ಗದಗ: ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಹೊಸ ಹಿಟ್ ಆ್ಯಂಡ್ ರನ್ ಕಾನೂನು ವಿರೋಧಿಸಿ ಹಾಗೂ ಗದಗ ತಾಲೂಕಿನ ಪಾಪನಾಶಿ ಬಳಿ ರಾಜ್ಯ ಹೆದ್ದಾರಿ 45 ರ ಟೋಲ್ ರದ್ದುಪಡಿಸಲು ಆಗ್ರಹಿಸಿ ಗದಗ ಗೂಡ್ಸ್ ಶೆಡ್ ಮತ್ತು ಗದಗ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಪಾಪನಾಶಿ ಬಳಿ ಟೋಲ್ ಬಂದ್ ಮಾಡಿ ಪ್ರತಿಭಟನೆಯನ್ನ ನಡೆಸಲಾಗ್ತಾ ಇದೆ. ಇನ್ನು ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು ಕೇಂದ್ರದ ಹೊಸ ಹಿಟ್ ಆ್ಯಂಡ್ ರನ್ ಕಾನೂನಿನಿಂದ ಚಾಲಕರು ಮಾಲೀಕರಿಗೆ ತೊಂದರೆ ಆಗ್ತಾ ಇದೆ, ಜೊತೆಗೆ ಟೋಲ್ ಅಂತರ ಕನಿಷ್ಟ 60ಕಿಮಿ ಇರಬೇಕು.
ಆದ್ರೆ ಗದಗ ತಾಲೂಕಿನ ಪಾಪನಾಶಿ ಟೋಲ್ ಕೇವಲ 35 ಕಿಮೀ ಅಂತರದಲ್ಲಿದೆ ಹಾಗಾಗಿ ಪಾಪನಾಶಿ ಟೋಲ್ ರದ್ದುಪಡಿಸಲು ಒತ್ತಾಯ ಮಾಡಿದ್ರು. ಕೇಂದ್ರ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿ ರಸ್ತೆಯಲ್ಲೇ ಕುಳಿತು ಊಟ ಮಾಡೋ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಮನವಿ ಆಲಿಸಿ ಟೊಲ್ ಬಂದ್ ಮಾಡಲು ಒತ್ತಾಯಿಸಿಸ್ರು. ಸ್ಥಳಕ್ಕೆ ಆಗಮಿಸಿದ KRDCL ಇಇ ಮುರಳೀಧರ ಹಾಗೂ ಎಇಇ ನಾಗನಾಥ ಅವರಿಗೆ ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡ್ರು.