ಅಥಣಿ : ತಾಲೂಕಿನ ಅನಂತಪುರ ಗ್ರಾಮದಲ್ಲಿ ಬೆಳೆದ ೨೫ ಹೇಕ್ಟರ್ ಗು ಅಧಿಕ ದ್ರಾಕ್ಷಿ ಬೆಳೆ ಅಕಾಲಿಕ ಮಳೆಯಿಂದ ಹಾನಿಯಾಗಿದೆ ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ದ್ರಾಕ್ಷಿ ಬೆಳೆ ಕೈಗೇಟುಕದ ಕಾರಣ ರೈತರು ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಮೊನ್ನೆ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಳು ರೋಗಬಾಧೆಗೆ ತುತ್ತಾಗಿ ದ್ರಾಕ್ಷಿ ಹಣ್ಣಿನಲ್ಲಿ ನೀರು ತುಂಬಿ ಒಡೆದು ನಾಶಗೊಳ್ಳುತ್ತಿದೆ. ನೀರಿಲ್ಲದೆ ಹತ್ತು ಎಕರೆ ಕಬ್ಬು ಒಣಗಿಸಿ ಸುಮಾರು ಆರು ಲಕ್ಷ ಖರ್ಚು ಮಾಡಿ ದ್ರಾಕ್ಷಿ ಬೆಳೆದಿದ್ದೆ ಕಟಾವಿನ ಹಂತಕ್ಕೆ ಬಂದ ದ್ರಾಕ್ಷಿ ಬೆಳೆ ಈ ರೀತಿ ನಾಶವಾಗಿದೆ ಮುಂದೇನು ಅಂತಾ ತೋಚದಾಗಿದೆ ಎಂದು ರೈತರು ತಮ್ಮ ಅಲಳನ್ನ ತೋಡಿಕೊಂಡಿದ್ದಾರೆ.
Author: AIN Author
ತಮಿಳುನಾಡು:- ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು – ಬಾಗಲೂರು ರಸ್ತೆಯ ಜೀಮಂಗಲಂ ಬಳಿ ಸರ್ಕಾರಿ ಬಸ್ ಹಾಗೂ ಶಾಲಾ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಸ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಎರಡು ಬಸ್ಗಳ ಮುಂಭಾಗ ಛಿದ್ರಗೊಂಡಿದೆ. ಶಾಲಾ ಬಸ್ ಚಾಲಕನಿಗೆ ಗಂಭೀರ ಗಾಯವಾಗಿದರೆ, ಸರ್ಕಾರಿ ಬಸ್ನಲ್ಲಿದ್ದ ಓರ್ವ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತ ಬಸ್ನಲ್ಲಿ ಸಿಲುಕಿಕೊಂಡಿರುವ ಗಾಯಾಳುಗಳನ್ನು ಸ್ಥಳೀಯರು ಹೊರತೆಗೆಯುತ್ತಿದ್ದಾರೆ.
ಬೆಂಗಳೂರು:- ಮತದಾರರಿಗೆ ಉಚಿತ ಗ್ಯಾರಂಟಿ ಅಮಿಷ ನಿರ್ಬಂಧ ಕೋರಿ ಬೆಂಗಳೂರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ ಆಗಿದೆ. ರವಿ ಮುನಿಸ್ವಾಮಿ ಸೇರಿ ಮತ್ತಿತರರಿಂದ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳಿಂದ ಮತದಾರರಿಗೆ ಅಮಿಷ ಒಡ್ಡಲಾಗುತ್ತಿದೆ. ಆಮಿಷ ಒಡ್ಡುವ ಅಭ್ಯರ್ಥಿಗಳ, ಪಕ್ಷಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜನರ ತೆರಿಗೆ ಹಣ ಅಧಿಕಾರದ ಲಾಲಾಸೆಗೆ ಬಳಸುತ್ತಿದ್ದಾರೆ. ದೇಶದ ಅಭಿವೃದ್ಧಿಗೆಗೆ ಇರುವ ಬೊಕ್ಕಸವನ್ನು ಅಮಿಷಕ್ಕೆ ಬಳಸಲಾಗುತ್ತಿದೆ. ಮತದಾರರಿಗೆ ಪ್ರಲೋಭನೆ ಒಡ್ಡಿ ಮತ ಕೇಳುವುದು ಸಂವಿಧಾನ ಬಾಹಿರ. ಹೀಗಾಗಿ ಸೂಕ್ತ ಮಾರ್ಗಸೂಚಿ ಹೊರಡಿಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡುವಂತೆ ಪಿಐಎಲ್ ನಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು:- ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಕೇವಲ 1,500 ರೂಪಾಯಿ ವಿಚಾರಕ್ಕೆ ಕೊಲೆ ನಡೆದಿರುವ ಘಟನೆ ಜರುಗಿದೆ. ಸ್ನೇಹಿತನಿಗೆ ಹಣ ಕೊಡಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬಾರ್ವೊಂದರಲ್ಲಿ ಗೋಪಾಲ್, ಶಶಿ ಹಾಗೂ ಕರಿಗೌಡ ಎಂಬುವವರು ಮದ್ಯ ಸೇವಿಸುತ್ತಿದ್ದರು. ಇದೇ ವೇಳೆ ಅದೇ ಬಾರ್ಗೆ ಪ್ರದೀಪ್ ಎಂಬುವವರ ಜೊತೆ ಆರೋಪಿ ಗಿರೀಶ್ ಬಂದಿದ್ದಾರೆ. ಕರಿಗೌಡಗೆ 1,500 ರೂಪಾಯಿಯನ್ನು ಆರೋಪಿ ಗಿರೀಶ್ಗೆ ಕೊಡಬೇಕಿತ್ತು. ಅದರಂತೆ ಆತ ತನ್ನ ಹಣ ಕೇಳಿದಾಗ, ಗಿರೀಶ್ ಅವಾಜ್ ಹಾಕಿದ್ದ. ಬಳಿಕ ಮಧ್ಯಪ್ರವೇಶಿಸಿದ ಗೋಪಾಲ್ ಎಂಬಾತ, ಗಿರೀಶ್ಗೆ ಹೊಡೆದು ಹಣ ಕೊಡಿಸಿದ್ದ. ಇದಾದ ಬಳಿಕ ಗಿರೀಶ್, ಶಶಿಗೆ ಪೋನ್ ಮಾಡಿ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದ. ಆಮೇಲೆ ಗೋಪಾಲ್, ಕರೆಗೌಡ ಹಾಗೂ ಶಶಿಧರ್, ಗಿರೀಶ್ ಮನೆಗೆ ಹೋಗಿದ್ದರು. ಗಿರೀಶ್ಗೆ ಸರಿಯಾಗಿ ಮಾತನಾಡುವಂತೆ ಆತನ ಪತ್ನಿ ಬಳಿಯಲ್ಲಿ ಮೂವರು ಹೇಳಿದ್ದರು. ಈ ವೇಳೆ ಅಡುಗೆ ಮನೆಯಿಂದ ಚಾಕು ತಂದು ಬೆನ್ನ ಹಿಂದೆ ಇಟ್ಟುಕೊಂಡಿದ್ದ ಗಿರೀಶ್, ಗೋಪಾಲ್ ಎದೆಗೆ ಚಾಕುವಿನಿಂದ ಚುಚ್ಚಿ…
ಬೆಂಗಳೂರು:- ಗೂಳಿಹಟ್ಟಿ ಶೇಖರ್ ಆಡಿಯೋ ವಿಚಾರವಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪಿ.ರಾಜೀವ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸಂಘಟನೆ ಕುರಿತಾಗಿ ಗೂಳಿಹಟ್ಟಿ ಶೇಖರ್ ಮಾತಾಡಿರುವ ಹೇಳಿಕೆ ವೈರಲ್ ಆಗಿರುವುದು ಗಮನಸಿದ್ದೇನೆ. ಗೂಳಿಹಟ್ಟಿ ಶೇಖರ್ ಯಾವ ಮಾನಸಿಕ ಸ್ಥಿತಿಯಲ್ಲಿ..? ಯಾರಿಂದ ಪ್ರೇರಣೆಗೆ ಒಳಗಾಗಿ. ಯಾವ ಕಾಣದ ಕೈಳಗ ಒತ್ತಡಕ್ಕೆ ಒಳಗಾಗಿ ಹೇಳಿದ್ದಾರೆ ಗೊತ್ತಿಲ್ಲ. ಗೂಳಿಹಟ್ಟಿ ಶೇಖರ್ ಹೇಳಿದ್ದು ತಪ್ಪು. ನಾನು ರಾಜಕೀಯಕ್ಕೆ ಬಂದಮೇಲೆ ರಾಷ್ಟ್ರೀಯ ಸಂಘಪರಿವಾರವನ್ನು ಹತ್ತಿರದಿಂದ ನೋಡಿದ್ದೇನೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಲ್ಲರನ್ನೂ ಜೋಡಿಸುವುದು, ಸಂಪೂರ್ಣ ಹಿಂದೂ ಸಂಘಟನೆ ಒಗ್ಗೂಡಿಸುವ ಕೆಲಸ ಮಾಡುತ್ತದೆ. ಸಂಘ ಭಾರತ ಮಾತೆಯ ಪೋಟೋ ಇಟ್ಟು ಪೂಜೆ ಮಾಡುತ್ತಾರೆ. ಯಾರಾದರೂ ಬಂದಾಗ ಜಾತಿ ಕೇಳುವುದು, ಇಂತಹ ಆಚರಣೆ ನನ್ನ ಅನುಭವಕ್ಕೆ ಬಂದಿಲ್ಲ. ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ದೇಶ ಕಟ್ಟಬೇಕು ಎಂದು ನಿರಂತರ ಹೋರಾಟ ಮಾಡುತ್ತಿರುವ ಸಂಘಟನೆ. ಸ್ವಯಂ ಸೇವಕರು ಯಾವುದೇ ಸನ್ಯಾಸಿಗೂ ಕಡಿಮೆ ಇಲ್ಲದೇ ಎಲ್ಲವನ್ನೂ ತ್ಯಾಗ ಮಾಡಿ…
ತುಮಕೂರು:- ನನ್ನ ದುರಹಂಕಾರ ನನಗೆ ತೊಂದರೆ ಕೊಟ್ಟಿದೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೆಲ ನಾಯಿ, ನರಿಗಳಿಂದ ಸಮಸ್ಯೆಯಾಗಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ಸೋಮಣ್ಣ ವಾಗ್ದಾಳಿ ನಡೆಸಿದರು. ಕೆಲವು ಸಂದರ್ಭಗಳಲ್ಲಿ ನನ್ನ ದುರಹಂಕಾರ ನನಗೆ ತೊಂದರೆ ಕೊಟ್ಟಿದೆ. ಮೇಲೆ ಆಕಾಶವಿದೆ ಎಂದು ತಿಳಿಯದೆ ಅತ್ತ ಕಡೆಗೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರೆಸಿಕೊಂಡು ಮುಂದೆ ಹೋಗುವ ಕೆಲಸ ಮಾಡುತ್ತೇನೆ’ ಎಂದರು. ‘ಬಿಜೆಪಿ ವರಿಷ್ಠರ ಭೇಟಿಗೆ ನ. 30ರಂದು ಸಮಯ ನೀಡಿದ್ದರು. ಅಂದು ಹೋಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಮುಂದೆ ಏನಾಗುವುದೊ ಗೊತ್ತಿಲ್ಲ. ಆಗಿರುವ ತಪ್ಪುಗಳನ್ನು ಹೈಕಮಾಂಡ್ ಯಾವ ರೀತಿ ಸರಿಪಡಿಸಲಿದೆ ಎಂಬುದು ಗೊತ್ತಿಲ್ಲ. ಕೆಲ ದಿನಗಳು ನೋಡುತ್ತೇನೆ. ಎಲ್ಲವನ್ನೂ ಜನರ ಮುಂದೆ ಹೇಳುತ್ತೇನೆ. ನಂತರ ನಿರ್ಧಾರ ಮಾಡುತ್ತೇನೆ’ ಎಂದು ಹೇಳಿದರು.
ನವೆಂಬರ್ 19ರಂದು ಅಹಮದಾಬಾದ್ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ, ಭಾರತ ತಂಡವು ಐಸಿಸಿ ಟ್ರೋಫಿ ಎತ್ತುವ ಸುವರ್ಣ ಅವಕಾಶವನ್ನು ಕಳೆದುಕೊಂಡಿತು. ಇದೀಗ ಮುಂದಿನ ಅವಕಾಶಕ್ಕಾಗಿ ತಂಡದ ಕ್ರಮವೇನು ಎಂಬುದರ ಕುರಿತು ಟೀಮ ಇಂಡಿಯಾ ಮ್ಯಾನೇಜ್ಮೆಂಟ್ ಈಗ ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆರಂಭಿಕವಾಗಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಮತ್ತು ಅವರ ಸಹಾಯಕ ಸಿಬ್ಬಂದಿಯ ಒಪ್ಪಂದದ ಅವಧಿಯನ್ನು ವಿಸ್ತರಿಸಿದೆ. ಏಕದಿನ ವಿಶ್ವಕಪ್ನೊಂದಿಗೆ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಂಡಿತ್ತು. 2024ರ ಟಿ20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯರನ್ನು ನಾಯಕನಾಗಿ ನೇಮಕಕ್ಕೆ ಸಿದ್ಧತೆ ನಡೆಸುತ್ತಿತ್ತು. ಆದರೆ, ಹಾರ್ದಿಕ್ ಪಾಂಡ್ಯಗೆ ಅನಿರೀಕ್ಷಿತ ಗಾಯವು, ವಿಶೇಷವಾಗಿ, ಏಕದಿನ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಅತ್ಯುತ್ತಮವಾಗಿ ಮುನ್ನಡೆಸಿದ ವಿಧಾನದ ನಂತರ, ತಂಡದ ಮ್ಯಾನೇಜ್ಮೆಂಟ್ ಆಯ್ಕೆಗಳನ್ನು ಪರಿಗಣಿಸುವಂತೆ ಒತ್ತಾಯಿಸಿದೆ. ವಿಡಿಯೋ ಕಾಲ್ ಮೂಲಕ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಾಜರಾಗಿದ್ದ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಬಿಸಿಸಿಐ…
ಬೆಳಗಾವಿ/ ಬೆಂಗಳೂರು:- 30 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ಹೆಚ್ಚುವರಿ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಬಿ ಪಿ ಹರೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲಾಖೆಯಲ್ಲಿ ಒಟ್ಟು 2443 ವಿದ್ಯಾರ್ಥಿ ನಿಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 2,28,411 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶದ ಸೌಲಭ್ಯ ಕಲ್ಪಿಸಲಾಗಿದೆ. ಹರಿಹರ ವಿಧಾನಸಭಾ ಕ್ಷೇತ್ರದ 9 ಹಾಸ್ಟೆಲ್ಗಳಲ್ಲಿ 745 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗಿದೆ. ವಿದ್ಯಾರ್ಥಿನಿಲಯಗಳ ಪ್ರವೇಶ ಪ್ರಕ್ರಿಯೆ ಮುಗಿದ ಬಳಿಕ ಜಿಲ್ಲೆಯಲ್ಲಿ ಆಯಾ ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ತಾತ್ಕಾಲಿಕವಾಗಿ ಸ್ಥಾನಗಳನ್ನು ಆಂತರಿಕ ವರ್ಗಾವಣೆ ಮಾಡಿಕೊಂಡು ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿ ನಿಲಯಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪ್ರವೇಶ ದೊರಕದ ಅರ್ಹ ಹಿಂದುಳಿದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಅನುದಾನದ ಲಭ್ಯತೆಯ ಅನುಸಾರ, ವಿದ್ಯಾಸಿರಿ ಯೋಜನೆಯಡಿ ಪ್ರತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ರೂ. ನಂತೆ ಗರಿಷ್ಠ 10 ತಿಂಗಳಿಗೆ 15 ಸಾವಿರ ರೂ. ನೀಡಲಾಗುತ್ತಿದೆ…
ಬೆಂಗಳೂರು/ಬೆಳಗಾವಿ:- ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರು ಹಾಗೂ ಇತರ ನಗರ ಪ್ರದೇಶಗಳ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅವಕಾಶ ಸಿಗುತ್ತಿಲ್ಲ. ಹಾಗೆಯೇ ಪ್ರತಿ ಜಿಲ್ಲೆಯಲ್ಲೂ ಸಿಂಥೆಟಿಕ್ ಟ್ರ್ಯಾಕ್ಗಳ ನಿರ್ಮಾಣದ ಬಗ್ಗೆ ಹೇಳಲಾಗಿತ್ತು. ಈ ಯೋಜನೆಯ ಎಲ್ಲಿಯವರೆಗೆ ತಲುಪಿದೆ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವ ನಾಗೇಂದ್ರ, ರಾಜ್ಯದಲ್ಲಿ ಅಮೃತ ಕ್ರೀಡಾ ದತ್ತಿ ಯೋಜನೆಯಡಿ 75 ಮಂದಿಯನ್ನು ಆಯ್ಕೆ ಮಾಡಿಕೊಂಡು ತರಬೇತಿ ಕೊಡಿಸಲಾಗುತ್ತಿದೆ. ಜೊತೆಗೆ ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ ಸೇರಿದಂತೆ ಹಲವು ಸೌಲಭ್ಯಗಳ ಮೂಲಕ ಕ್ರೀಡೆಗೆ ಬೆಂಬಲ ನೀಡಲಾಗುತ್ತಿದೆ ಎಂದರು. 2024ರ ಒಲಿಂಪಿಕ್ ಕ್ರೀಡೆಗೆ ಸಜ್ಜುಗೊಳ್ಳುವ ಕ್ರೀಡಾಪಟುಗಳಿಗೆ ಆಹಾರದಿಂದ ಹಿಡಿದು ಎಲ್ಲಾ ರೀತಿಯ ಕಾಳಜಿಯನ್ನು ವಹಿಸಲಾಗುತ್ತಿದೆ. ಪ್ರತಿಯೊಬ್ಬರ ತರಬೇತಿಗೆ 10 ಲಕ್ಷ ರೂ.ಗಳನ್ನು ಖರ್ಚು…
ಬೆಂಗಳೂರು/ ಬೆಳಗಾವಿ :- ಸುವರ್ಣವಿಧಾನಸೌಧ ಡಿ.05: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಈ ಹುದ್ದೆಗಳಿಗೆ ಎರೆಡು ಹಂತದಲ್ಲಿ ನೇಮಕಾತಿಯ ಪ್ರಕ್ರಿಯೆ ನಡೆಯಲಿದೆ ಎಂದು ಕೃಷಿ ಸಚಿವ ಎನ್.ಚಲವರಾಯಸ್ವಾಮಿ ಹೇಳಿದರು. ಬುಧವಾರ ವಿಧಾನಸಭಾ ಅಧಿವೇಶನದಲ್ಲಿ ಬೀಳಗಿ ಶಾಸಕ ಪಾಟೀಲ್.ಜೆ.ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿವ ವೇಳೆ ನಡೆದ ಚರ್ಚೆಯಲ್ಲಿ, ಅವರು ಈ ಮಾಹಿತಿಯನ್ನು ಸದನಕ್ಕೆ ನೀಡಿದರು. ಕೃಷಿ ಇಲಾಖೆಯಲ್ಲಿ ಶೇ.60 ರಷ್ಟು ಹುದ್ದೆಗಳ ಕೊರತೆ ಇದೆ. ಇದರಿಂದಾಗಿ ಹೋಬಳಿ ಹಾಗೂ ಗ್ರಾಮಗಳಲ್ಲಿ ಅಧಿಕಾರಿಗಳು ತೆರಳಿ ಕ್ಷೇತ್ರ ಕಾರ್ಯನಿರ್ವಹಿಸುವಲ್ಲಿ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ನೇಮಕಾತಿ ಮಾಡುವ ಮೂಲಕ ಶೀಘ್ರವೇ ಬಗೆಹರಿಸಲಾಗುವುದು. ಸರ್ಕಾರ ಕೃಷಿ, ನೀರಾವರಿ ಹಾಗೂ ರೈತರ ಜಮೀನ ರಸ್ತೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದೆ. ಸದ್ಯ ಕೃಷಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರ ಹಾಗೂ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ತೆರಳಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಕೃಷಿ ಭೂಮಿಯ…