ಬಾಗಲಕೋಟೆ: ಬಿಜೆಪಿಯ ಬಹಳಷ್ಟು ಅತೃಪ್ತ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಇಲ್ಲಿ ಬಂದ ಮೇಲೆ ಅವರ ಸ್ಥಾನಮಾನದ ಬಗ್ಗೆಯೂ ಆಲೋಚನೆ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ” ಅನೇಕ ಬಿಜೆಪಿ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ, ಅವರ ಕ್ಷೇತ್ರದಲ್ಲಿ ಸಹಮತ ಇರುವ ಬಗ್ಗೆ ಚರ್ಚೆ ಮಾಡುತ್ತೇವೆ.
ಬರುವವರನ್ನ ಕರೆತಂದಾಗ ಯಾರಿಗೂ ಅನ್ಯಾಯ ಮತ್ತು ತೊಂದರೆಯಾಗದಂತೆ ನೋಡಿಕೊಳ್ಳಬೇಕು ” ಎಂದರು. ಈಗ ಎಷ್ಟು ಜನ ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ” ನಾವು ಗೋಲಿ ಹೊಡೆಯುವಾಗ ಎರಡು ರೀತಿಯಿಂದ ಹೊಡೆಯುತ್ತೇವೆ. ಒಂದು ಚರ್ರಿಗೋಲಿ ಅಂತ ಇರುತ್ತೇ ಅದು ಛಿದ್ರವಾಗಿರುತ್ತೇ,
Vishwas Vaidya: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಸತೀಶ್ ಜಾರಕಿಹೊಳಿ CM ಆಗುವುದು ಅಷ್ಟೇ ಸತ್ಯ: ಕಾಂಗ್ರೆಸ್ ಶಾಸಕ
ಅದು ಎಷ್ಟು ಮಂದಿಗೆ ಬಡಿಯುತ್ತೋ ಗೊತ್ತಿಲ್ಲ. ಫೈರಿಂಗ್ನಲ್ಲಿ ಎರಡು ರೀತಿ ಇರುತ್ತೇ, ಯಾವಾಗ ಯಾವ ಸಂದರ್ಭದಲ್ಲಿ ಯಾವ ಫೈರಿಂಗ್ ಹೊಡೆಯುತ್ತೇವೆ ಗೊತ್ತಿಲ್ಲ ಎಂದರು. ಫೈರಿಂಗ್ ಮಾಡೋದೆ ಫಿಕ್ಸಾ ಎಂಬ ಪ್ರಶ್ನೆಗೆ, ” ಇದು ನಮ್ಮ ಕರ್ತವ್ಯ, ಯಾಕೆಂದ್ರೆ ಲೋಕಸಭೆಯಲ್ಲಿ ಗೆಲ್ಲಬೇಕಾದ್ರೆ ರಾಜಕೀಯದಲ್ಲಿ ಕೆಲವೊಂದು ದೃವೀಕರಣ ಮಾಡಬೇಕಾಗುತ್ತೇ, ಅದನ್ನ ನಾವು ಮಾಡುತ್ತಿದ್ದೇವೆ ” ಎಂದು ಉತ್ತರ ನೀಡಿದರು.