ಬೆಂಗಳೂರು: ಅದು ಮಧ್ಯರಾತ್ರಿಯ ಸಮಯ.ಕೈಯಲ್ಲಿ ರಾಡ್ ಹಿಡಿದಿದ್ದ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ರು.ಕಂಡ ಕಂಡ ವಾಹನಗಳ ಮೇಲೆ ಬೀಸಿ ಕ್ರೌರ್ಯ ಮೆರೆದಿದ್ರು.ಎರಡು ಕೆಎಸ್ ಆರ್ ಟಿಸಿ ಬಸ್ ಗಳ ಗಾಜು ಪುಡಿ ಪುಡಿ ಮಾಡಿದ್ರು.ಮದ್ಯದ ಅಮಲಲ್ಲಿ ಕಿರಿಕ್ ಮಾಡಿಕೊಂಡವರು ಪೊಲೀಸರ ಅತಿಥಿ ಆಗಿದ್ದಾರೆ
ಕೈಯಲ್ಲಿ ರಾಡ್ ಹಿಡಿದು ಓಡಾಡ್ತಿರೊ ಕ್ರಿಮಿಗಳು..ಪುಡಿ ಪುಡಿಯಾಗಿ ಬಿದ್ದಿರೊ ಕೆಎಸ್ ಆರ್ ಟಿ ಸಿ ಬಸ್ ನ ಕಿಟಕಿ ಗಾಜುಗಳು..ದಿಕ್ಕೇ ತೋಚದಂತೆ ನಿಂತಿರೊ ಚಾಲಕ ಮತ್ತು ನಿರ್ವಾಹಕ..ಮದ್ಯ ರಾತ್ರಿ ನಡೆದ ಈ ಘಟನೆ ಬಸ್ ನಲ್ಲಿದ್ದ ಪ್ರಯಾಣಿಕರೇ ಬೆಚ್ಚಿಬೀಳುವಂತೆ ಮಾಡಿತ್ತು…ಸುಖಾ ಸುಮ್ಮನೆ ಬಂದ ಕಿಡಿಗೇಡಿಗಳು ರಾಡ್ ಬೀಸಿ ಎಸ್ಕೇಪ್ ಆಗಿದ್ರು
ಹೌದು..ಅದು ಮಧ್ಯರಾತ್ರಿ 1.40 ರ ಸಮಯ.ಮೈಸೂರು ಡಿಪೋ ನ ಎರಡು ಕೆಎಸ್ ಆರ್ ಟಿಸಿ ಬಸ್ ಬೆಂಗಳೂರು ತಲುಪಿತ್ತು..ಎರಡು ಬಸ್ ನಲ್ಲಿ ಸುಮಾರು 25 ರಿಂದ 30 ಜನ ಪ್ರಯಾಣಿಕರು ಇದ್ರು..ಬಸ್ ಶಾಂತಲ ಸಿಗ್ನಲ್ ಬಳಿ ಬರ್ತಿದ್ದಂತೆ ಎರಡು ಆಟೋ ಹಾಗೂ ಒಂದು ಬೈಕ್ ನಲ್ಲಿ ಬಂದ ರಿಯಾಜ್,ಇಮ್ರಾನ್ ಸೇರಿದಂತೆ ಐದು ಜನ ಕಿಡಿಗೇಡಿಗಳು ಬಸ್ ಗೆ ಅಡ್ಡ ಹಾಕಿದ್ದಾರೆ.ಏಕಾ ಏಕಿ ರಾಡ್ ನಿಂದ ಬಸ್ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ…
ಘಟನೆಯಿಂದಾಗಿ ಚಾಲಕ ಹಾಗೂ ನಿರ್ವಾಹಕ ಇಬ್ಬರು ಬೆಚ್ಚಿಬಿದ್ದಿದ್ರು..ಮದ್ಯ ಹಾಗೂ ಗಾಂಜಾ ಮತ್ತಲ್ಲಿದ್ದ ಕ್ರಿಮಿಗಳು ಅವಾಚ್ಯ ಪದಗಳಿಂದ ನಿಂದಿಸಿ ಬಸ್ಸಿನ ಎರಡು ಸಬ್ ಕಿಟಕಿ ಗಾಜು,ಒಂದು ಬಸ್ ನ ಹಿಂಬದಿ ಗಾಜನ್ನ ಒಡೆದು ಹಾಕಿದ್ರು.ತಕ್ಷಣ ಬಸ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸೊದ್ದಾರೆ.ಸ್ಥಳಕ್ಕೆ ಬಂದ ಕಾಟನ್ ಪೇಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಸ್ವಲ್ಪವು ತಡ ಮಾಡದೆ ಅಲರ್ಟ್ ಆದ ಪೊಲೀಸರು ರಾತ್ರೋ ರಾತ್ರಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಿಯಾಜ್ ಹಾಗೂ ಇಮ್ರಾನ್ ಬಂಧಿಸಿ ಕರೆತಂದಿದ್ದಾರೆ…ಉಳಿದವರಿಗಾಗಿ ಹುಡುಕಾಟ ನಡೆಸ್ತಿದ್ದಾರೆ
ಏನೇ ಹೇಳಿ ತಾವಾಯ್ತು ತನ್ನ ಕೆಲಸ ಆಯ್ತು ಅಂತಾ ಇರೋದನ್ನ ಬಿಟ್ಟು..ಮದ್ಯದ ಅಮಲಲ್ಲಿ ಅಟ್ಟಹಾಸ ಮೆರೆದು ಪೊಲೀಸರ ಅತಿಥಿ ಆಗಿದ್ದಾರೆ….