ಇಂದು ಅಥವಾ ಮುಂದೆ ಎಂದಾದ್ರೂ ಮಟನ್ ಖರೀದಿಸಿದರೆ ಚೆಟ್ಟಿನಾಡ್ ಮಟನ್ ಕರಿ ಟ್ರೈ ಮಾಡಿ. ಸಾಮಗ್ರಿಗಳು ಹೆಚ್ಚಿಗೆ ಬೇಕಿದ್ರೂ ರುಚಿಗೆ ಮಾತ್ರ ಸರಿ ಸಮ ಬೇರೆ ಇಲ್ಲ. ಚೆಟ್ಟಿನಾಡ್ ಮಟನ್ ಕರಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ.
ಬೇಕಾಗುವ ಸಾಮಗ್ರಿಗಳು
ಮಟನ್ – 1 ಕಿಲೋ
ಧನಿಯಾ – 2 ಟೇಬಲ್ ಸ್ಪೂನ್
ಸೋಂಪು ಕಾಳು – 1 ಟೇಬಲ್ ಸ್ಪೂನ್
ಕರಿಮೆಣಸು – 1 ಟೇಬಲ್ ಸ್ಪೂನ್
ಚೆಕ್ಕೆ – 1 ಇಂಚು
ಒಣಮೆಣಸಿನ ಕಾಯಿ -6
ಕಾಶ್ಮೀರಿ ಕೆಂಪು ಮೆಣಸಿನಕಾಯಿ – 4
ಸ್ಟಾರ್ ಅನಿಸ್ 1
ಜೀರ್ಗೆ – 1 ಟೇಬಲ್ ಸ್ಪೂನ್
ಏಲಕ್ಕಿ – 3
ಲವಂಗ – 8
ತೆಂಗಿನಕಾಯಿ ತುರಿ – 1/2 ಕಪ್
ಗಸಗಸೆ – 2 ಟೇಬಲ್ ಸ್ಪೂನ್
ಸ್ಟೋನ್ ಫ್ಲವರ್ – 1 ಇಂಚು
ಸಾಂಬಾರ್ ಈರುಳ್ಳಿ – 1 ಕಪ್
ಕರಿಬೇವು – 1 ಎಸಳು
ಕತ್ತರಿಸಿದ ಈರುಳ್ಳಿ – 1 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್ ಸ್ಪೂನ್
ಅರಿಶಿನ – 1/2 ಟೀ ಸ್ಪೂನ್
ಕತ್ತರಿಸಿದ ಟೊಮೆಟೊ – 1 ಕಪ್
ಕತ್ತರಿಸಿದ ಕೊತ್ತಂಬರಿ ಸೊಪ್ಪು – 3 ಟೇಬಲ್ ಸ್ಪೂನ್
ರಾಕ್ ಸಾಲ್ಟ್ – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
– ಅಂಗಡಿಯಿಂದ ತಂದ ಮಟನನ್ನು 3-4 ಬಾರಿ ತೊಳೆದು ನೀರು ಸೋರಲು ಬಿಡಿ
– ಗಸಗಸೆ ಹಾಗೂ ತೆಂಗಿನಕಾಯಿ ಹೊರತುಪಡಿಸಿ ಎಲ್ಲಾ ಮಸಾಲೆಗಳನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ
– ಮಸಾಲೆ ಸುವಾಸನೆ ಬಂದಾಗ ಗಸಗಸೆ ಹಾಗೂ ತೆಂಗಿನತುರಿ ಸೇರಿಸಿ ಮತ್ತೆ ಕಡಿಮೆ ಉರಿಯಲ್ಲಿ 1 ನಿಮಿಷ ರೋಸ್ಟ್ ಮಾಡಿ
– ಹುರಿದ ಮಿಶ್ರಣ ತಣ್ಣಗಾದ ನಂತರ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಗ್ರೈಂಡ್ ಮಾಡಿ
– ಈ ಮಿಶ್ರಣವನ್ನು ಮಟನ್ ಜೊತೆ ಸೇರಿಸಿ ಕನಿಷ್ಠ 1 ಗಂಟೆ ಆದರೂ ಮ್ಯಾರಿನೇಟ್ ಆಗಲು ಬಿಡಿ
– ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸ್ಟೋನ್ ಫ್ಲವರ್, ಕರಿಬೇವು, ಶಾಲೊಟ್ಸ್, ಕತ್ತರಿಸಿದ ಈರುಳ್ಳಿ ಸೇರಿಸಿ
– ಸ್ವಲ್ಪ ಸಮಯದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಅರಿಶಿನ, ಟೊಮೆಟೊ ಸೇರಿಸಿ 3-4 ನಿಮಿಷ ಹುರಿಯಿರಿ
– ನಂತರ ಮ್ಯಾರಿನೇಟ್ ಮಾಡಿದ ಮಟನ್, ರಾಕ್ ಸಾಲ್ಟ್ ಸೇರಿಸಿ 2 ನಿಮಿಷ ಹುರಿಯಿರಿ
– ಅವಶ್ಯಕತೆಗೆ ತಕ್ಕಷ್ಟು ನೀರು ಸೇರಿಸಿ ಪ್ರೆಶರ್ ಕುಕ್ಕರ್ನಲ್ಲಿ ಮಟನ್ ಕುಕ್ ಆಗುವರೆಗೂ ಬೇಯಿಸಿ ( ಮೊದಲ ಸೀಟಿ ಬಂದಾಗ ಮಧ್ಯಮ ಫ್ಲೇಮ್ ಇಡಿ.
– ಕುಕ್ಕರ್ ಸ್ಟೀಮ್ ಬಿಟ್ಟ ನಂತರ ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ
ಚೆಟ್ಟಿನಾಡ್ ಮಟನ್ ಕರಿ ತಿನ್ನಲು ರೆಡಿ ಆಗಲಿದೆ