ಚಾಮರಾಜನಗರ:- ಮಾಜಿ ಸಚಿವ ಸಿಪಿಯೋಗೀಶ್ವರ ಬಾವನ ಕಾರು ಹನೂರು ಭಾಗದಲ್ಲಿ ಪತ್ತೆಯಾಗಿದೆ.
ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಭಾವ ಮಹದೇವ್ ಅವರ ಚಾಮರಾಜನಗರದ ಹನೂರು ಬಳಿ ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದ ಬಳಿ ಮಹದೇವಯ್ಯ ಅವರ ಕಾರು ಪತ್ತೆಯಾಗಿದೆ.
ರಾಮಾಪುರದ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬಿಳಿಬಣ್ಣದ KA 42 N 0012 ನಂಬರ್ನ ಮಾರುತಿ ಬ್ರಿಜಾ ಕಾರು ಪತ್ತೆಯಾಗಿದೆ. ಕಾರನ್ನು ಲಾಕ್ ಮಾಡಲಾಗಿದ್ದು, ನಿನ್ನೆ ರಾತ್ರಿಯಿಂದಲೂ ಅಲ್ಲೆ ಇದೆ ಎಂದು ತಿಳಿದುಬಂದಿದೆ.
ಆದರೆ ಕಾರನ್ನು ಸ್ವತಃ ಮಹದೇವಯ್ಯ ಅವರೇ ನಿಲ್ಲಿಸಿ ಹೋಗಿದ್ದಾರಾ? ಅಥವಾ ಇನ್ಯಾರಾದರು ನಿಲ್ಲಿಸಿ ಹೋಗಿದ್ದಾರಾ ಎಂಬುದು ನಿಗೂಢವಾಗಿದೆ. ಸ್ಥಳಕ್ಕೆ ರಾಮಾಪುರ ಪೊಲೀಸರಿಂದ ಪರಿಶೀಲನೆ ನಡೆಸುತ್ತಿದ್ದಾರೆ.
ಮಹದೇವಯ್ಯ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವುದರಿಂದ ಅವರನ್ನು ಯಾರೋ ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ. ತೋಟದ ಮನೆಗೆ ಚನ್ನಪಟ್ಟಣ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಅನುಮಾನ ದಟ್ಟವಾಗಿದೆ. ಅಲ್ಲದೇ ಮಹದೇವಯ್ಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುವುದರಿಂಧ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.