Author: AIN Author

ಹುಬ್ಬಳ್ಳಿ: ಮುಸ್ಲಿಂ ಹಿತರಕ್ಷಣೆ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ, ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲವೆಂದು ಸಿಎಂ  ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಂತಹ ವಿಚಾರ ದೊಡ್ಡದು ಮಾಡುವಂತದ್ದಲ್ಲವೇ ಅಲ್ಲಾ. ನನಗೆ ಅರ್ಥನೇ ಆಗ್ತೀಲ್ಲ. ಅವರು ಹೇಳಿದ ಹೇಳಿಕೆ ನಾನು ನೋಡಿದ್ದೀನಿ. ಮುಸ್ಲಿಂ ಹಿತರಕ್ಷಣೆ ಮಾಡ್ತೀನಿ ಅಂತಾ ಹೇಳಿದ್ದಾರೆ. ಬೇರೆ ಬೇರೆ ಸಮಾಜಕ್ಕೆ ಹೋದಾಗ ಅವರವರ ಹಿತರಕ್ಷಣೆ ಮಾಡುತ್ತೀನಿ ಅಂತ ಹೇಳೋದು ಸಹಜ. ಇಲ್ಲ ನಿಮ್ಮ ಹಿತ ರಕ್ಷಣೆ ಮಾಡುವುದಿಲ್ಲ ಅಂತ ಹೇಳ್ತಾರೇನು? ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಅದನ್ನು ಬಿಟ್ಟು ಬಿಡಿ, ಸಿದ್ದರಾಮಯ್ಯ ಅವರೇ ಸಮರ್ಥರಿದ್ದಾರೆ. ಅವರೇ ಅದರಲ್ಲಿ ಉತ್ತರ ಕೊಡ್ತಾರೆ ಎಂದರು. ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರ, ಅದರ ಬಗ್ಗೆ ಚರ್ಚೆ ಆಗಲೇಬೇಕು. ವಿರೋಧ ಪಕ್ಷದವರ ಮೇಲೆ ಕೂಡ ಸಾಕಷ್ಟು ಜವಾಬ್ದಾರಿ ಇದೆ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಪ್ರತಿಪಕ್ಷದವರು ದ್ವನಿ ಎತ್ತಿದರೆ ಖಂಡಿತವಾಗಿ…

Read More

ದೊಡ್ಡಬಳ್ಳಾಪುರ : ಉಸಿರಾಟದ ಸಮಸ್ಯೆಯಿಂದ 1 ವರ್ಷ ಹೆಣ್ಣು ಮಗು ಸಾವನ್ನಪ್ಪಿದೆ, ಸತ್ತ ಮಗುವಿನ ಶವ ಸಂಸ್ಕಾರ ಮಾಡುವುದು ಹೇಗೆಂದು ತಿಳಿಯದೆ, ಮಗುವಿನ ಶವವನ್ನ ಚರಂಡಿಯಲ್ಲಿ ಇಟ್ಟು ಹೆತ್ತವರು ಪರಾರಿಯಾಗಿದ್ರು. ಮಗುವಿನ ಕೈಗೆ ಕಟ್ಟಿದ ತಾಯತದ ಸಹಾಯದಿಂದ ಹೆತ್ತವರನ್ನ ಪತ್ತೆ ಮಾಡಲಾಗಿದ್ದು,ನಂತರ ಮಗುವಿನ ಶವ ಸಂಸ್ಕಾರ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಬಳಿ ಯಲಹಂಕ-ಹಿಂದೂಪುರ ರಸ್ತೆ ಬದಿಯ ಚರಂಡಿಯಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ಶವ ಪತ್ತೆಯಾಗಿತ್ತು, ಆದರೆ ಮೃತ ಮಗುವಿನ ವಾರಸ್ಥಾರರು ಯಾರೆಂದು ತಿಳಿದಿರಲಿಲ್ಲ, ಅನಾರೋಗ್ಯದಿಂದ ಸಾವನ್ನಪಿದ ಮಗುವನ್ನ ಇಟ್ಟು ಹೋಗಿದ್ದಾರೆಂದು ತಿಳಿಯಲಾಗಿತ್ತು, ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪರಿಶೀಲನೆಯನ್ನ ನಡೆಸುತ್ತಾರೆ, ಉತ್ತರ ಭಾರತೀಯರ ಮಗುವೆಂದು ಪ್ರಾರಂಭದಲ್ಲಿ ಮಾಹಿತಿ ತಿಳಿಯುತ್ತದೆ, ಜೊತೆಗೆ ಮಗುವಿನ ಕೈಯಲ್ಲಿ ಸಿಕ್ಕ ತಾಯತ ಮೃತ ಮಗು ಉತ್ತರ ಭಾರತೀಯರ ಮಗುವೆಂದು ಖಚಿತವಾಗಿತು. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಉತ್ತರ ಭಾರತದಿಂದ ಬಂದ ಕಾರ್ಮಿಕರು ಇದ್ದಾರೆ, ಇದೇ ಸುಳಿವಿನ ಮೇಲೆ ಪೊಲೀಸರು ಮಗುವಿನ ಪೋಟೋ ಇಟ್ಕೊಂಡ್…

Read More

ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಮಾಂಟೆಸ್ಸರಿ ವಿಭಾಗದ ಪ್ರೀ ನರ್ಸರಿ, ಎಲ್ ಕೆಜಿ, ಯುಕೆಜಿ, ಪೋಷಕರಿಗೆ ಬೆಳದಿಂಗಳ ಕೈತುತ್ತು(ಮೂನ್ ಲೈಟ್ ಡಿನ್ನರ್) ಕಾರ್ಯಕ್ರಮವನ್ನ ಶನಿವಾರ ಸಂಜೆ ಏರ್ಪಡಿಸಲಾಗಿತ್ತು. ಪೋಷಕರಿಗೆ ವರ್ಣರಂಜಿತ ರಂಗೋಲಿ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು. ಇದರ ಜೊತೆ ಬೆಂಕಿ‌ ಇಲ್ಲದೆ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಸುಮಾರು 100ಕ್ಕೂ ಅಧಿಕ ಪೋಷಕರು ಭಾಗವಹಿಸಿ ವಿಧವಿಧವಾದ ರುಚಿಕರ, ಆರೋಗ್ಯಕರವಾದ ತಿಂಡಿ ತಿನಿಸುಗಳನ್ನ ತಯಾರಿಸಿದರು. ಸಂಜೆಯ ವೇಳೆಗೆ ಮಗುವಿನ ಜಪತೆ ಅಜ್ಜ ಅಜ್ಜಿಯರ ರ್ಯಾಂಪ್ ವಾಕ್, ನೃತ್ಯ ಬಹಳ ಎಲ್ಲರ ಗಮನ ಸೆಳೆಯುವಂತೆ ನೆರವೇರಿತು. ನಂತರ ವಿದ್ಯಾರ್ಥಿಯ ತಂದೆ-ತಾಯಿ ಜೊತೆಗೂಡಿ ನೃತ್ಯ ಪ್ರದರ್ಶನ ಬಹಳ ಅದ್ಧೂರಿಯಾಗಿ ನಡೆಯಿತು. ಇನ್ನೂ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದು ಮೂನ್ ಲೈಟ್ ಡಿನ್ನರ್ ಕಾರ್ಯಕ್ರಮ. ತಾಯಿ ತನ್ನ ಮಗು ಊಟ ಮಾಡಲು ಹಠ ಮಾಡಿದಾಗ ಬೆಳದಿಂಗಳಲ್ಲಿ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಾಳೆ. ಅದರ ನೆನಪಿಗಾಗಿ ಇಂದು ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ…

Read More

ಬೀದರ್ (ಡಿ.06): ವಿಶ್ವದಲ್ಲೇ ಎಲ್ಲಾ ಸಂವಿಧಾನಗಳಿಗಿಂತ ಶ್ರೇಷ್ಠ ಸಂವಿಧಾನ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ರಚಿಸಿದ ಹಿಂದುಸ್ತಾನ್ (ಭಾರತ) ಸಂವಿಧಾನವಾಗಿದೆ. ಅಂತಹ ಸಂವಿಧಾನವನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಸಂವಿಧಾ‌ನ ಶಿಲ್ಪಿ, ಮಹಾನ್ ಚೇತನ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ರವರ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬೀದರ್ ನಗರದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಲ್ ಬಳಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಬಾಬಾ ಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಎಲ್ಲರೂ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಿಕೊಂಡು ಹೋಗಬೇಕಾಗಿದೆ. ಬಾಬಾ ಸಾಹೇಬರು ಆ ಕಾಲದಲ್ಲಿ ಓದಿ, ಬರೆದು ವಿದೇಶಗಳಿಗೆ ಹೋಗಿ ಪದವಿ ಗಳಿಸಿ ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಅವರೇ ನಮ್ಮೆಲ್ಲರಿಗೆ ಪ್ರೇರಣೆಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲೇ ನಾವೆಲ್ಲರೂ ಸಾಗಬೇಕಾಗಿದೆ ಎಂದು…

Read More

ಅಬುಜಾ: ವಾಯುವ್ಯ ನೈಜೀರಿಯಾದಲ್ಲಿ (Nigeria) ಸೇನೆಯ ಡ್ರೋನ್‌ ದಾಳಿ ಗುರಿ ತಪ್ಪಿ, 85 ಮಂದಿ ನಾಗರಿಕರು ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಕಡುನಾ ರಾಜ್ಯದ ತುಡುನ್‌ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆದರೆ ಗುರಿ ತಪ್ಪಿದ್ದು, ನಾಗರಿಕರ ಸಾವಿಗೆ ಕಾರಣವಾಗಿದೆ.  ನೈಜೀರಿಯಾದ ಸಂಘರ್ಷದ ವಲಯದಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸಲು ದೇಶದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ ದಾಳಿಯಲ್ಲಿ ಕನಿಷ್ಠ 66 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ 85 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಶೋಧಕಾರ್ಯ ನಡೆಯುತ್ತಿದೆ. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ನೈಜೀರಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತೌರೀದ್ ಲಗ್ಬಾಜಾ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಡ್ರೋನ್ ದಾಳಿಗೆ ಕ್ಷಮೆಯಾಚಿಸಿದ್ದಾರೆ. ತಪ್ಪಾದ ಲೆಕ್ಕಾಚಾರದ ವೈಮಾನಿಕ ದಾಳಿಯ ಘಟನೆಗಳು ದೇಶದಲ್ಲಿ ಆತಂಕಕಾರಿ ಆಯಾಮವನ್ನು ಪಡೆದುಕೊಳ್ಳುತ್ತಿದೆ ಎಂದು ನೈಜೀರಿಯಾದ ಮಾಜಿ ಉಪಾಧ್ಯಕ್ಷ ಮತ್ತು…

Read More

ಬೆಂಗಳೂರು: ನಾಡಿನ ಸಿಎಂ‌ ಆಗಿ,ಎಲ್ಲ ಜನರ ಅಭಿವೃದ್ಧಿಗೆ ಮುಂದಾಗಬೇಕು.ಸಿಎಂ ಆಗಿದ್ದಾಗ ಒಂದು ಸಮಾಜವನ್ನ ಓಲೈಕೆ ಮಾಡೋದು ಅಲ್ಲ.ಇದು ಓಲೈಕೆ ರಾಜಕಾರಣ ಅನ್ನೋದ್ರಲ್ಲಿ ಸಂಶಯ ಬೇಡ ಎಂದು ಸಿಎಂ ಹೇಳಿಕೆಗೆ ಹೆಚ್ಡಿಕೆ ಕಿಡಿಕಾರಿದ್ದಾರೆ.ಇನ್ನು ಇದೊಂದು ಎಡಬಿಡಂಗಿ ಸರ್ಕಾರ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಎಸ್ಸಿ ಎಸ್ಟಿ ಸಮುದಾಯಗಳಲ್ಲಿ ಬಡವರು ಇಲ್ವಾ..? ಅಧಿಕಾರಕ್ಕೆ ಬಂದ್ಮೇಲೆ ಮತ್ತೆ ಹಳೆಯ ಚಾಳಿ ಮುಂದುವರೆಸಿದ್ದಾರೆಂದು ಅಶೋಕ್ ವಾಗ್ದಾಳಿ ನಡೆಸಿದ್ರು. ಇನ್ನು ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ.. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡೋದಾಗಿ ಹೇಳಿದ್ದೇನೆ. ಇದನ್ನ ಬಿಜೆಪಿ ನಾಯಕರು ಓಲೈಕೆ ರಾಜಕಾರಣ ಎಂದರೆ ಹೇಗೆ..? ಅಂತಾ ತಿರುಗೇಟು ನೀಡಿದ್ದಾರೆ.

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸುತ್ತಾ ವಿವಾದಗಳೇ ಹರಿದಾಡುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಕೊಟ್ಟ ಸ್ಟೇಟ್ ಮೆಂಟ್, ಬಿಜೆಪಿಗರಿಗೆ ಆಹಾರವಾಗಿದೆ. ಮುಸಲ್ಮಾನರನ್ನ ಸಿಎಂ ಓಲೈಕೆ ಮಾಡ್ತಿದ್ದಾರೆ.. ಸದನದಲ್ಲಿ ಪ್ರಸ್ತಾಪ ಮಾಡೋದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ. ಆದ್ರೆ ಸಿಎಂ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡು, ಕೇಸರಿ ಪಡೆ ವಿರುದ್ಧ ಸೆಡ್ಡು ಹೊಡೆದಿದ್ದಾರೆ.. ಯೆಸ್.. ಹುಬ್ಬಳ್ಳಿ ಮುಸ್ಲಿಂ ಸಮಾವೇಶ ನಡೀತು. ಸಮಾವೇಶದಲ್ಲಿ ಸಿಎಂ ಮಾತಾಡ್ತಾ, https://ainlivenews.com/the-founder-of-byjus-who-barricaded-his-own-house-to-give-salary-to-the-employees/ ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲು ಸಿಗಬೇಕು. ಅಲ್ಪಸಂಖ್ಯಾರಿಗೆ ನೀಡುವ ಅನುದಾನವನ್ನ 10 ಸಾವಿರ ಕೋಟಿಗೆ ಹೆಚ್ಚಿಸಿಬೇಕು ಎಂದುಕೊಂಡಿದ್ದೇನೆ ಅಂತಾ ಸಿಎಂ ಹೇಳಿದ್ರು. ಇದು ಓಲೈಕೆ ರಾಜಕಾರಣ ಎಂದು ಬಿಜೆಪಿ ಕಟುವಾಗಿ ಟೀಕೆ ಮಾಡ್ತಿದೆ. ಸಿಎಂ ವಿರುದ್ಧ ಬಿಜೆಪಿ ನಾಯಕರು ವಾಗ್ಬಾಣಗಳನ್ನೇ ಬಿಡ್ತಿದ್ದಾರೆ. ಸದನದಲ್ಲಿ ಈ ವಿಚಾರವನ್ನ ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ಹಿಂದೂ ಅಸ್ತ್ರ ಪ್ರಯೋಗಿಸಲು ಕಮಲ ಪಡೆ ಪ್ಲಾನ್ ಮಾಡಿಕೊಂಡಿದೆ..

Read More

ಬಿಗ್‌ಬಾಸ್‌ ಮನೆಯ ರಕ್ಕಸ-ಗಂಧರ್ವರ ಟಾಸ್ಕ್‌ನ ಎರಡನೇ ಮುಖ ಆರಂಭಗೊಂಡಿದೆ. ನಾಣ್ಯದ ಬದಿಗಳು ಅದಲುಬದಲಾಗಿವೆ. ರಕ್ಕಸರು ಗಂಧರ್ವರಾಗಿದ್ದಾರೆ. ಗಂಧರ್ವರು ರಕ್ಕಸರಾಗಿದ್ದಾರೆ. ಈ ಅದಲುಬದಲಿನ ಆಟದ ಪರಿಣಾಮ ಏನಾಗುತ್ತಿದೆ ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿಜಾಹೀರಾಗಿದೆ. ನಿನ್ನೆಯಿಂದ ಸಂಗೀತಾ ತಂಡದ ಸದಸ್ಯರು ರಕ್ಕಸರಾಗಿ ಇಡೀ ಮನೆಯಲ್ಲಿ ಮೆರೆದಾಡಿದ್ದರು. ವರ್ತೂರು ತಂಡದ ಗಂಧರ್ವರನ್ನು ಬಗೆಬಗೆಯಾಗಿ ಗೋಳು ಹೊಯ್ದುಕೊಂಡಿದ್ದರು. ನಂತರ ಬಾವುಟ ನೆಡುವ ಟಾಸ್ಕ್‌ನಲ್ಲಿ ಕೂಡ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇಂದು ವೇಷಗಳು ಹಾಗೆಯೇ ಇವೆ. ಅದರೊಳಗಿನ ವ್ಯಕ್ತಿಗಳು ಬದಲಾಗಿದ್ದಾರೆ. ರಕ್ಕಸರಾಗಿದ್ದವರು ಗಂಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗಂಧರ್ವರಾಗಿದ್ದವರು ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ. ವರ್ತೂರು ತಂಡದ ಸದಸ್ಯರು ನಿನ್ನೆಅನುಭವಿಸಿದ ಅವಮಾನ-ನೋವುಗಳನ್ನೆಲ್ಲ ಬಡ್ಡಿಸಮೇತ ತೀರಿಸಲು ಹೊರಟಂತಿದೆ. ಕಾರ್ತಿಕ್‌ ಬಳಿ ವಿನಯ್, ಆನೆ ಬೀಳಿಸಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳುತ್ತಿದ್ದಾರೆ. ರಕ್ಕಸರಾಗಿದ್ದಾಗ ಮೆರೆದಾಡಿದ್ದ ಕಾರ್ತಿಕ್ ಅವರನ್ನೇ ಗಂಧರ್ವ ತಂಡ ಟಾರ್ಗೆಟ್ ಮಾಡಿಕೊಂಡು ಬಗೆಬಗೆಯ ಶಿಕ್ಷೆಗಳನ್ನು ನೀಡುತ್ತಿರುವಂತಿದೆ. ಬದಲಾದ ಈ ಆಯಾಮದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋತು ಶರಣಾಗುತ್ತಾರೆ?ಬಿಗ್‌ಬಾಸ್ ಕನ್ನಡ 24 ಗಂಟೆ…

Read More

ಬೆಂಗಳೂರು: ನಂದಿ ಗಿರಿಧಾಮಕ್ಕೆ ಡಿಸೆಂಬರ್ 11 ರಿಂದ ವಿದ್ಯುತ್ ರೈಲು ಆರಂಭಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಕಾರ್ಯನಿರ್ವ ಹಿಸುವ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. 06531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, 06535/06583 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, ಮತ್ತು 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಸಂಚರಿಸಲಿವೆ. https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಯಲಹಂಕ ಮತ್ತು ಚಿಕ್ಕಬಳ್ಳಾಪುರ ನಡುವಿನ ವಿದ್ಯುದ್ದೀಕರಣವು ಮಾರ್ಚ್ 2022 ರಲ್ಲಿ ಪೂರ್ಣಗೊಂಡಿತು, ಆದರೆ ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ಹಲವು ಕಾರಣಗಳಿಂದ ವಿಳಂಬ ಮಾಡಿದೆ. ಪ್ರಸ್ತುತ, 06387/06388 ಕೆಎಸ್​ಆರ್​​ ​ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ ಮತ್ತು 16549/16550 ಕೆಎಸ್​ಆರ್​​ ಬೆಂಗಳೂರು – ಕೋಲಾರ- ಕೆಎಸ್​ಆರ್​​ ಬೆಂಗಳೂರು ರೈಲುಗಳು ನಂದಿ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತವೆ. ನಂದಿ ನಿಲ್ದಾಣದಿಂದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಭೋಗನಂದೀಶ್ವರ ದೇವಸ್ಥಾನಕ್ಕೆ ಸುಮಾರು 1.4 ಕಿ.ಮೀ ದೂರವಿದೆ. ಹೆಚ್ಚುವರಿ 15-18 ಕಿಮೀ. ಕ್ರಮಿಸಬೇಕಾಗುತ್ತದೆ. ನಂದಿ ರೈಲು ನಿಲ್ದಾಣದಿಂದ ಈ ಸ್ಥಳಗಳಿಗೆ ಬಹು-ಮಾದರಿ…

Read More

ಬೆಂಗಳೂರು: ಭ್ರೂಣ ಲಿಂಗ ಪತ್ತೆ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರಾಜ್ಯದ ಎಲ್ಲಾ ಸ್ಕ್ಯಾನಿಂಗ್​ಸೆಂಟರ್​ಗಳ ಮಾಹಿತಿ ಸಂಗ್ರಹಕ್ಕೆ ಪ್ಲಾನ್​ ಮಾಡಲಾಗಿದೆ. ಡಿಸೆಂಬರ್​ 30ರೊಳಗೆ ರಾಜ್ಯದ DHO, CHOಗಳಿಗೆ ಮಾಹಿತಿ ಸಂಗ್ರಹಕ್ಕೆ ಡೆಡ್​ಲೈನ್​ ನೀಡಲಾಗಿದೆ. 6 ಸಾವಿರ ಸ್ಕ್ಯಾನಿಂಗ್​ ಸೆಂಟರ್​ಗಳು, https://ainlivenews.com/the-founder-of-byjus-who-barricaded-his-own-house-to-give-salary-to-the-employees/ ಕ್ಲಿನಿಕ್​ಗಳ ತಪಾಸಣೆಗೆ ಸೂಚನೆ ನೀಡಲಾಗಿದೆ. ಪೋಷಕರು, ತಾಯಿ ಹೊರತು ಯಾರು ಇದ್ದರು ಅನ್ನೋದರ ಬಗ್ಗೆ ಸ್ಕ್ಯಾನಿಂಗ್​ ಸೆಂಟರ್​ಗಳ ಸಿಸಿಟಿವಿ ಮೂಲಕ ಪರಿಶೀಲನೆಗೂ ಸೂಚಿಸಲಾಗಿದೆ. ಸದ್ಯ  ಇಲಾಖೆ ನಿರ್ಧಾರದಿಂದ ಭ್ರೂಣ ಲಿಂಗ ಪತ್ತೆ ಮಾಡಿದವರಿಗೆ ನಡುಕ ಶುರುವಾಗಿದೆ.

Read More