ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸುತ್ತಾ ವಿವಾದಗಳೇ ಹರಿದಾಡುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮಾವೇಶದಲ್ಲಿ ಕೊಟ್ಟ ಸ್ಟೇಟ್ ಮೆಂಟ್, ಬಿಜೆಪಿಗರಿಗೆ ಆಹಾರವಾಗಿದೆ. ಮುಸಲ್ಮಾನರನ್ನ ಸಿಎಂ ಓಲೈಕೆ ಮಾಡ್ತಿದ್ದಾರೆ.. ಸದನದಲ್ಲಿ ಪ್ರಸ್ತಾಪ ಮಾಡೋದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ. ಆದ್ರೆ ಸಿಎಂ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡು, ಕೇಸರಿ ಪಡೆ ವಿರುದ್ಧ ಸೆಡ್ಡು ಹೊಡೆದಿದ್ದಾರೆ.. ಯೆಸ್.. ಹುಬ್ಬಳ್ಳಿ ಮುಸ್ಲಿಂ ಸಮಾವೇಶ ನಡೀತು. ಸಮಾವೇಶದಲ್ಲಿ ಸಿಎಂ ಮಾತಾಡ್ತಾ,
ಬೆಂಗಳೂರಿನಲ್ಲಿ ನ್ಯಾಚುರಲ್ ಸ್ಟಾರ್… ‘ಹಾಯ್ ನಾನ್ನ’ ಪ್ರಮೋಷನ್ ನಲ್ಲಿ ನಾನಿ ಬ್ಯುಸಿ
ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲು ಸಿಗಬೇಕು. ಅಲ್ಪಸಂಖ್ಯಾರಿಗೆ ನೀಡುವ ಅನುದಾನವನ್ನ 10 ಸಾವಿರ ಕೋಟಿಗೆ ಹೆಚ್ಚಿಸಿಬೇಕು ಎಂದುಕೊಂಡಿದ್ದೇನೆ ಅಂತಾ ಸಿಎಂ ಹೇಳಿದ್ರು. ಇದು ಓಲೈಕೆ ರಾಜಕಾರಣ ಎಂದು ಬಿಜೆಪಿ ಕಟುವಾಗಿ ಟೀಕೆ ಮಾಡ್ತಿದೆ. ಸಿಎಂ ವಿರುದ್ಧ ಬಿಜೆಪಿ ನಾಯಕರು ವಾಗ್ಬಾಣಗಳನ್ನೇ ಬಿಡ್ತಿದ್ದಾರೆ. ಸದನದಲ್ಲಿ ಈ ವಿಚಾರವನ್ನ ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ಹಿಂದೂ ಅಸ್ತ್ರ ಪ್ರಯೋಗಿಸಲು ಕಮಲ ಪಡೆ ಪ್ಲಾನ್ ಮಾಡಿಕೊಂಡಿದೆ..