ಕಲಬುರಗಿ: –ಒಬ್ಬಂಟಿಯಾಗಿ ವಾಸವಾಗಿದ್ದ ಮಹಿಳೆಯನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಸಂತೋಷ್ ಕಾಲನಿ ನಿವಾಸಿ 65 ವರ್ಷದ ರತ್ನಾಬಾಯಿ ಕೊಲೆಯಾದ ದುರ್ದೈವಿ..
ದೇವರ ಹೆಸರಿನಲ್ಲಿ ಭವಿಷ್ಯ ಹೇಳಿ ಜೀವನ ಸಾಗಿಸ್ತಿದ್ದ ಮಹಿಳೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ರಾಘವೇಂದ್ರ ನಗರ ಫೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ..