ಬೆಂಗಳೂರು:– ಗೂಳಿಹಟ್ಟಿ ಶೇಖರ್ ಆಡಿಯೋ ವಿಚಾರವಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪಿ.ರಾಜೀವ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಂಘಟನೆ ಕುರಿತಾಗಿ ಗೂಳಿಹಟ್ಟಿ ಶೇಖರ್ ಮಾತಾಡಿರುವ ಹೇಳಿಕೆ ವೈರಲ್ ಆಗಿರುವುದು ಗಮನಸಿದ್ದೇನೆ. ಗೂಳಿಹಟ್ಟಿ ಶೇಖರ್ ಯಾವ ಮಾನಸಿಕ ಸ್ಥಿತಿಯಲ್ಲಿ..? ಯಾರಿಂದ ಪ್ರೇರಣೆಗೆ ಒಳಗಾಗಿ. ಯಾವ ಕಾಣದ ಕೈಳಗ ಒತ್ತಡಕ್ಕೆ ಒಳಗಾಗಿ ಹೇಳಿದ್ದಾರೆ ಗೊತ್ತಿಲ್ಲ. ಗೂಳಿಹಟ್ಟಿ ಶೇಖರ್ ಹೇಳಿದ್ದು ತಪ್ಪು. ನಾನು ರಾಜಕೀಯಕ್ಕೆ ಬಂದಮೇಲೆ ರಾಷ್ಟ್ರೀಯ ಸಂಘಪರಿವಾರವನ್ನು ಹತ್ತಿರದಿಂದ ನೋಡಿದ್ದೇನೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ
ಎಲ್ಲರನ್ನೂ ಜೋಡಿಸುವುದು, ಸಂಪೂರ್ಣ ಹಿಂದೂ ಸಂಘಟನೆ ಒಗ್ಗೂಡಿಸುವ ಕೆಲಸ ಮಾಡುತ್ತದೆ.
ಸಂಘ ಭಾರತ ಮಾತೆಯ ಪೋಟೋ ಇಟ್ಟು ಪೂಜೆ ಮಾಡುತ್ತಾರೆ. ಯಾರಾದರೂ ಬಂದಾಗ ಜಾತಿ ಕೇಳುವುದು, ಇಂತಹ ಆಚರಣೆ ನನ್ನ ಅನುಭವಕ್ಕೆ ಬಂದಿಲ್ಲ. ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ದೇಶ ಕಟ್ಟಬೇಕು ಎಂದು ನಿರಂತರ ಹೋರಾಟ ಮಾಡುತ್ತಿರುವ ಸಂಘಟನೆ. ಸ್ವಯಂ ಸೇವಕರು ಯಾವುದೇ ಸನ್ಯಾಸಿಗೂ ಕಡಿಮೆ ಇಲ್ಲದೇ ಎಲ್ಲವನ್ನೂ ತ್ಯಾಗ ಮಾಡಿ ದೇಶ ಸೇವೆಗೆ ನಿಂತಿರುತ್ತಾರೆ ಎಂದರು.
ಇನ್ನೂ ಗೂಳಿಹಟ್ಟಿ ಶೇಖರ್ ಅವರಿಗೆ ಹೆಡ್ಗೆವಾರ್ ಅಂತಾನೂ ಹೇಳೊಕೆ ಬಂದಿಲ್ಲ. ಹೆಗಡೆ ವಾರ್ ಅಂತ ಹೇಳ್ತಿದ್ದಾರೆ. ಯಾರದ್ದೂ ಮಾತಿನಿಂದ ಯಾರದ್ದೂ ಕುಮ್ಮಕ್ಕಿನಿಂದ
ಸಂಘದ ಬಗ್ಗೆ ಅರಿವಿಲ್ಲದೆ ಈ ರೀತಿಯ ಮಾತು ಹೇಳುವುದು ತಪ್ಪು ಎಂದರು.
ಇದೇ ವೇಳೆ ಪ್ರಿಯಾಂಕ ಖರ್ಗೆಗೆ ತಿರುಗೇಟು ನೀಡಿರುವ ಅವರು, ಇವರಿಗೆ RSS ನವರ ಸಂಪರ್ಕವೇ ಇರಲಿಲ್ಲ. ಆರ್.ಎಸ್.ಎಸ್ ಸಂಪರ್ಕಕ್ಕೆ ಬರಲ್ಲ. ಆರ್ ಎಸ್ ಎಸ್ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ. ಗಂದಗಾಳಿ ಗೊತ್ತಿಲ್ಲದೆ ಆಳ ಅರಿವು ಅಂತ ಲೇಖನ ಬರೆಯೋದು. ಗಂಧಗಾಳಿ ಇಲ್ಲದೇ ಒಳಗಡೆ ಪ್ರವೇಶ ಇಲ್ಲ ಅಂತ ಹೇಳುವುದು ತಪ್ಪು. ಅಂಬೇಡ್ಕರ್ ಯಾವತ್ತೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟೀಕೆ ಮಾಡಿಲ್ಲ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ತುಳಿಯುವ ಕೆಲಸ ಮಾಡ್ತು. ಜಾತಿ ವ್ಯವಸ್ಥೆ ಇಲ್ಲವೇ ಇಲ್ಲ. ನಾನು ಮುಕ್ತವಾಗಿ ಆಹ್ವಾನ ಕೊಡುತ್ತೇನೆ.
ಗೂಳಿಹಟ್ಟಿ ಶೇಖರ್ ಹೇಳಿದ್ದು ಒನ್ ವೇ ವಾಯ್ಸ್. ಬಹಳ ತೊದಲುತ್ತಾ ಇದಾರೆ. ಬಹುತೇಕ ರಾತ್ರಿ 8 ನಂತರ ಮಾತನಾಡಿದ ಧ್ವನಿ ಇದು. ಇದಕ್ಕೆ ಕಾಣದ ಕೈಗಳ ಷಡ್ಯಂತ್ರ. ಕಾಂಗ್ರೆಸ್ ಸರ್ಕಾರ ದಲಿತರ ಹಣ ಬೇರೆ ಯೋಜನೆಗೆ ಬಳಸಿಕೊಂಡು ದಲಿತರಿಗೆ ಬಹಳ ಅನ್ಯಾಯ ಮಾಡಿದ್ದಾರೆ. ಇದನ್ನು ಮುಚ್ಚಿಡಲು ಈ ರೀತಿಯ ಕೆಲಸ ಮಾಡ್ತಿದೆ. ಹೀಗಾಗಿ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ ಎಂದರು.