ಬೆಂಗಳೂರು:- ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ಕೇವಲ 1,500 ರೂಪಾಯಿ ವಿಚಾರಕ್ಕೆ ಕೊಲೆ ನಡೆದಿರುವ ಘಟನೆ ಜರುಗಿದೆ.
ಸ್ನೇಹಿತನಿಗೆ ಹಣ ಕೊಡಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬಾರ್ವೊಂದರಲ್ಲಿ ಗೋಪಾಲ್, ಶಶಿ ಹಾಗೂ ಕರಿಗೌಡ ಎಂಬುವವರು ಮದ್ಯ ಸೇವಿಸುತ್ತಿದ್ದರು. ಇದೇ ವೇಳೆ ಅದೇ ಬಾರ್ಗೆ ಪ್ರದೀಪ್ ಎಂಬುವವರ ಜೊತೆ ಆರೋಪಿ ಗಿರೀಶ್ ಬಂದಿದ್ದಾರೆ. ಕರಿಗೌಡಗೆ 1,500 ರೂಪಾಯಿಯನ್ನು ಆರೋಪಿ ಗಿರೀಶ್ಗೆ ಕೊಡಬೇಕಿತ್ತು. ಅದರಂತೆ ಆತ ತನ್ನ ಹಣ ಕೇಳಿದಾಗ, ಗಿರೀಶ್ ಅವಾಜ್ ಹಾಕಿದ್ದ. ಬಳಿಕ ಮಧ್ಯಪ್ರವೇಶಿಸಿದ ಗೋಪಾಲ್ ಎಂಬಾತ, ಗಿರೀಶ್ಗೆ ಹೊಡೆದು ಹಣ ಕೊಡಿಸಿದ್ದ.
ಇದಾದ ಬಳಿಕ ಗಿರೀಶ್, ಶಶಿಗೆ ಪೋನ್ ಮಾಡಿ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದ. ಆಮೇಲೆ ಗೋಪಾಲ್, ಕರೆಗೌಡ ಹಾಗೂ ಶಶಿಧರ್, ಗಿರೀಶ್ ಮನೆಗೆ ಹೋಗಿದ್ದರು. ಗಿರೀಶ್ಗೆ ಸರಿಯಾಗಿ ಮಾತನಾಡುವಂತೆ ಆತನ ಪತ್ನಿ ಬಳಿಯಲ್ಲಿ ಮೂವರು ಹೇಳಿದ್ದರು. ಈ ವೇಳೆ ಅಡುಗೆ ಮನೆಯಿಂದ ಚಾಕು ತಂದು ಬೆನ್ನ ಹಿಂದೆ ಇಟ್ಟುಕೊಂಡಿದ್ದ ಗಿರೀಶ್, ಗೋಪಾಲ್ ಎದೆಗೆ ಚಾಕುವಿನಿಂದ ಚುಚ್ಚಿ ಮನೆಯಿಂದ ಎಸ್ಕೇಪ್ ಆಗಿದ್ದ.
ಇನ್ನು ಆತ ಚಾಕು ಇರಿಯುತ್ತಿದ್ದಂತೆ ಆತನ ಸ್ನೇಹಿತರು, ಗೋಪಾಲ್ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಆರೋಪಿ ಗಿರೀಶ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.