ಶಿವಮೊಗ್ಗ :– ಸಿದ್ದರಾಮಯ್ಯರೇ ಇನ್ನೂ 4 ವರ್ಷ ನೀವೇ CM ಆಗಬೇಕೆನ್ನುವುದು ನನ್ನ ಆಸೆ ಎಂದು ಮಾಜಿ ಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸ್ನೇಹಿತನಾಗಿ, ಹಿತೈಷಿಯಾಗಿ, ಸಹೋದರನಾಗಿ ಹೇಳುತ್ತೇನೆ ಎಷ್ಟು ದಿನ ನೀವು ಮುಖ್ಯಮಂತ್ರಿ ಆಗಿರುತ್ತಿರೆಂದು ಗೊತ್ತಿಲ್ಲ. ನೀವು ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿ ಆಗಿರಬೇಕೆಂದು ನನ್ನ ಆಸೆ. ನಿಮ್ಮ ಆಡಳಿತದಲ್ಲಿ ದೇವರಾಜ್ ಅರಸ್ ಅವರು ಮಾಡಿದ ಕೆಲಸ ಮಾಡಲಾಗಲ್ಲ. ಅವರನ್ನು ಪದೇ ಪದೆ ನೆನಪಿಸಿಕೊಳ್ಳುತ್ತಿರಿ. ವಸತಿ ಯೋಜನೆಯ ಮನೆಗಳು ಶಿವಮೊಗ್ಗದಲ್ಲಿ ನಿಂತು ಹೋಗಿದೆ. ಬಡವರಿಗೆ ಮನೆ ಕಟ್ಟಲು ಹಿಂದಿನ ಸರ್ಕಾರ ಮಾಡಿದ ಕೆಲಸವನ್ನು ಪೂರ್ಣಗೊಳಿಸಿ. ಆಗ ಜನ ನಿಮ್ಮ ಪೋಟೋ ಹಾಕಿ ನೆನಪಿಸಿಕೊಳ್ಳುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು.
ಕರ್ನಾಟಕದಲ್ಲಿ ಅತಿ ಹೆಚ್ಚು ಬಜೆಟ್ ಮಾಡಿರುವ ಅರ್ಥ ಸಚಿವರು ನೀವು. ಆದರೂ ಗ್ಯಾರಂಟಿಗಳ ಹಳ್ಳಕ್ಕೆ ಯಾಕೆ ಬಿದ್ದಿರಿ ಗೊತ್ತಿಲ್ಲ. ಹಾಸ್ಟೆಲ್, ಸಮುದಾಯ ಭವನಗಳು ಅರ್ಧಕ್ಕೆ ನಿಂತು ಹೋಗಿದೆ. ನಿಮ್ಮ ಸ್ವತಂತ್ರ ಯೋಚನೆಗಳನ್ನು ಜಾರಿ ಮಾಡಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.
ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿದೆ. ಡಿ.ಕೆ ಶಿವಕುಮಾರ್ ತೆಲಂಗಾಣದಲ್ಲಿ ಹೋಗಿಕೂತಿದ್ದಾರೆ. ಸಿದ್ದರಾಮಯ್ಯನವರೇ ಬಡವರಿಗೆ, ದಲಿತರಿಗೆ ನ್ಯಾಯ ಕೊಡಿಸುವ ನಿಮ್ಮ ಯೋಜನೆಯಂತೆ ಕೆಲಸ ಮಾಡಿ. ಇದನ್ನು ಬೇಕಾದರೆ ಸಲಹೆ ಅಂತ ತಿಳಿದುಕೊಳ್ಳಿ. ನೀವು ಮತ್ತು ನಿಮ್ಮ ಮಗ ಸಾಕಷ್ಟು ಕೆಲಸ ಮಾಡಿದ್ದಿರಾ. ತನಿಖೆ ಮಾಡಿ ಎಂದರೂ ಮಾಡುತ್ತಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಇನ್ನೊಬ್ಬ ದೇವರಾಜ್ ಅರಸ್ ಸಿದ್ದರಾಮಯ್ಯ ಎಂದು ಜನ ಹೇಳುತ್ತಾರೆ. ಇಲ್ಲವೆಂದರೆ ಡೋಂಗಿ ಅಪಾದನೆಗೆ ಒಳಗಾಗುತ್ತೀರಿ. ಯಾವುದೇ ಗ್ಯಾರಂಟಿ ಒಪ್ಪಲ್ಲ ಎಂದು ಜನ ತೋರಿಸಿದ್ದಾರೆ. ಗ್ಯಾರಂಟಿ ಅಂದರೆ ವಿಶ್ವ ನಾಯಕ ನರೇಂದ್ರ ಮೋದಿಯವರೆ ಗ್ಯಾರಂಟಿ ಎಂದರು.