ದೊಡ್ಡಬಳ್ಳಾಪುರ : ಉಸಿರಾಟದ ಸಮಸ್ಯೆಯಿಂದ 1 ವರ್ಷ ಹೆಣ್ಣು ಮಗು ಸಾವನ್ನಪ್ಪಿದೆ, ಸತ್ತ ಮಗುವಿನ ಶವ ಸಂಸ್ಕಾರ ಮಾಡುವುದು ಹೇಗೆಂದು ತಿಳಿಯದೆ, ಮಗುವಿನ ಶವವನ್ನ ಚರಂಡಿಯಲ್ಲಿ ಇಟ್ಟು ಹೆತ್ತವರು ಪರಾರಿಯಾಗಿದ್ರು. ಮಗುವಿನ ಕೈಗೆ ಕಟ್ಟಿದ ತಾಯತದ ಸಹಾಯದಿಂದ ಹೆತ್ತವರನ್ನ ಪತ್ತೆ ಮಾಡಲಾಗಿದ್ದು,ನಂತರ ಮಗುವಿನ ಶವ ಸಂಸ್ಕಾರ ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಬಳಿ ಯಲಹಂಕ-ಹಿಂದೂಪುರ ರಸ್ತೆ ಬದಿಯ ಚರಂಡಿಯಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ಶವ ಪತ್ತೆಯಾಗಿತ್ತು, ಆದರೆ ಮೃತ ಮಗುವಿನ ವಾರಸ್ಥಾರರು ಯಾರೆಂದು ತಿಳಿದಿರಲಿಲ್ಲ,
ಅನಾರೋಗ್ಯದಿಂದ ಸಾವನ್ನಪಿದ ಮಗುವನ್ನ ಇಟ್ಟು ಹೋಗಿದ್ದಾರೆಂದು ತಿಳಿಯಲಾಗಿತ್ತು, ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪರಿಶೀಲನೆಯನ್ನ ನಡೆಸುತ್ತಾರೆ, ಉತ್ತರ ಭಾರತೀಯರ ಮಗುವೆಂದು ಪ್ರಾರಂಭದಲ್ಲಿ ಮಾಹಿತಿ ತಿಳಿಯುತ್ತದೆ, ಜೊತೆಗೆ ಮಗುವಿನ ಕೈಯಲ್ಲಿ ಸಿಕ್ಕ ತಾಯತ ಮೃತ ಮಗು ಉತ್ತರ ಭಾರತೀಯರ ಮಗುವೆಂದು ಖಚಿತವಾಗಿತು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಉತ್ತರ ಭಾರತದಿಂದ ಬಂದ ಕಾರ್ಮಿಕರು ಇದ್ದಾರೆ, ಇದೇ ಸುಳಿವಿನ ಮೇಲೆ ಪೊಲೀಸರು ಮಗುವಿನ ಪೋಟೋ ಇಟ್ಕೊಂಡ್ ಬಾಶೆಟ್ಟಿಹಳ್ಳಿ ಸುತ್ತಮುತ್ತ ವಿಚಾರಣೆ ನಡೆಸಿದ್ದಾಗ ಹೆತ್ತವರ ಪತ್ತೆಯಾಗಿದ್ದು. ಬಿಹಾರದ ಪ್ರಮೇಶ್ ಮತ್ತು ವಿಭಾ ಕುಮಾರಿ ದಂಪತಿಯ ಒಂದು ವರ್ಷದ ಮಗು ರುಚಿ ಕುಮಾರಿ ಎಂದು ತಿಳಿದು ಬಂದಿರುವುದ್ದಾಗಿ ಇನ್ಸ್ ಪೇಕ್ಟರ್ ಮುನಿಕೃಷ್ಣ ತಿಳಿಸಿದ್ದಾರೆ.