Author: AIN Author

ಬೆಳಗಾವಿ: ವಿಧಾನಮಂಡಲದ ಚಳಿಗಾಲ ಅಧಿವೇಶನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಗರಕ್ಕೆ ಆಗಮಿಸಿದರು. ಸಾಂಬ್ರಾ ವಿಮಾನ ನಿಲ್ದಾಣದ ಹೊರಗಡೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು. ಗ್ಯಾರಂಟಿ ಗಳನ್ನು ಘೋಷಿಸಿದಕ್ಕಾಗೇ ಕಾಂಗ್ರೆಸ್ ತೆಲಂಗಾಣದಲ್ಲಿ ಗೆಲ್ಲುವುದು ಸಾಧ್ಯವಾಯಿತು ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ತಮ್ಮ ರಾಜ್ಯದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಚುನಾವಣೆ ಗೆದ್ದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. https://ainlivenews.com/dialysis-problem-not-caused-by-our-government-dinesh-gundurao/ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದ್ದು ಚುನಾವಣೆಯಲ್ಲಿ ಗೆಲ್ಲುವುದಕ್ಕಲ್ಲ, ಅವು ಎಲ್ಲಾ ವರ್ಗಗಳ ಬಡವರಿಗೆ ನೆರವಾಗಲು ರೂಪಿಸಿರುವ ಕಾರ್ಯಕ್ರಮಗಳು ಎಂದು ಹೇಳಿದ ಸಿದ್ದರಾಮಯ್ಯ, ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು 6 ತಿಂಗಳು ಸಮಯ ತೆಗೆದುಕೊಂಡ ಬಿಜೆಪಿಗೆ ತಮ್ಮ ಸರ್ಕಾರಕ್ಕೆ ಸಲಹೆ ನೀಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.

Read More

ಬೆಳಗಾವಿ:- ಡಿ.4ರಂದು ಸುವರ್ಣಸೌಧಕ್ಕೆ ರೈತರಿಂದ ಮುತ್ತಿಗೆ ಹಾಕಲಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಡಿ.4ರ ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ಸಾವಿರಾರು ರೈತರು ಪಾದಯಾತ್ರೆ ಮೂಲಕ ತೆರಳಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಜಾರಿಗೊಳಿಸಿ ಬಳಿಕ ಅದನ್ನು ವಾಪಸ್ ಪಡೆದಿದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿತ್ತು. ಈ ವೇಳೆ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎಂದು ಹೇಳಿದ್ದರು. ಆದರೆ, ಈಗ ಕೃಷಿ ಕಾಯ್ದೆಯನ್ನು ವಾಪಸ್‌ ಪಡೆದಿಲ್ಲ. ರೈತರ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ರೈತರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೆಂಬಲಿಸಿದ್ದರು. ಕಳೆದ ಅಧಿವೇಶನದಲ್ಲಿ ಸಚಿವ ಶಿವಾನಂದ ಪಾಟೀಲ್ ಕೃಷಿ ಕಾಯ್ದೆ…

Read More

ಬಾಳೆಹಣ್ಣಿನ ಬೋಂಡಾ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಸುಲಭವಾಗಿ ಮಾಡಬಹುದು. ಇನ್ನು ತುಂಬಾ ಹಣ್ಣಾದ ಬಾಳೆಹಣ್ಣಿದ್ದರೆ ಅದನ್ನು ಬಳಸಿಯೂ ಈ ಬೋಂಡಾ ಮಾಡಬಹುದು. ನಾವಿಲ್ಲಿ ಬಾಳೆಹಣ್ಣಿನ ಬೋಂಡಾದ ಸಿಂಪಲ್ ರೆಸಿಪಿ ನಿಡಿದ್ದೇವೆ ನೋಡಿ. ಬೇಕಾಗುವ ಸಾಮಗ್ರಿ 6 ಚಿಕ್ಕ ಬಾಳೆಹಣ್ಣು 1ಕಪ್‌ ಮೈದಾ 1/2 ಕಪ್‌ ಸಕ್ಕರೆ 1/4ಚಮಚ ಅಡುಗೆ ಸೋಡಾ 1/2ಚಮಚ ಏಲಕ್ಕಿ ಮಾಡುವ ವಿಧಾನ * 6 ಚಿಕ್ಕ ಬಾಳೆಹಣ್ಣಿನ ಸಿಪ್ಪೆ ಸುಲಿಯಿರಿ * ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ 1/2 ಕಪ್ ಸಕ್ಕರೆ ಹಾಕಿ ರುಬ್ಬಿ * ನಂತರ ಮಿಕ್ಸಿಂಗ್‌ ಬೌಲ್‌ನಲ್ಲಿ ಬಾಳೆಹಣ್ಣಿನ ಪೇಸ್ಟ್‌, 1 ಕಪ್‌ ಮೈದಾ, 1/4 ಚಮಚ ಅಡುಗೆ ಸೋಡಾ, 1/2 ಚಮಚ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. * ಮಿಕ್ಸ್ ಮಾಡುವಾಗ ಗಂಟು ಕಟ್ಟಬಾರದು, ಚೆನ್ನಾಗಿ ಮಿಕ್ಸ್ ಮಾಡಿ. * ನಂತರ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ * ನಂತರ ಎಣ್ಣೆ ಕಾಯುವಾಗ ಕೈಯಿಂದ ಸ್ವಲ್ಪ ಹಿಟ್ಟು ತೆಗೆದು ಎಣ್ಣೆಯಲ್ಲಿ ಹಾಕಿ,…

Read More

ಇಂದು ಅಥವಾ ಮುಂದೆ ಎಂದಾದ್ರೂ ಮಟನ್‌ ಖರೀದಿಸಿದರೆ ಚೆಟ್ಟಿನಾಡ್‌ ಮಟನ್‌ ಕರಿ ಟ್ರೈ ಮಾಡಿ. ಸಾಮಗ್ರಿಗಳು ಹೆಚ್ಚಿಗೆ ಬೇಕಿದ್ರೂ ರುಚಿಗೆ ಮಾತ್ರ ಸರಿ ಸಮ ಬೇರೆ ಇಲ್ಲ. ಚೆಟ್ಟಿನಾಡ್‌ ಮಟನ್‌ ಕರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ. ಬೇಕಾಗುವ ಸಾಮಗ್ರಿಗಳು ಮಟನ್‌ – 1 ಕಿಲೋ ಧನಿಯಾ – 2 ಟೇಬಲ್‌ ಸ್ಪೂನ್‌ ಸೋಂಪು ಕಾಳು – 1 ಟೇಬಲ್‌ ಸ್ಪೂನ್‌ ಕರಿಮೆಣಸು – 1 ಟೇಬಲ್‌ ಸ್ಪೂನ್‌ ಚೆಕ್ಕೆ – 1 ಇಂಚು ಒಣಮೆಣಸಿನ ಕಾಯಿ -6 ಕಾಶ್ಮೀರಿ ಕೆಂಪು ಮೆಣಸಿನಕಾಯಿ – 4 ಸ್ಟಾರ್‌ ಅನಿಸ್‌ 1 ಜೀರ್ಗೆ – 1 ಟೇಬಲ್‌ ಸ್ಪೂನ್‌ ಏಲಕ್ಕಿ – 3 ಲವಂಗ – 8 ತೆಂಗಿನಕಾಯಿ ತುರಿ – 1/2 ಕಪ್‌ ಗಸಗಸೆ – 2 ಟೇಬಲ್‌ ಸ್ಪೂನ್‌ ಸ್ಟೋನ್‌ ಫ್ಲವರ್‌ – 1 ಇಂಚು ಸಾಂಬಾರ್‌ ಈರುಳ್ಳಿ – 1 ಕಪ್‌ ಕರಿಬೇವು -…

Read More

ಶಿವಮೊಗ್ಗ :- ಸಿದ್ದರಾಮಯ್ಯರೇ ಇನ್ನೂ 4 ವರ್ಷ ನೀವೇ CM ಆಗಬೇಕೆನ್ನುವುದು ನನ್ನ ಆಸೆ ಎಂದು ಮಾಜಿ ಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸ್ನೇಹಿತನಾಗಿ, ಹಿತೈಷಿಯಾಗಿ, ಸಹೋದರನಾಗಿ ಹೇಳುತ್ತೇನೆ ಎಷ್ಟು ದಿ‌ನ ನೀವು ಮುಖ್ಯಮಂತ್ರಿ ಆಗಿರುತ್ತಿರೆಂದು ಗೊತ್ತಿಲ್ಲ. ನೀವು ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿ ಆಗಿರಬೇಕೆಂದು ನನ್ನ ಆಸೆ. ನಿಮ್ಮ ಆಡಳಿತದಲ್ಲಿ ದೇವರಾಜ್ ಅರಸ್ ಅವರು ಮಾಡಿದ ಕೆಲಸ ಮಾಡಲಾಗಲ್ಲ. ಅವರನ್ನು ಪದೇ ಪದೆ ನೆನಪಿಸಿಕೊಳ್ಳುತ್ತಿರಿ. ವಸತಿ ಯೋಜನೆಯ ಮನೆಗಳು ಶಿವಮೊಗ್ಗದಲ್ಲಿ ನಿಂತು ಹೋಗಿದೆ. ಬಡವರಿಗೆ ಮನೆ ಕಟ್ಟಲು ಹಿಂದಿನ ಸರ್ಕಾರ ಮಾಡಿದ ಕೆಲಸವನ್ನು ಪೂರ್ಣಗೊಳಿಸಿ. ಆಗ ಜನ ನಿಮ್ಮ ಪೋಟೋ ಹಾಕಿ ನೆನಪಿಸಿಕೊಳ್ಳುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು. ಕರ್ನಾಟಕದಲ್ಲಿ ಅತಿ ಹೆಚ್ಚು ಬಜೆಟ್ ಮಾಡಿರುವ ಅರ್ಥ ಸಚಿವರು ನೀವು. ಆದರೂ ಗ್ಯಾರಂಟಿಗಳ ಹಳ್ಳಕ್ಕೆ ಯಾಕೆ ಬಿದ್ದಿರಿ ಗೊತ್ತಿಲ್ಲ. ಹಾಸ್ಟೆಲ್, ಸಮುದಾಯ ಭವನಗಳು ಅರ್ಧಕ್ಕೆ ನಿಂತು ಹೋಗಿದೆ. ನಿಮ್ಮ ಸ್ವತಂತ್ರ ಯೋಚನೆಗಳನ್ನು…

Read More

ಬೆಳಗಾವಿ:- ಬಿಜೆಪಿ ಬಿಟ್ಟು ನಾನೆಲ್ಲೂ ಹೋಗಲ್ಲ ಎಂದು ಹೇಳುವ ಮೂಲಕ ಎಸ್ ಟಿ ಸೋಮಶೇಖರ್ ಅವರು ಯು ಟರ್ನ್ ಹೊಡೆದಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಪಕ್ಷದ ಮೇಲೆಯೇ ಮುನಿಸಿಕೊಂಡಿದ್ದ ಮಾಜಿ ಸಚಿವ ಎಸ್​ಟಿ ಸೋಮಶೇಖರ್ ಯುಟರ್ನ್ ತೆಗೆದುಕೊಂಡಂತೆ ಕಾಣಿಸುತ್ತಿದೆ. ಬಿಜೆಪಿ ಸಭೆಗಳಿಗೆ ಗೈರಾಗುತ್ತಿದ್ದ ಎಸ್​ಟಿ ಸೋಮಶೇಖರ್, ಸದ್ಯಕ್ಕೆ ಪಕ್ಷ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ. ಮೂರು ರಾಜ್ಯಗಳ ಬಿಜೆಪಿ ಗೆಲುವು ಏನು ಹೇಳೋಕೆ ಆಗಲ್ಲ. ಅದು ರಾಷ್ಟ್ರೀಯ ಪಕ್ಷಗಳಿಗೆ ಕಾಮನ್. ಸದನದಲ್ಲಿ ನನ್ನ ನಿಲುವು ಏನಿರುತ್ತೆ ಅಂದರೆ ಏನು ಹೇಳಲಿ? ಸದ್ಯಕ್ಕೆ ಬಿಜೆಪಿಯಲ್ಲಿ ಇದ್ದೇನೆ, ಮುಂದೆ ನೋಡೋಣ ಎಂದು ಎಸ್​ಟಿ ಸೋಮಶೇಖರ್ ಹೇಳಿದರು.

Read More

‘ಬಿಗ್‌ಬಾಸ್‌ ಮನೆಗೆ ‘ಚಾರ್ಲಿ’ ಬರ್ತಾನೆ ಎನ್ನುವುದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದುವರೆಗೆ ಚಾರ್ಲಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ‘ಚಾರ್ಲಿ’ಗೆ ಸಿನಿಮಾದಲ್ಲಿ ಚಿಕಿತ್ಸೆ ನೀಡಿದ್ದ ಡಾಕ್ಟರ್, ಸಂಗೀತಾ ಶೃಂಗೇರಿ ನಾಯಿ ಥರ ಆಡ್ತಿದ್ದಾರೆ! ಇದೇನು ಇಷ್ಟು ಕೀಳುಭಾಷೆಯಲ್ಲಿ ಸ್ಪರ್ಧಿಯನ್ನು ಹೀಗಳೆಯುತ್ತಿದ್ದಾರೆ ಎಂದು ಕೋಪಿಸಿಕೊಳ್ಳಬೇಡಿ. ಇದು ಹೀಗಳೆಯಲು ಹೇಳಿದ್ದು ಖಂಡಿತ ಅಲ್ಲ. ಈ ಮಾತು ಅಕ್ಷರಶಃ ಸತ್ಯ! ಅದು ಹೇಗೆಂಬುದು ಇಂದು JioCinema ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಜಾಹೀರಾಗಿದೆ. ಸಂಗೀತಾ ಅವರು ನಾಯಿಯ ಹಾಗೆ ಕೈಗಳನ್ನೂ ಕಾಲಾಗಿಸಿಕೊಂಡು, ಮನೆಯೊಳಗೆ ನಾಯಿಯ ಹಾಗೆ ನಡೆದಾಡುತ್ತ, ಅಳುವ ನಾಯಿಯ ಹಾಗೆ ಕೂಗುತ್ತ ಓಡಾಡುತ್ತಿದ್ದಾರೆ! ಬಿಗ್‌ಬಾಸ್ ಮನೆಯೊಳಗೆ ಇದೇನೂ ಹೊಸ ಸಮಸ್ಯೆ ಎನ್ನಬೇಡಿ. ಇದು ಬಿಗ್‌ಬಾಸ್ ಅವರೇ ಮನೆಯ ಸ್ಪರ್ಧಿಗಳಿಗೆ ನೀಡಿದ ಹೊಸ ಟಾಸ್ಕ್‌! ‘ಬಿಗ್‌ಬಾಸ್‌ ಸೂಚಿಸಿದ ಚಟುವಟಿಕೆಗಳನ್ನು ಮನೆಯ ಸ್ಪರ್ಧಿಗಳು ಮಾಡಬೇಕು’ ಎಂಬುದು ಈ ವಾರದ ಮೊದಲ ಟಾಸ್ಕ್‌. ಇದರ ಭಾಗವಾಗಿಯೇ ಸಂಗೀತಾ ಅಳುತ್ತಿರುವ ನಾಯಿಯ ಹಾಗೆ ಆಡುತ್ತಿದ್ದಾರೆ. ತುಕಾಲಿ ಸಂತೋಷ್ ಕೂಡ ನಾಯಿಯ ಹಾಗೆ…

Read More

ನವದೆಹಲಿ:- ಮೂರು ರಾಜ್ಯಗಳ ಗೆಲುವಿಗೆ ನಡ್ಡಾ ಪರಿಶ್ರಮ ಕಾರಣ ಎಂದು PM ಪ್ರಧಾನಿ ಮೋದಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಡ್ಡಾ ಅವರ ಸಂಘಟನಾ ಕೌಶಲ್ಯ ಮತ್ತು ತೆರೆಮರೆಯಲ್ಲಿ ಅವರು ಮಾಡಿದ ದಣಿವರಿಯದ ಕೆಲಸಕ್ಕಾಗಿ ಶ್ಲಾಘಿಸಿದರು, ಇದು ಪಕ್ಷದ ಅಂತಿಮ ಚುನಾವಣಾ ಯಶಸ್ಸಿಗೆ ಅಡಿಪಾಯ ಹಾಕಿತು. ವೈಯಕ್ತಿಕ ದುಃಖದ ನಡುವೆಯೂ ಬಿಜೆಪಿ ರಾಷ್ಟ್ರೀಯ ಮುಖ್ಯಸ್ಥರು ಚುನಾವಣಾ ಪ್ರಚಾರಕ್ಕೆ ಹೇಗೆ ಧುಮುಕಿದರು ಎಂಬುದರ ಕುರಿತು ಪ್ರಧಾನಿ ಮೋದಿ ವಿಶೇಷ ಉಲ್ಲೇಖವನ್ನು ಮಾಡಿದರು. ಭಾರತ್ ಮಾತಾ ಕಿ ಜೈ ಘೋಷಣೆಗಳೊಂದಿಗೆ ಕಾರ್ಯಕರ್ತರು ಅವರ ಹೆಸರನ್ನು ಜಪಿಸುತ್ತಿದ್ದಂತೆ, ಪಕ್ಷದ ಅದ್ಭುತ ಗೆಲುವಿಗೆ ನಡ್ಡಾ ಅವರು ಪಕ್ಷದಲ್ಲಿನ ಆರೋಪಗಳ ಸಮರ್ಥ ಉಸ್ತುವಾರಿ ಮತ್ತು ಅವರ ಚುನಾವಣಾ ಚಾಣಾಕ್ಷತೆ ಮತ್ತು ತಂತ್ರಗಳು ಕಾರಣವೆಂದು ಪ್ರಧಾನಿ ಮೋದಿ ಹೇಳಿದರು.

Read More

ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜಿ” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. “ಲಿಯೋ” ಖ್ಯಾತಿಯ ಸ್ಯಾಂಡಿ ಮಾಸ್ಟರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಶ್ರೀನಗರ ಕಿಟ್ಟಿ “ರೋಜಿ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಗರ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಚಿತ್ರತಂಡ ಬಿಡುಗಡೆ ಮಾಡಿದೆ. ಶಾಂತಿನಗರದ ಮೈದಾನದಲ್ಲಿ ಶ್ರೀನಗರ ಕಿಟ್ಟಿ ಅವರ ಮೂವತ್ತು ಅಡಿ ಪೋಸ್ಟರ್ ಬಿಡುಗಡೆ ಮಾಡಿ, ಕಿಟ್ಟಿ ಅವರನ್ನು ಚಿತ್ರಕ್ಕೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಪೋಸ್ಟರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಅವರು ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಇನ್ನು ಹೆಚ್ಚು ಖುಷಿಯಾಗಿದೆ. “ಕ್ರಿಸ್ಟೋಫರ್” ನನ್ನ ಪಾತ್ರದ ಹೆಸರು ಎಂದರು ಶ್ರೀನಗರ ಕಿಟ್ಟಿ.ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಆರಂಭಿಸಿದ ನಟ ಯೋಗಿ, ನಾವಿಬ್ಬರು “ಹುಡುಗರು” ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ ಎಂದರು. ನಿರ್ದೇಶಕ ಶೂನ್ಯ,…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಡಿ.9ರ ತನಕ ‘ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿಗಾಲ ಆರಂಭವಾದರೂ ಸಹಿತ ಬೆಂಗಳೂರು ಪ್ರತಿ ವರ್ಷದಂತೆ ಈ ವರ್ಷ ಇಲ್ಲ. ಕೆಲವು ದಿನಗಳಿಂದ ಚಳಿಯೂ ಅಲ್ಲದ, ಅಧಿಕ ಬಿಸಿಲು ಬೀಳದೆ ಮತ್ತು ನಿರೀಕ್ಷಿತ ಮಳೆ ಆಗದೇ ಇರುವ ವಾತಾವರಣ ಉಂಟಾಗಿತ್ತು. ಸದ್ಯ ಅದೆಲ್ಲವು ಈಗ ಬದಲಾಗಿದ್ದು, ಚಳಿಯ ವಾತಾವರಣ ಏರಿಕೆ ಆಗಲಿದೆ. ಬಂಗಾಳಕೊಲ್ಲಿ-ಅಂಡಮಾನ್ ಸಮುದ್ರ ಭಾಗದಲ್ಲಿ ಉಂಟಾಗಿರುವ ಮೈಚಾಂಗ್ ಚಂಡಮಾರುತ ಪ್ರಭಾವದಿಂದಾಗಿ ಬೆಂಗಳೂರಿನ ವಾತಾವರಣ ಬದಲಾಗಿದೆ. ಮೈಚಾಂಗ್ ಇಂದು ತೀವ್ರ ಸ್ವರೂಪ ಪಡೆದುಕೊಂಡು ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಓಡಿಶಾ ಕರಾವಳಿಗೆ ಅಪ್ಪಳಿಸುವ ಮುನ್ಸೂಚನೆ ಇದೆ. ಚಂಡಮಾರುತ ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ಮಂಗಳವಾರದವರೆಗೆ ಇದೇ ವಾತಾವರಣ ಮುಂದುವರಿಯಲಿದೆ. ಕೆಲವೆಡೆ ಸೋನೆ ಮಳೆ ಬರಲಿದೆ. ನಂತರದ ಡಿಸೆಂಬರ್ 10ರವರೆಗೆ ಮತ್ತಷ್ಟು ಚಳಿಯ ವಾತಾವರಣ ಸೃಷ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ನಗರದಲ್ಲಿ ಡಿಸೆಂಬರ್…

Read More