ಬೆಳಗಾವಿ/ಬೆಂಗಳೂರು:- ಬೆಳಗಾವಿ ಅಧಿವೇಶನದಲ್ಲಿ 18 ಬಿಲ್ಗಳ ಮಂಡನೆ ಬಗ್ಗೆ ಚರ್ಚೆ ಮಾಡಲಾಗಿದ್ದು, ವಿಪಕ್ಷಗಳಿಂದ ಅಧಿವೇಶನ ವಿಸ್ತರಣೆಗೆ ಮನವಿ ಮಾಡಲಾಗಿದೆ. ವಿಧಾನಸಭೆ ಕಲಾಪದಲ್ಲಿ 18 ಮಸೂದೆಗಳ ಮಂಡನೆಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸ್ಪೀಕರ್ ಯು ಟಿ ಖಾದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 18 ಮಸೂದೆ ಮಂಡನೆ ಸಂಬಂಧ ಚರ್ಚೆ ನಡೆಸಲಾಯಿತು. ಮುಂದಿನ ವಾರದಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಮಧ್ಯಾಹ್ನದ ಬಳಿಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬರ ನಿರ್ವಹಣೆ ಸಂಬಂಧ ಸದನಕ್ಕೆ ಮಾಹಿತಿ ನೀಡಲಿದ್ದಾರೆ. ಬಳಿಕ ಪ್ರತಿಪಕ್ಷಗಳು ಬರ ಸಂಬಂಧ ಚರ್ಚೆಗೆ ಕೋರಿ ಸಲ್ಲಿಸಿರುವ ನಿಲುವಳಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು. ಇದೇ ವೇಳೆ ಪ್ರತಿಪಕ್ಷಗಳು ಬೆಳಗಾವಿ ಅಧಿವೇಶನವನ್ನು ಒಂದು ವಾರ ಕಾಲ ವಿಸ್ತರಿಸುವಂತೆ ಕೋರಿದರು. ಈ ಬಗ್ಗೆ ಮುಂದಿನ ಬಿಎಸಿ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ಕರ್ನಾಟಕ ಕರಾವಳಿ ಅಭಿವೃದ್ಧಿ ನಿಗಮ ತಿದ್ದುಪಡಿ ವಿಧೇಯಕ 2021, ಕರ್ನಾಟಕ ಗ್ರಾಮ ಸ್ವರಾಜ್…
Author: AIN Author
ಬೆಂಗಳೂರು:- ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಾತೃಭಾಷೆ ಅಥವಾ ರಾಜ್ಯ ಭಾಷೆಯ ಕಡ್ಡಾಯ ಶಿಕ್ಷಣ ವಿಚಾರ ಕುರಿತು ವಿಧಾನಸಭೆಯ ಉಭಯ ಸದನಗಳಿಂದ ಅಂಗೀಕಾರಗೊಂಡಿರುವ ರಾಜ್ಯದ ಮಸೂದೆಗೆ ಇನ್ನೂ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕದ ಕಾರಣ, ಕಡ್ಡಾಯ ಶಿಕ್ಷಣ ವಿಚಾರದಲ್ಲಿ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. ಆದರೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015ರಲ್ಲಿ ಉಭಯ ಸದನಗಳಲ್ಲಿ ಮಂಡನೆ ಆಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ 1-5 ತರಗತಿವರೆಗೆ ಮಾತೃಭಾಷೆ- ರಾಜ್ಯಭಾಷೆ ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಿ ಅಂಗೀಕರಿಸಲಾಗಿದ್ದ ಮಸೂದೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ. ಕೇಂದ್ರ ಸರ್ಕಾರ ಮಾತೃಭಾಷೆಯ ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಮಸೂದೆ ಒಪ್ಪದ ಕೇಂದ್ರ ಸುಪ್ರಿಂಕೋರ್ಟ್ ತೀರ್ಪು ಆಧರಿಸಿ, ರಾಜ್ಯದ ವಿಧೇಯಕ…
ಬೆಂಗಳೂರು:- ರಾಜ್ಯದಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತದ ಪರಿಣಾಮ ಡಿ. 7ರವರೆಗೆ ಕೂಡ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ಚಂಡಮಾರುತ ಹೈ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ವಿಜ್ಞಾನಿ ಎ ಪ್ರಸಾದ್ ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡದ ಪ್ರದೇಶ ಕ್ರಮೇಣ ವಾಯುವ್ಯ ಕಡೆಗೆ ಚಲಿಸಲಿದೆ. ಇದು ಸೈಕ್ಲೋನಿಕ್ ಚಂಡಮಾರುತದ ರೂಪವನ್ನು ತೆಗೆದುಕೊಳ್ಳುತ್ತದೆ. ತಮಿಳುನಾಡು, ಕೇರಳ ಮತ್ತು ಕರಾವಳಿ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ವಾರ ಮೋಡ ಕವಿದ ವಾತಾವರಣವಿತ್ತು. ಈ ವಾರ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಹೆಚ್ಚಾಗಿದೆ ಎಂದಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ,…
ಬೆಳಗಾವಿ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರೊಟೆಸ್ಟ್ ನಡೆದಿದ್ದು, ಬೆಳೆ ಪರಿಹಾರ ನೀಡಬೇಕು. ಎಂಎಸ್ ಪಿ ಶಾಸನಬಧ್ಧವಾಗಿ ಜಾರಿ ಆಗಬೇಕು. ಪ್ರತಿ ಲೀಟರ್ ಹಾಲಿಗೆ 50 ರೂಪಾಯಿ ದರ ನಿಗದಿಪಡಿಸಬೇಕು. ಮಹದಾಯಿ ಎತ್ತಿನಹೊಳೆ ಸೇರಿದಂತೆ ನೀರಾವರಿ ಯೋಜನೆಯ ಜಾರಿಯಾಗಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ಹೊರ ಹಾಕಿದ್ದಾರೆ. ರೈತ ಸಂಘದಿಂದ ಸುವರ್ಣ ಸೌಧ ಮುತ್ತಿಗೆ ಯತ್ನ ಹಿನ್ನೆಲೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರೈತರನ್ನು ಪೊಲೀಸರು ತಡೆದಿದ್ದಾರೆ. ಎರಡು ಬಸ್ ಗಳ ಮೂಲಕ ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಹೋಗಲು ಪೊಲೀಸರು ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆ ಬಸ್ ಹತ್ತಿ ಪೊಲೀಸರು ತೆರಳಿದರು. ಈ ವೇಳೆ ಭಾರೀ ಬಂದೋಬಸ್ತ್ ಒದಗಿಸಲಾಗಿತ್ತು.
ಚಾಮರಾಜನಗರ:- ಮಾಜಿ ಸಚಿವ ಸಿಪಿಯೋಗೀಶ್ವರ ಬಾವನ ಕಾರು ಹನೂರು ಭಾಗದಲ್ಲಿ ಪತ್ತೆಯಾಗಿದೆ. ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಭಾವ ಮಹದೇವ್ ಅವರ ಚಾಮರಾಜನಗರದ ಹನೂರು ಬಳಿ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದ ಬಳಿ ಮಹದೇವಯ್ಯ ಅವರ ಕಾರು ಪತ್ತೆಯಾಗಿದೆ. ರಾಮಾಪುರದ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬಿಳಿಬಣ್ಣದ KA 42 N 0012 ನಂಬರ್ನ ಮಾರುತಿ ಬ್ರಿಜಾ ಕಾರು ಪತ್ತೆಯಾಗಿದೆ. ಕಾರನ್ನು ಲಾಕ್ ಮಾಡಲಾಗಿದ್ದು, ನಿನ್ನೆ ರಾತ್ರಿಯಿಂದಲೂ ಅಲ್ಲೆ ಇದೆ ಎಂದು ತಿಳಿದುಬಂದಿದೆ. ಆದರೆ ಕಾರನ್ನು ಸ್ವತಃ ಮಹದೇವಯ್ಯ ಅವರೇ ನಿಲ್ಲಿಸಿ ಹೋಗಿದ್ದಾರಾ? ಅಥವಾ ಇನ್ಯಾರಾದರು ನಿಲ್ಲಿಸಿ ಹೋಗಿದ್ದಾರಾ ಎಂಬುದು ನಿಗೂಢವಾಗಿದೆ. ಸ್ಥಳಕ್ಕೆ ರಾಮಾಪುರ ಪೊಲೀಸರಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಮಹದೇವಯ್ಯ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವುದರಿಂದ ಅವರನ್ನು ಯಾರೋ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ. ತೋಟದ ಮನೆಗೆ ಚನ್ನಪಟ್ಟಣ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಅನುಮಾನ ದಟ್ಟವಾಗಿದೆ. ಅಲ್ಲದೇ…
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ದೊಡ್ಡ ಅನಾಹುತವೇ ತಪ್ಪಿದೆ. ಒಂದು ಕ್ಷಣ ಯಾಮಾರಿದ್ರೂ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿ ಹೋಗ್ಬಿಟ್ಟಿದೆ. ನಿಂತಿದ್ದ ಸಿಟಿ ಬಸ್ಗೆ ಹಿಂದಿನಿಂದ ಕಾರು ಗುದ್ದಿದ್ದು ಬೆಂಕಿ ಆವರಿಸಿತ್ತು.ಆದ್ರೆ ಬಸ್ ಡ್ರೈವರ್ ಜಾಣ್ಮೆಯಿಂದ 40 ಕ್ಕೂಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.ಹಾಗಾದ್ರೆ ಈ ಭೀಕರ ಆಕ್ಸಿಡೆಂಡ್ ಹೇಗೆ ನಡೆಯಿತು ಬನ್ನಿ ತೋರಿಸ್ತೀವಿ.. ಬೆಂಗಳೂರು ಇದು ರಾಜ್ಯದ ರಾಜಧಾನಿ.ನಿತ್ಯ ಒಂದು ಕೋಟಿಕ್ಕಿಂತ ಹೆಚ್ಚು ವಾಹನಗಳು ರಸ್ತೆಗಿಳಿಯುತ್ತವೆ. ಟ್ರಾಫಿಕ್ ದಟ್ಟನೆ ನಡವೆಯೂ ಒಂದಲ್ಲ ಒಂದು ಆಕ್ಸಿಡೆಂಟ್ ಗಳು ನಡೆಯುತ್ತಲ್ಲೇ ಇರ್ತವೆ. ಯಾವಾಗಲೂ ನಗರದಲ್ಲಿ ಆಕ್ಸಿಡೆಂಟ್ ಗಳಲ್ಲಿ ಹೆಚ್ಚು ಸದ್ದು ಮಾಡೋದೆ ಈ ಬಿಎಂಟಿಸಿ ಬಸ್ ಗಳು. ಆದ್ರೆ ಯಾವಾಗಲೂ ನಗರದಲ್ಲಿ ಆಕ್ಸಿಡೆಂಟ್ ಗಳೇ ಮಾಡುತ್ತಿದ್ದ ,ಬಸ್ ಗೆನೇ ಕಾರುವೊಂದು, ಗುದ್ದಿ ಅವಾಂತರ ಸೃಷ್ಟಿ ಮಾಡಿದೆ. https://ainlivenews.com/dialysis-problem-not-caused-by-our-government-dinesh-gundurao/ ಹೌದು…ನಿಂತಿದ್ದ ಬಿಎಂಟಿಸಿ ಬಸ್ಗೆ ಕಾರ್ ಡಿಕ್ಕಿಯಾಗಿ ಬೆಂಕಿ ಹೊತ್ತುಕೊಂಡಿದ್ದು ಕಾರು ಹೊತ್ತಿ ಉರಿದ ಘಟನೆ ನಾಯಂಡಹಳ್ಳಿ ಬಳಿಯ ರಿಂಗ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ.…
ಹುಬ್ಬಳ್ಳಿ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಗಢ ಗಳಲ್ಲಿ ಇಂದು ಪ್ರಚಂಡ ಬಹುಮತದಿಂದ ಭಾರತೀಯ ಜನತಾ ಪಾರ್ಟಿ ಆಯ್ಕೆ ಆದ ಹಿನ್ನೆಲೆ ಹುಬ್ಬಳ್ಳಿ ತಾಲ್ಲೂಕಿನ ವರೂರ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಉಮೇಶ್ ಕುಸುಗಲ್, ಹಿರಿಯಾರಾದ ಭಗಂತ ಯಂಕ್ಕಣ್ಣವರ, ಡಿ ಪಿ ಕಾಗೇನವರ, ಕುಮಾರಸ್ವಾಮಿ ಹಿರೇಮಠ ,ಜಿಲ್ಲಾ ಕಾರ್ಯದರ್ಶಿ ಟೋಪನಗೌಡ್ರ ರಾಮನಗೌಡ್ರ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಮೆಣಸಿನಕಾಯಿ , ಮಂಜುನಾಥ ದ್ಯಾಮಕ್ಕನವರ ,ಎಸ್ ಟಿ ಮೊರ್ಚಾ ಅಧ್ಯಕ್ಷರಾದ ಅಶೋಕ ಅಣ್ಣಿಗೇರಿ, ಯಲ್ಲಪ್ಪ ಬಸ್ತಿ, ಭಿಮರಾವ್ ಚಿಂತಪ್ಪನವರ ,ಚಂದಾ ನವಲಗುಂದ, ಎಸ್ ಎನ್ ಪಾಟೀಲ್, ಪ್ರಕಾಶ್ ಮಾಳಕೊಟಿ ,ಕಿರಣ ಮಿಸ್ಕಿನ ,ಶಿವರಾಜ್ ವಡ್ಡರ, ಪ್ರಭು ಮೊರಬದ, ಸಹದೇವ ಕಾಳೆನವರ, ದೇವರಾಜ್ ಕೋಟೆಣ್ಣವರ, ಚಂದ್ರು ಬಡಪ್ಪನವರ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು
ಬಳ್ಳಾರಿ:- ನಿನ್ನೆ ರಾತ್ರಿ ಕ್ಷುಲಕ ಕಾರಣಕ್ಕೆ ಪ್ರಾರಂಭವಾದ ಗಂಡ ಹೆಂಡತಿಯ ಜಗಳ ಇಂದು ಬೆಳ್ಳಂಬೆಳ್ಳಗೆ ಕೊಲೆಯಲ್ಲಿ ಅಂತ್ಯವಾಗಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಠಾಣಾ ವ್ಯಾಪ್ತಿಯ ಬಲಕುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳ್ಳಂಬೆಳ್ಳಗೆ ಸುಮಾರು 3:30 ಸಮಯದಲ್ಲಿ ಗಂಡ ರಸೂಲ್(35), ನಿದ್ರಾವಸ್ಥೆಯಲ್ಲಿದ ಹೆಂಡತಿ ಮೈಮೂನ್ (25) ಕುತ್ತಿಗೆಗೆ ಕೊಡಲಿಯಿಂದ ಹಾಕಿದ ಎಟಿಗೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಯಿತು ಎನ್ನುವ ಗಾದೆ ಮಾತಿನಂತೆ, ಈ ದಂಪತಿಯ ಎರಡು ಗಂಡು ಹುಡುಗರು ಅನಾಥವಾಗಿವೆ. ಎರಡು ಕಿಡ್ನಿ ಕಳೆದು ಕೊಂಡಿದ ಗಂಡ (ಆರೋಪಿ) ರಸೂಲ್ ಗೆ ಮೈಮೂನ್ ಳು ಪ್ರತಿದಿನ ಕೂಲಿ ಕೆಲಸಕ್ಕೆ ಹೋಗಿ ಗಂಡನಿಗೆ ಚಿಕಿತ್ಸೆ ಕೊಡಿಸುತ್ತಿದ್ದಳು. ಅಂತವಳನ್ನು ಸಾಯಿಸುವ ಕೆಲಸಮಾಡಿದ ಗಂಡ ರಸೂಲ್ ಗೆ ಊರಿನ ಗ್ರಾಮಸ್ಥರು ಹಿಡಿ ಶಾಪಹಾಕಿದರು.
ಬೆಂಗಳೂರು: ತಮಿಳುನಾಡಿನಲ್ಲಿ ಮೈಚಾಂಗ್ ಚಂಡಮಾರುತದ ಅಬ್ಬರ ಶುರುವಾಗಿದ್ದು, ಚೆನೈನಲ್ಲಿ ಭಾರಿ ಮಳೆಯಿಂದ ವಿಮಾನಗಳು ಡೈವರ್ಟ್ ಆಗಿದೆ. ಚೆನೈ ವಿಮಾನ ನಿಲ್ಥಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಡೈವರ್ಟ್ ಆಗಿದ್ದು, ಕಳೆದ ರಾತ್ರಿಯಿಂದ ಈ ವರೆಗೂ 27 ವಿಮಾನಗಳು ಡೈವರ್ಟ್ ಆಗಿದೆ. ಚೆನೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಬೆಂಗಳೂರಿಗೆ ಡೈವರ್ಟ್ ಆಗಿದ್ದು, https://ainlivenews.com/dialysis-problem-not-caused-by-our-government-dinesh-gundurao/ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳು ಡೈವರ್ಟ್ಆಗಿದೆ.ಮುಂಜಾನೆಯಿಂದ ಪ್ರಯಾಣಿಕರು ಏರ್ಪೋಟ್ ನಲ್ಲೇ ಉಳಿದಿದ್ದು, ಎಮಿರೇಟ್ಸ್, ಲೂಪ್ತಾನ್ಸ, ಏರ್ ಇಂಡಿಯಾ ಏಕ್ಸಪ್ರೇಸ್, ಸೇರಿದಂತೆ 27 ವಿಮಾನಗಳಿವೆ. ಮಳೆ ಕಡಿಮೆಯಾದ್ರೆ ಮತ್ತೆ ವಿಮಾನಗಳು ಚೆನೈಗೆ ಹೋಗ್ತಾವೆ ಎಂದು ಜನರು ಕಾದು ಕುಳಿತಿದ್ದಾರೆ. ಬೆಂಗಳೂರಿನಿಂದ ಚೆನೈಗೆ ತೆರಳುವ ವಿಮಾನಗಳು ಸಹ ರದ್ದಾಗಿದೆ.
ಬೆಂಗಳೂರು: ಕೆಪಿಎಸ್ಸಿ ಬೋರ್ಡ್ ಮುಂದೆ, ವಿದ್ಯಾರ್ಥಿಗಳು ನೂರಾರು ಪತ್ರಗಳನ್ನು ಚೆಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಗ್ರೂಪ್ ಎ, ಬಿ, ಸಿ ನಲ್ಲಿರುವ ವಿವಿಧ ಹುದ್ದೆಗಳಿಗಾಗಿ ಎಕ್ಸಾಂ ನಡೆದು ಎರಡು ಮೂರು ವರ್ಷಗಳು ಆಗಿದೆ. ಕೆಪಿಎಸ್ಸಿ ನೋಟಿಫಿಕೇಶನ್, ಫೈನಲ್ ಲಿಸ್ಟ್ ಬಿಟ್ಟಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಆರು ತಿಂಗಳಿಂದ ಪ್ರತಿದಿನ ಮನವಿ ಕೊಟ್ಟಿದೀವಿ ಆದರೆ ಸ್ಪಂದಿಸುತ್ತಿಲ್ಲ. https://ainlivenews.com/dialysis-problem-not-caused-by-our-government-dinesh-gundurao/ ಕೆಪಿಎಸ್ಸಿ ಒಂದು ಎಕ್ಸಾಂ ಪಾಸ್ ಆಗ್ಬೇಕು ಅಂದ್ರೆ ಕಷ್ಟ ಇದೆ. ಸಾಕಷ್ಟು ಜನ ಬಡ ವಿದ್ಯಾರ್ಥಿಗಳು ಇದರಲ್ಲಿ ಎಕ್ಸಾಂ ಬರೆಯೋಕೆ ರೆಡಿಯಾಗಿದ್ದಾರೆ. ಟೈಂ ಟು ಟೈಂ ಎಕ್ಸಾಂ ನಡೆಸ್ಬೇಕು. ಆದ್ರೆ ಇವ್ರು ಹೋಲ್ಡ್ ಮಾಡ್ತಿರೋದಕ್ಕೆ ಕಾರಣ ಏನು ಗೊತ್ತಿಲ್ಲ. ಇವರ ಉದ್ದೇಶ ಏನು ಗೊತ್ತಿಲ್ಲ ಎಂದು ಪ್ರತಿಭಟನನಿರತ ಆಭ್ಯರ್ಥಿಗಳು ಕೆಪಿಎಸ್ ಸಿ ಬೋರ್ಡ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.