ಬೆಂಗಳೂರು: ತಮಿಳುನಾಡಿನಲ್ಲಿ ಮೈಚಾಂಗ್ ಚಂಡಮಾರುತದ ಅಬ್ಬರ ಶುರುವಾಗಿದ್ದು, ಚೆನೈನಲ್ಲಿ ಭಾರಿ ಮಳೆಯಿಂದ ವಿಮಾನಗಳು ಡೈವರ್ಟ್ ಆಗಿದೆ. ಚೆನೈ ವಿಮಾನ ನಿಲ್ಥಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಡೈವರ್ಟ್ ಆಗಿದ್ದು, ಕಳೆದ ರಾತ್ರಿಯಿಂದ ಈ ವರೆಗೂ 27 ವಿಮಾನಗಳು ಡೈವರ್ಟ್ ಆಗಿದೆ. ಚೆನೈನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳು ಬೆಂಗಳೂರಿಗೆ ಡೈವರ್ಟ್ ಆಗಿದ್ದು,
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳು ಡೈವರ್ಟ್ಆಗಿದೆ.ಮುಂಜಾನೆಯಿಂದ ಪ್ರಯಾಣಿಕರು ಏರ್ಪೋಟ್ ನಲ್ಲೇ ಉಳಿದಿದ್ದು, ಎಮಿರೇಟ್ಸ್, ಲೂಪ್ತಾನ್ಸ, ಏರ್ ಇಂಡಿಯಾ ಏಕ್ಸಪ್ರೇಸ್, ಸೇರಿದಂತೆ 27 ವಿಮಾನಗಳಿವೆ. ಮಳೆ ಕಡಿಮೆಯಾದ್ರೆ ಮತ್ತೆ ವಿಮಾನಗಳು ಚೆನೈಗೆ ಹೋಗ್ತಾವೆ ಎಂದು ಜನರು ಕಾದು ಕುಳಿತಿದ್ದಾರೆ. ಬೆಂಗಳೂರಿನಿಂದ ಚೆನೈಗೆ ತೆರಳುವ ವಿಮಾನಗಳು ಸಹ ರದ್ದಾಗಿದೆ.