ಬೆಂಗಳೂರು: ನಾಡಿನ ಸಿಎಂ ಆಗಿ,ಎಲ್ಲ ಜನರ ಅಭಿವೃದ್ಧಿಗೆ ಮುಂದಾಗಬೇಕು.ಸಿಎಂ ಆಗಿದ್ದಾಗ ಒಂದು ಸಮಾಜವನ್ನ ಓಲೈಕೆ ಮಾಡೋದು ಅಲ್ಲ.ಇದು ಓಲೈಕೆ ರಾಜಕಾರಣ ಅನ್ನೋದ್ರಲ್ಲಿ ಸಂಶಯ ಬೇಡ ಎಂದು ಸಿಎಂ ಹೇಳಿಕೆಗೆ ಹೆಚ್ಡಿಕೆ ಕಿಡಿಕಾರಿದ್ದಾರೆ.ಇನ್ನು ಇದೊಂದು ಎಡಬಿಡಂಗಿ ಸರ್ಕಾರ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್… ‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ
ಎಸ್ಸಿ ಎಸ್ಟಿ ಸಮುದಾಯಗಳಲ್ಲಿ ಬಡವರು ಇಲ್ವಾ..? ಅಧಿಕಾರಕ್ಕೆ ಬಂದ್ಮೇಲೆ ಮತ್ತೆ ಹಳೆಯ ಚಾಳಿ ಮುಂದುವರೆಸಿದ್ದಾರೆಂದು ಅಶೋಕ್ ವಾಗ್ದಾಳಿ ನಡೆಸಿದ್ರು. ಇನ್ನು ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ.. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡೋದಾಗಿ ಹೇಳಿದ್ದೇನೆ. ಇದನ್ನ ಬಿಜೆಪಿ ನಾಯಕರು ಓಲೈಕೆ ರಾಜಕಾರಣ ಎಂದರೆ ಹೇಗೆ..? ಅಂತಾ ತಿರುಗೇಟು ನೀಡಿದ್ದಾರೆ.