಸಭೆ ಚುನಾವಣೆ ಸಂಬಂಧದ…
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಜನರೇ ನೀವು ಕಾವೇರಿ ನೀರನ್ನ ಕುಡಿಯುತ್ತಿದ್ದರೆ, ಈ ಸ್ಟೋರಿ ಮಿಸ್ ಮಾಡ್ದೆ ನೋಡಿ. ಕರುನಾಡಿನ ಜೀವನಾಡಿ ಎಂದ್ರೆ ಅದು ಕಾವೇರಿ. ಈ ಕಾವೇರಿ ನದಿಯನ್ನು ಕಲುಷಿತಗೊಳಿಸುವ ಕೆಲಸಕ್ಕೆ ಕೊಳ್ಳೇಗಾಲ ನಗರಸಭೆ ಮುಂದಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಹೊರಭಾಗದಲ್ಲಿರುವ ಒಳಚರಂಡಿ ಮತ್ತು ಕೊಳಚೆ ನೀರು ಶುದ್ದಿಕರಣ ಘಟಕದಲ್ಲಿ ನೀರು ಸರಿಯಾಗಿ ಶುದ್ಧೀಕರಣವಾಗ್ತಿಲ್ಲ. ಈ ಅಶುದ್ದ ನೀರನ್ನೂ ಕುಪ್ಪಂ ಕಾಲುವೆ ಮುಖಾಂತರ ಹರಿಯಬಿಡಲಾಗ್ತಿದೆ. ಈ ನೀರು ರೈತರ ಜಮೀನುಗಳಿಗಳಿಗಷ್ಟೇ ಅಲ್ಲದೇ ದಾಸನಪುರ,ಹರಳೆ ಗ್ರಾಮದ ಮೂಲಕ ನೇರವಾಗಿ ಕಾವೇರಿ ನದಿಯ ಒಡಲನ್ನು ಸೇರುತ್ತಿದೆ.ಕಾವೇರಿ ಜನರ ಜೀವನಾಡಿಯಾಗಿದ್ದು,ಕಾವೇರಿ ನದಿಯ ಪಾವಿತ್ರ್ಯತೆ ಕಾಪಾಡಬೇಕಾದ ಜನಪ್ರತಿನಿಧಿಗಳು,ಅಧಿಕಾರಿಗಳ ಬೇಜವಾಬ್ದಾರಿ,ನಿರ್ಲಕ್ಷ್ಯತನದಿಂದ ಕಾವೇರಿ ಮಲಿನವಾಗ್ತಿದ್ದಾಳೆಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇನ್ನು ಈ ಕಾವೇರಿ ನದಿ ಹಲವು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಆಸರೆಯಾಗಿದೆ.ಪ್ರಮುಖವಾಗಿ ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳಿಗೆ ಈ ನೀರನ್ನೂ ಕುಡಿಯುವ ಉದ್ದೇಶದಿಂದ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಈಗಾಗ್ಲೇ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿ ಕುಡಿಯುವ ನೀರಿಗಾಗಿ ನೆರೆ ರಾಜ್ಯ ತಮಿಳುನಾಡು…
ಬಾಗಲಕೋಟೆ: ಬಿಜೆಪಿಯ ಬಹಳಷ್ಟು ಅತೃಪ್ತ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಇಲ್ಲಿ ಬಂದ ಮೇಲೆ ಅವರ ಸ್ಥಾನಮಾನದ ಬಗ್ಗೆಯೂ ಆಲೋಚನೆ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ” ಅನೇಕ ಬಿಜೆಪಿ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ, ಅವರ ಕ್ಷೇತ್ರದಲ್ಲಿ ಸಹಮತ ಇರುವ ಬಗ್ಗೆ ಚರ್ಚೆ ಮಾಡುತ್ತೇವೆ. ಬರುವವರನ್ನ ಕರೆತಂದಾಗ ಯಾರಿಗೂ ಅನ್ಯಾಯ ಮತ್ತು ತೊಂದರೆಯಾಗದಂತೆ ನೋಡಿಕೊಳ್ಳಬೇಕು ” ಎಂದರು. ಈಗ ಎಷ್ಟು ಜನ ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ” ನಾವು ಗೋಲಿ ಹೊಡೆಯುವಾಗ ಎರಡು ರೀತಿಯಿಂದ ಹೊಡೆಯುತ್ತೇವೆ. ಒಂದು ಚರ್ರಿಗೋಲಿ ಅಂತ ಇರುತ್ತೇ ಅದು ಛಿದ್ರವಾಗಿರುತ್ತೇ, https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಅದು ಎಷ್ಟು ಮಂದಿಗೆ ಬಡಿಯುತ್ತೋ ಗೊತ್ತಿಲ್ಲ. ಫೈರಿಂಗ್ನಲ್ಲಿ ಎರಡು ರೀತಿ ಇರುತ್ತೇ, ಯಾವಾಗ ಯಾವ ಸಂದರ್ಭದಲ್ಲಿ ಯಾವ ಫೈರಿಂಗ್ ಹೊಡೆಯುತ್ತೇವೆ ಗೊತ್ತಿಲ್ಲ ಎಂದರು. ಫೈರಿಂಗ್ ಮಾಡೋದೆ ಫಿಕ್ಸಾ ಎಂಬ ಪ್ರಶ್ನೆಗೆ, ” ಇದು ನಮ್ಮ ಕರ್ತವ್ಯ,…
ಬೆಂಗಳೂರು:- ಜಾತಿ ಜನಗಣತಿ ವರದಿ ಬಿಡುಗಡೆಗೆ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವರದಿ ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಹೋದಲ್ಲಿ ಬಂದಲ್ಲಿ ಜಾತಿಜನಗಣತಿ ವರದಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಲಿಂಗಾಯತ ಸಮುದಾಯ ಮಾತ್ರವಲ್ಲದೆ, ಒಕ್ಕಲಿಗ ಸಮುದಾಯವೂ ವಿರೋಧ ವ್ಯಕ್ತಪಡಿಸುತ್ತಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿರುವ ವರದಿ ತಿರಸ್ಕರಿಸುವ ಒಕ್ಕಲಿಗರ ಸಂಘದ ಮನವಿ ಪತ್ರಕ್ಕೆ ಡಿ.ಕೆ.ಶಿವಕುಮಾರ್ ಕೂಡ ಸಹಿ ಹಾಕಿದ್ದಾರೆ. ಗೃಹಸಚಿವ ಡಾ.ಜಿ.ಪರಮೇಶ್ವರ, ಸಚಿವರಾದ ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ ಸೇರಿದಂತೆ ಅನೇಕರು ವರದಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಆದರೆ, ವರದಿ ಬಿಡುಗಡೆಗೆ ಲಿಂಗಾಯತ ಸಮುದಾಯ ವಿರೋಧ ವ್ಯಕ್ತಪಡಿಸಿದೆ
ಮೆಟಾ-ಮಾಲೀಕತ್ವದ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ತನ್ನ ಡೆಸ್ಕ್‌ಟಾಪ್ ಬೀಟಾ ಪರೀಕ್ಷಕರಿಗೆ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ. ವಿಂಡೋಸ್ ಬಳಕೆದಾರರಿಗೆ ಅಪರಿಚಿತ ಫೋನ್ ಸಂಖ್ಯೆ ಅಥವಾ ತಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಫೋನ್ ಸಂಖ್ಯೆಗಳೊಂದಿಗೆ ಚಾಟ್‌ಗಳನ್ನು ಮಾಡಲು ಅನುವು ಮಾಡಿಕೊಡುವಂತಹ ಫೀಚರ್ ಇದಾಗಿದೆ. ಸದ್ಯದ ವರದಿಯ ಪ್ರಕಾರ ವಾಟ್ಸಾಪ್ ಹೊಸ ಸ್ಕ್ರೀನ್ ಅನ್ನು ಪರಿಚಯಿಸುತ್ತಿದೆ. ಅದರಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾಗಿ ನೀವು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಹೊಸ ಫೋನ್ ನಂಬರ್ ಅನ್ನು ನಮೂದಿಸಿ ತಕ್ಷಣ ಚಾಟಿಂಗ್ ಆರಂಭಿಸಬಹುದಾಗಿದೆ. ಅಂದರೆ ಸಂವಹನವನ್ನು ಇನ್ನಷ್ಟು ಸುಲಭ ಮತ್ತು ಸರಳವಾಗಿಸುವ ಸಲುವಾಗಿ ವಾಟ್ಸಾಪ್ ಇಂತಹದ್ದೊಂದು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ನಿಮ್ಮ ವಾಟ್ಸಾಪ್ ಖಾತೆಯಲ್ಲಿ ಈ ವೈಶಿಷ್ಟ್ಯತೆ ಲಭ್ಯತೆಯನ್ನು ಪರಿಶೀಲಿಸಲು ನೀವು ಬಯಸಿದರೆ, `ನ್ಯೂ ಚಾಟ್’ ಅನ್ನು ತೆರೆಯಿರಿ. ನಿಮ್ಮ ಡಿಪಿಯ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯನ್ನು ಕ್ಲಿಕ್ ಮಾಡಿದರೆ ಹೊಸ ಚಾಟ್ ಪರದೆ ತೆರೆದುಕೊಳ್ಳುತ್ತದೆ. ಇಲ್ಲಿ ನಿಮಗೆ `ಫೋನ್ ನಂಬರ್’ ಎಂಬ ಹೊಸ ಎಂಟ್ರಿ ಪಾಯಿಂಟ್ ಕಾಣಬೇಕು.…
ಕಲಬುರಗಿ: -ಒಬ್ಬಂಟಿಯಾಗಿ ವಾಸವಾಗಿದ್ದ ಮಹಿಳೆಯನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಸಂತೋಷ್ ಕಾಲನಿ ನಿವಾಸಿ 65 ವರ್ಷದ ರತ್ನಾಬಾಯಿ ಕೊಲೆಯಾದ ದುರ್ದೈವಿ.. ದೇವರ ಹೆಸರಿನಲ್ಲಿ ಭವಿಷ್ಯ ಹೇಳಿ ಜೀವನ ಸಾಗಿಸ್ತಿದ್ದ ಮಹಿಳೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ರಾಘವೇಂದ್ರ ನಗರ ಫೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ..
ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಆತಿಥೇಯ ಟೀಮ್ ಇಂಡಿಯಾ 6 ವಿಕೆಟ್‌ಗಳ ಹೀನಾಯ ಸೋಲುಂಡಿತು. ಈ ಮೂಲಕ ಐಸಿಸಿ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಭಾರತ ತಂಡದ ಕನಸು ನುಚ್ಚು ನೂರಾಯಿತು. ಈ ಬಗ್ಗೆ ಮಾತನಾಡಿದ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತಂಡ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಮುಖ್ಯ ಕಾರಣ ತಿಳಿಸಿದ್ದಾರೆ. ಮಂದಗತಿಯ ಪಿಚ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರೋಹಿತ್ ಶಾರ್ಮ ಸಾರಥ್ಯದ ಟೀಮ್ ಇಂಡಿಯಾ 240 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಓಪನರ್ ಟ್ರಾವಿಸ್ ಹೆಡ್ (137) ಅವರ ಮನಮೋಹಕ ಶತಕದ ಬಲದಿಂದ ಇನ್ನು 7 ಓವರ್‌ಗಳು ಬಾಕಿ ಇರುವಾಗಲೇ 6 ವಿಕೆಟ್‌ಗಳ ಜಯ ದಾಖಲಿಸಿ ದಾಖಲೆಯ 6ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು. “ಟೀಮ್ ಇಂಡಿಯಾದ ಸೋಲಿಗೆ ಪಿಚ್ ಮುಖ್ಯ ಕಾರಣವಾಯಿತು. ಫೈನಲ್ ಪಂದ್ಯಕ್ಕೆ ಆತಿಥೇಯ ಭಾರತ…