ಬಾಳೆಹಣ್ಣಿನ ಬೋಂಡಾ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಸುಲಭವಾಗಿ ಮಾಡಬಹುದು. ಇನ್ನು ತುಂಬಾ ಹಣ್ಣಾದ ಬಾಳೆಹಣ್ಣಿದ್ದರೆ ಅದನ್ನು ಬಳಸಿಯೂ ಈ ಬೋಂಡಾ ಮಾಡಬಹುದು.
ನಾವಿಲ್ಲಿ ಬಾಳೆಹಣ್ಣಿನ ಬೋಂಡಾದ ಸಿಂಪಲ್ ರೆಸಿಪಿ ನಿಡಿದ್ದೇವೆ ನೋಡಿ.
ಬೇಕಾಗುವ ಸಾಮಗ್ರಿ
6 ಚಿಕ್ಕ ಬಾಳೆಹಣ್ಣು
1ಕಪ್ ಮೈದಾ
1/2 ಕಪ್ ಸಕ್ಕರೆ
1/4ಚಮಚ ಅಡುಗೆ ಸೋಡಾ
1/2ಚಮಚ ಏಲಕ್ಕಿ
ಮಾಡುವ ವಿಧಾನ
* 6 ಚಿಕ್ಕ ಬಾಳೆಹಣ್ಣಿನ ಸಿಪ್ಪೆ ಸುಲಿಯಿರಿ
* ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ 1/2 ಕಪ್ ಸಕ್ಕರೆ ಹಾಕಿ ರುಬ್ಬಿ
* ನಂತರ ಮಿಕ್ಸಿಂಗ್ ಬೌಲ್ನಲ್ಲಿ ಬಾಳೆಹಣ್ಣಿನ ಪೇಸ್ಟ್, 1 ಕಪ್ ಮೈದಾ, 1/4 ಚಮಚ ಅಡುಗೆ ಸೋಡಾ, 1/2 ಚಮಚ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
* ಮಿಕ್ಸ್ ಮಾಡುವಾಗ ಗಂಟು ಕಟ್ಟಬಾರದು, ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಬಾಣಲೆಗೆ ಎಣ್ಣೆ ಹಾಕಿ ಕುದಿಸಿ
* ನಂತರ ಎಣ್ಣೆ ಕಾಯುವಾಗ ಕೈಯಿಂದ ಸ್ವಲ್ಪ ಹಿಟ್ಟು ತೆಗೆದು ಎಣ್ಣೆಯಲ್ಲಿ ಹಾಕಿ, ಆ ಹಿಟ್ಟು ಚಿಕ್ಕ ಉಂಡೆಗಳಾಗುತ್ತದೆ.
* ಉಂಡೆ ಕಂದು ಬಣ್ಣ ಬರುವಾಗ ಎಣ್ಣೆಯಿಂದ ತೆಗೆಯಿರಿ.
ನೀವು ಈ ಬೋಂಡಾವನ್ನು ಮಾಡಿದರೆ ತುಂಬಾನೇ ಮೃದುವಾಗಿರುವುದರಿಂದ ಆಗಷ್ಟೇ ಹಲ್ಲು ಮೂಡುವ ಮಕ್ಕಳಿಂದ ಹಿಡಿದು ಹಲ್ಲು ಉದುರಿರುವ ಹಿರಿ ಜೀವಗಳು ಕೂಡ ಚಪ್ಪರಿಸಿಕೊಂಡು ಸವಿಯುತ್ತಾರೆ. ಸಕ್ಕರೆ ಬೆಲ್ಲ ಬಳಸಿದರೆ ಸಾಕೇ ಎಂದು ನೀವು ಕೇಳುವುದಾದೆ ನೀವು ಬೆಲ್ಲವನ್ನು ಕೂಡ ಬಳಸಬಹುದು.