Author: AIN Author

ಗದಗ: ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಹೊಸ ಹಿಟ್ ಆ್ಯಂಡ್ ರನ್ ಕಾನೂನು ವಿರೋಧಿಸಿ ಹಾಗೂ ಗದಗ ತಾಲೂಕಿನ ಪಾಪನಾಶಿ ಬಳಿ ರಾಜ್ಯ ಹೆದ್ದಾರಿ 45  ರ ಟೋಲ್ ರದ್ದುಪಡಿಸಲು ಆಗ್ರಹಿಸಿ ಗದಗ ಗೂಡ್ಸ್ ಶೆಡ್ ಮತ್ತು ಗದಗ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಪಾಪನಾಶಿ ಬಳಿ ಟೋಲ್ ಬಂದ್ ಮಾಡಿ ಪ್ರತಿಭಟನೆಯನ್ನ ನಡೆಸಲಾಗ್ತಾ ಇದೆ. ಇನ್ನು ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು ಕೇಂದ್ರದ ಹೊಸ ಹಿಟ್ ಆ್ಯಂಡ್ ರನ್ ಕಾನೂನಿನಿಂದ ಚಾಲಕರು ಮಾಲೀಕರಿಗೆ ತೊಂದರೆ ಆಗ್ತಾ ಇದೆ, ಜೊತೆಗೆ ಟೋಲ್ ಅಂತರ ಕನಿಷ್ಟ 60ಕಿಮಿ ಇರಬೇಕು. ಆದ್ರೆ ಗದಗ ತಾಲೂಕಿನ ಪಾಪನಾಶಿ ಟೋಲ್ ಕೇವಲ 35 ಕಿಮೀ ಅಂತರದಲ್ಲಿದೆ ಹಾಗಾಗಿ ಪಾಪನಾಶಿ ಟೋಲ್ ರದ್ದುಪಡಿಸಲು ಒತ್ತಾಯ ಮಾಡಿದ್ರು. ಕೇಂದ್ರ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿ ರಸ್ತೆಯಲ್ಲೇ ಕುಳಿತು ಊಟ ಮಾಡೋ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಮನವಿ ಆಲಿಸಿ ಟೊಲ್ ಬಂದ್ ಮಾಡಲು ಒತ್ತಾಯಿಸಿಸ್ರು.…

Read More

ಬಳ್ಳಾರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರಿಂದ ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರೋಟೆಸ್ಟ್ ಮಾಡಲಾಯಿತು. ಅಖಿಲ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಗಿದ್ದು, ನಗರದ ನಾರಾಯಣರಾವ್ ಪಾರ್ಕ್’ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಕಟ್ಟಡ ಕಾರ್ಮಿಕರು ನಡೆಸಿದರು. ತಮ್ಮ ನ್ಯಾಯಯುತ ಬೇಡಿಕೆ ಈಡೇಸುವಂತೆ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು. ಕಟ್ಟಡ ಕಾರ್ಮಿಕರ ಮಕ್ಕಳ ಮದುವೆ ಸಹಾಯಧನವನ್ನು 1 ಲಕ್ಷದವರೆಗೆ ಹೆಚ್ಚಿಸಬೇಕು, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ದುರ್ಬಳಕೆ ನಿಲ್ಲಿಸಬೇಕು, ಎಲ್ಲಾ ಕಾರ್ಮಿಕರ ವೇತನವನ್ನು 26 ಸಾವಿರಕ್ಕೆ ಏರಿಸಬೇಕು ಮತ್ತು ಪಿಂಚಣಿ 10 ಸಾವಿರ ನೀಡಬೇಕು, ರಾಜ್ಯದ ಎಲ್ಲಾ ಕಾರ್ಮಿಕ ನೊಂದಾಯಿತ ಸಂಘಗಳಿಗೆ ಸೂಕ್ತ ಮಾನ್ಯತೆ ನೀಡಬೇಕು, ನಕಲಿ ಕಾರ್ಡುಗಳ ಹಾವಳಿ ತಡೆಗಟ್ಟಬೇಕು, ಬಾಕಿ ಇರುವ 2021 ನೇ ಸಾಲಿನ ಶೈಕ್ಷಣಿಕ ಅರ್ಜಿಯನ್ನು ಪರಿಶಿಲಿಸಿ ಕೂಡಲೇ ಹಣ ವರ್ಗಾವಣೆ ಮಾಡಬೇಕು, ಮನೆ ನಿರ್ಮಾಣಕ್ಕೆ 5ಲಕ್ಷ ಧನ ಸಹಾಯ ನೀಡಬೇಕು ಎಂದು ಒತ್ತಾಯ ಮಾಡಿದರು.

Read More

ಕೋಲಾರ: ಶ್ರೀರಾಮನ  ಕಟೌಟ್ ಹಾಗೂ ಪ್ಲೆಕ್ಸ್​ ಅನ್ನು ದುಷ್ಕರ್ಮಿಗಳು ಬ್ಲೇಡ್​​ನಿಂದ ಹರಿದಿರುವ ಘಟನೆ ಮುಳಬಾಗಿಲು  ನಗರದ ಗುಣಗಂಟೆಪಾಳ್ಯದಲ್ಲಿ ನಡೆದಿದೆ. ಜನವರಿ 22 ರಂದು ಅಯೋಧ್ಯೆ  ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಲವಕುಶ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​​ ಮತ್ತು ಪುತ್ರ ಅಯೋಧ್ಯೆ ಧ್ರುವ ಚಾರಿಟಬಲ್​​ ಟ್ರಸ್ಟ್​​ ವತಿಯಿಂದ ನಗರದಲ್ಲಿ ರಾಮನ ಶೋಭಾಯಾತ್ರೆ, ಸೀತರಾಮ ಕಲ್ಯಾಣೋತ್ಸವ ಮತ್ತು ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನಾಂಕ 21 ಮತ್ತು 22 ರಂದು ಎರಡು ದಿನ ಈ ಕಾರ್ಯಕ್ರಮಗಳು ನಡೆಯಲಿದ್ದವು ಹೀಗಾಗಿ ನಗರದಲ್ಲಿ ಬ್ಯಾನರ್​ ಮತ್ತು ಶ್ರೀರಾಮ ಕಟೌಟ್​ ನಿಲ್ಲಿಸಲಾಗಿತ್ತು. ಈ ಬ್ಯಾನರ್​ ಮತ್ತು ಕಟ್​ಔಟ್​​ಗಳನ್ನು ನಿನ್ನೆ (ಜ.16)ರ ರಾತ್ರಿ 10.44ರ ಸುಮಾರಿಗೆ ಯಾರೋ ದುಷ್ಕರ್ಮಿಗಳು ಬ್ಲೇಡ್​ನಿಂದ ಹರಿದು ಹಾಕಿದ್ದಾರೆ. ಶ್ರೀರಾಮನ ಕಟೌಟ್​ನ್ನು ಹರಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಪ್ರಕರಣ ಸಂಬಂಧ ಮುಳಬಾಗಿಲು ಪೊಲೀಸರು ಇಬ್ಬರು ಆರೋಪಿಗಳನ್ನು…

Read More

ಮಂಡ್ಯ: ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿದ್ದಾರೆ. ಮೈಸೂರಿಗೆ ತೆರಳುತ್ತಿದ್ದ ವೇಳೆ ಮಂಡ್ಯದ ಮದ್ದೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ. ಕಂದಾಯ ಸಚಿವರ ದಿಢೀರ್​ ಭೇಟಿ ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿ ಆಗಿದ್ದಾರೆ. ಇದೇ ವೇಳೆ ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಹೇಳಿಕೊಂಡಿದ್ದಾರೆ. ರೈತರೊಬ್ಬರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ದೂರು ನೀಡಲಾಗಿದೆ. ಇನ್ನು ಸಚಿವ ಕೃಷ್ಣಭೈರೇಗೌಡ ಜನರ ಎದುರೇ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಸರ್ಕಾರಿ ಜಾಗ ಸರ್ವೇ ಮಾಡಿಕೊಡಲು ಎಷ್ಟು ದಿನ ಬೇಕು? ನೆಪ ಹೇಳಿಕೊಂಡು ಕಾಲ ಕಳೆಯಲು ಬಂದಿದ್ದೀರಾ ಇಲ್ಲಿ. ಒಂದೊಂದು ಕೆಲಸ ಮಾಡಿಸಲು ನಾನೇ ಬರಬೇಕು? ಎಂದು ಅಧಿಕಾರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

Read More

ಕಲಬುರಗಿ: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಡಿದ್ದು ಜನವರಿ 19 ರಂದು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಳಿಗ್ಗೆ 9.35 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಬೆಳಿಗ್ಗೆ 9.40 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೋಲಾಪುರಕ್ಕೆ, ತೆರಳಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮರಳಿ ಮಧ್ಯಾಹ್ನ 1 ಗಂಟೆಗೆ ವಾಪಾಸ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.. ಹೀಗಾಗಿ SPG ತಂಡ ಕಲಬುರಗಿಗೆ ಆಗಮಿಸಿದ್ದು ಬಂದೋಬಸ್ತ್ ಕುರಿತಂತೆ ಜಿಲ್ಲಾಡಳಿತದ ಜೊತೆ ಇವತ್ತು ಚರ್ಚೆ ನಡೆಸಿದ್ರು..

Read More

ಕೋಲ್ಕತ್ತಾ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಅನ್ನೋದು ನಾಯಕರ ಕೆಲಸವಲ್ಲ. ಧಾರ್ಮಿಕ ಮುಖಂಡರ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamta Banerjee) ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಣಪ್ರತಿಷ್ಠೆ ಮಾಡುವುದು ನಮ್ಮ ಕೆಲಸವಲ್ಲ, ಧಾರ್ಮಿಕ ಮುಖಂಡರ ಕೆಲಸ. ಮೂಲ ಸೌಕರ್ಯ ಕಲ್ಪಿಸುವುದ ಅಷ್ಟೇ ನಮ್ಮ ಕೆಲಸ ಎಂದು ಕಿಡಿಕಾರಿದರು ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ಪ್ರಾಣಪ್ರತಿಷ್ಠೆ (Pran Prathistha Ceremony) ಸಿದ್ಧತೆಗಳ ನಡುವೆ ಮಮತಾ ಬ್ಯಾನರ್ಜಿ ಅವರು ದೊಡ್ಡ ಘೋಷಣೆ ಮಾಡಿದ್ದಾರೆ. ಜನವರಿ 22 ರಂದು ತಮ್ಮ ಪಕ್ಷದ ಟಿಎಂಸಿ ಸರ್ವ ಧರ್ಮ ರ್ಯಾಲಿ ಅಂದರೆ ಸದ್ಭಾವನಾ ರ್ಯಾಲಿಯನ್ನು ನಡೆಸಲಿದೆ. ಈ ರ್ಯಾಲಿ ಎಲ್ಲ ಧರ್ಮದವರಿಗಾಗಿ ಇರುತ್ತದೆ. ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳು ಮತ್ತು ಗುರುದ್ವಾರಗಳಿಗೆ ಹೋಗುವ ಜನರಂತೆ ರ್ಯಾಲಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನಕ್ಕೂ ಭೇಟಿ ನೀಡುವುದಾಗಿ ಮಮತಾ ಹೇಳಿದ್ದಾರೆ. https://ainlivenews.com/there-is-a-job-vacancy-in-nimhans-salary-%e2%82%b9-90000-per-month-last-date-today/ ಮೊದಲು ಕಾಳಿಘಾಟ್ ದೇವಸ್ಥಾನದಲ್ಲಿ…

Read More

ಬೆಂಗಳೂರು : ರಾಮಲಲ್ಲಾನ ಮೂರ್ತಿಯನ್ನು ಟೆಂಟ್ ಗೊಂಬೆಗೆ ಹೋಲಿಸಿ ರಾಮಮಂದಿರ ಕುರಿತು ಲಘುವಾಗಿ ಹೇಳಿಕೆ ನೀಡಿದ್ದ ಸಹಕಾರಿ ಸಚಿವ ಕೆ.ಎನ್. ರಾಜಣ್ಣರಿಗೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ರಾಮದ್ವೇಷಿ, ಹಿಂದೂ ವಿರೋಧಿ ಕಾಂಗ್ರೆಸ್​ ನಾಯಕರು ರಾಮಮಂದಿರದ ಬಗ್ಗೆ ತಮ್ಮ ಅಸಮಾಧಾನ, ಹೊಟ್ಟೆ ಉರಿಯನ್ನು ಪದೇ ಪದೆ ಹೊರಹಾಕುತ್ತಲೇ ಇದ್ದಾರೆ ಎಂದು ಕಿಡಿಕಾರಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ, ಮೂರು ಡಿಸಿಎಂ ಪ್ರತಿಪಾದಕ, ‘ಸಿದ್ದ’ರಾಮ ಭಕ್ತ, ಸಚಿವ ಕೆ.ಎನ್. ರಾಜಣ್ಣ ಅವರ ಬಾಯಿ ಮುಚ್ಚಿಸಲು ತಾವೇ ಸರಿ. ತಮ್ಮ ಪಕ್ಷದ ರಾಮದ್ವೇಷಿ ನಾಯಕರಿಗೆ ಸ್ವಲ್ಪ ಬುದ್ಧಿ ಹೇಳಿ, ಅವರ ಆಚಾರವಿಲ್ಲದ ನಾಲಿಗೆಗೆ ಸ್ವಲ್ಪ ನಿಯಂತ್ರಣ ಹಾಕಿ, ಇಲ್ಲವೇ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಆರ್​. ಅಶೋಕ್ ಚಾಟಿ ಬೀಸಿದ್ದಾರೆ.

Read More

ಬೆಂಗಳೂರು: ಅದೊಂದು ಖತರ್ನಾಕ್ ಗ್ಯಾಂಗ್.ಮಾಡಿಕೊಂಡಿದ್ದ ಸಾಲ ತೀರಿಸಲು ಅಡ್ಡ ದಾರಿ ಹಿಡಿದಿದ್ರು.ಹಗಲು ಹೊತ್ತಲೆ ರಾಬರಿಗೆ ಇಳಿದಿದ್ರು.ಒಂಟಿ ಮಹಿಳೆ ಕೈ ಕಾಲು ಕಟ್ಟಿ ಅಟ್ಟಹಾಸ ಮೆರೆದಿದ್ರು.ಅದೇ ಖತರ್ನಾಕ್ ರಾಬರಿ ಗ್ಯಾಂಗ್ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ.. ಈ ಫೋಟೋ ರಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು ಗುರು,ರುದ್ರೇಶ್,ಸಂದೀಪ್,ಪ್ರಭಾವತಿ ಮತ್ತು ರೇಣುಕ.ಮೈ ಬಗ್ಗಿಸಿ ದುಡಿದು ತಿಂದಿದ್ದಿದ್ರೆ ಇವತ್ತು ಪೊಲೀಸ್ ಠಾಣೆಯಲ್ಲಿ ಕೈಕಟ್ಟಿ ನಿಲ್ಲೊ ಪರಿಸ್ಥಿತಿ ಬರ್ತಾ ಇರ್ಲಿಲ್ಲ.ಆದ್ರೆ ಅಡ್ಡದಾರಿ ಹಿಡಿದು ಹೋದವರು ಒಂದೇ ದಿನಕ್ಕೆ ಪೊಲೀಸರ ಅತಿಥಿಗಳಾಗಿದ್ದಾರೆ.. ಹೌದು ಅದು ಜನವರಿ 14 ರ ಬೆಳಗ್ಗೆ 9.30 ರ ಸಮಯ..ಸ್ಥಳ ತಿಂಡ್ಲು ಸರ್ಕಲ್ ನಲ್ಲಿರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್.ಆಗಷ್ಟೇ ಕೆಲಸಕ್ಕೆ ಬಂದಿದ್ದ ಅನುಶ್ರೀ ಒಂದು ಗ್ರಾಹಕರ ಮಸಾಜ್ ಮುಗಿಸಿ ಕೂತಿದ್ರು ಈ ವೇಳೆ ಎಂಟ್ರಿಕೊಟ್ಟವಳೇ ಪ್ರಭಾವತಿ..ನನಗೂ ಮಸಾಜ್ ಮಾಡ್ಬೇಕು ಹಣವನ್ನ ನನ್ನ ಗಂಡ ಕೊಡ್ತಾನೆ ಅಂತಾ ಗುರು ಎಂಬಾತನನ್ನ ಒಳಗೆ ಕರೆಸಿಕೊಂಡಿದ್ಳು..ಏಕಾಏಕಿ ಬಂದ ಗುರು ಕರ್ಚೀಫ್ ನಲ್ಲಿ ಕೆಮಿಕಲ್ ಹಾಕಿ ಬಾಯಿ ಮತ್ತು…

Read More

ಬೆಂಗಳೂರು: ಅದು ಮಧ್ಯರಾತ್ರಿಯ ಸಮಯ.ಕೈಯಲ್ಲಿ ರಾಡ್ ಹಿಡಿದಿದ್ದ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ರು.ಕಂಡ ಕಂಡ ವಾಹನಗಳ ಮೇಲೆ ಬೀಸಿ ಕ್ರೌರ್ಯ ಮೆರೆದಿದ್ರು.ಎರಡು ಕೆಎಸ್ ಆರ್ ಟಿಸಿ ಬಸ್ ಗಳ ಗಾಜು ಪುಡಿ ಪುಡಿ ಮಾಡಿದ್ರು.‌ಮದ್ಯದ ಅಮಲಲ್ಲಿ ಕಿರಿಕ್ ಮಾಡಿಕೊಂಡವರು ಪೊಲೀಸರ ಅತಿಥಿ ಆಗಿದ್ದಾರೆ ಕೈಯಲ್ಲಿ ರಾಡ್ ಹಿಡಿದು ಓಡಾಡ್ತಿರೊ ಕ್ರಿಮಿಗಳು..ಪುಡಿ ಪುಡಿಯಾಗಿ ಬಿದ್ದಿರೊ‌ ಕೆಎಸ್ ಆರ್ ಟಿ ಸಿ ಬಸ್ ನ ಕಿಟಕಿ ಗಾಜುಗಳು..ದಿಕ್ಕೇ ತೋಚದಂತೆ ನಿಂತಿರೊ ಚಾಲಕ ಮತ್ತು ನಿರ್ವಾಹಕ..ಮದ್ಯ ರಾತ್ರಿ ನಡೆದ ಈ ಘಟನೆ ಬಸ್ ನಲ್ಲಿದ್ದ ಪ್ರಯಾಣಿಕರೇ ಬೆಚ್ಚಿಬೀಳುವಂತೆ ಮಾಡಿತ್ತು…ಸುಖಾ ಸುಮ್ಮನೆ ಬಂದ ಕಿಡಿಗೇಡಿಗಳು ರಾಡ್ ಬೀಸಿ ಎಸ್ಕೇಪ್ ಆಗಿದ್ರು ಹೌದು..ಅದು ಮಧ್ಯರಾತ್ರಿ 1.40 ರ ಸಮಯ.ಮೈಸೂರು ಡಿಪೋ ನ ಎರಡು ಕೆಎಸ್ ಆರ್ ಟಿಸಿ ಬಸ್ ಬೆಂಗಳೂರು ತಲುಪಿತ್ತು..ಎರಡು ಬಸ್ ನಲ್ಲಿ ಸುಮಾರು 25 ರಿಂದ 30 ಜನ ಪ್ರಯಾಣಿಕರು ಇದ್ರು..ಬಸ್ ಶಾಂತಲ ಸಿಗ್ನಲ್ ಬಳಿ ಬರ್ತಿದ್ದಂತೆ ಎರಡು ಆಟೋ ಹಾಗೂ ಒಂದು ಬೈಕ್ ನಲ್ಲಿ ಬಂದ…

Read More

ಬೆಂಗಳೂರು: ಕಾನೂನು ರದ್ದತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ ಹಾಗಾಗಿ ಇಂದು ಮಧ್ಯರಾತ್ರಿಯಿಂದಲೇ ಲಾರಿ ಸಂಘಟನೆಗಳು ಮುಷ್ಕರ ಕೈಗೊಳ್ಳಲಿದ್ದಾರೆ. ಮುಷ್ಕರ ಹಿನ್ನೆಲೆ 2 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹಾಗೆ ಕಾನೂನು ರದ್ದತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘಗಳು ಮುಷ್ಕರಕ್ಕೆ ಕರೆಕೊಟ್ಟಿವೆ.ಕರ್ನಾಟಕ ಲಾರಿ ಮಾಲೀಕರ ಸಂಘದಿಂದಲೂ ಮಷ್ಕರಕ್ಕೆ ಬೆಂಬಲ ಸಿಕ್ಕಿದೆ. ಇತ್ತ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟ್ ಸಂಘ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಇನ್ನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಹಿಟ್ ಅಯಂಡ್ ರನ್ ಪ್ರಕರಣಗಳಿಗೆ ಕಠಿಣ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೊಸ ಕಾನೂನು ಪ್ರಕಾರ, ರಸ್ತೆಯಲ್ಲಿ ಚಲಿಸುವಾಗ ಲಾರಿಗಳಿಗೆ ಯಾರಾದರೂ ಬಂದು ಅಕಸ್ಮಾತಾಗಿ ಡಿಕ್ಕಿ ಹೊಡೆದರೆ, ಹಾಗೂ ನಮ್ಮ ಚಾಲಕರು ವಾಹನದಲ್ಲಿ ಏನಾದರೂ ತೊಂದರೆ ಉಂಟಾಗಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಪ್ರಯಾಣಿಕರು ಮೃತಪಟ್ಟರೆ ಲಾರಿ ಚಾಲಕರಿಗೆ…

Read More