ಬೆಂಗಳೂರು: ಅದೊಂದು ಖತರ್ನಾಕ್ ಗ್ಯಾಂಗ್.ಮಾಡಿಕೊಂಡಿದ್ದ ಸಾಲ ತೀರಿಸಲು ಅಡ್ಡ ದಾರಿ ಹಿಡಿದಿದ್ರು.ಹಗಲು ಹೊತ್ತಲೆ ರಾಬರಿಗೆ ಇಳಿದಿದ್ರು.ಒಂಟಿ ಮಹಿಳೆ ಕೈ ಕಾಲು ಕಟ್ಟಿ ಅಟ್ಟಹಾಸ ಮೆರೆದಿದ್ರು.ಅದೇ ಖತರ್ನಾಕ್ ರಾಬರಿ ಗ್ಯಾಂಗ್ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ..
ಈ ಫೋಟೋ ರಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು ಗುರು,ರುದ್ರೇಶ್,ಸಂದೀಪ್,ಪ್ರಭಾವತಿ ಮತ್ತು ರೇಣುಕ.ಮೈ ಬಗ್ಗಿಸಿ ದುಡಿದು ತಿಂದಿದ್ದಿದ್ರೆ ಇವತ್ತು ಪೊಲೀಸ್ ಠಾಣೆಯಲ್ಲಿ ಕೈಕಟ್ಟಿ ನಿಲ್ಲೊ ಪರಿಸ್ಥಿತಿ ಬರ್ತಾ ಇರ್ಲಿಲ್ಲ.ಆದ್ರೆ ಅಡ್ಡದಾರಿ ಹಿಡಿದು ಹೋದವರು ಒಂದೇ ದಿನಕ್ಕೆ ಪೊಲೀಸರ ಅತಿಥಿಗಳಾಗಿದ್ದಾರೆ..
ಹೌದು ಅದು ಜನವರಿ 14 ರ ಬೆಳಗ್ಗೆ 9.30 ರ ಸಮಯ..ಸ್ಥಳ ತಿಂಡ್ಲು ಸರ್ಕಲ್ ನಲ್ಲಿರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್.ಆಗಷ್ಟೇ ಕೆಲಸಕ್ಕೆ ಬಂದಿದ್ದ ಅನುಶ್ರೀ ಒಂದು ಗ್ರಾಹಕರ ಮಸಾಜ್ ಮುಗಿಸಿ ಕೂತಿದ್ರು ಈ ವೇಳೆ ಎಂಟ್ರಿಕೊಟ್ಟವಳೇ ಪ್ರಭಾವತಿ..ನನಗೂ ಮಸಾಜ್ ಮಾಡ್ಬೇಕು ಹಣವನ್ನ ನನ್ನ ಗಂಡ ಕೊಡ್ತಾನೆ ಅಂತಾ ಗುರು ಎಂಬಾತನನ್ನ ಒಳಗೆ ಕರೆಸಿಕೊಂಡಿದ್ಳು..ಏಕಾಏಕಿ ಬಂದ ಗುರು ಕರ್ಚೀಫ್ ನಲ್ಲಿ ಕೆಮಿಕಲ್ ಹಾಕಿ ಬಾಯಿ ಮತ್ತು ಮೂಗಿಗೆ ಇಟ್ಟಿದ್ದ..ನಂತರ ರುದ್ರೇಶ್ ಮತ್ರು ಸಂದೀಪ್ ಎಂಟ್ರಿ ಕೊಟ್ಟಿದ್ರು ನಾಲ್ವರು ಸೇರಿ ಮಹಿಳೆ ಕೈ ಕಾಲು ಕಟ್ಟಿ ಹಾಕಿ ಮೈಮೇಲಿದ್ದ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ರಾಬರಿ ಮಾಡಿ ಪರಾರಿಯಾಗಿದ್ರು.ನಂತರ ಅನುಶ್ರೀ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರು ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ
ಹೌದು..ಅಷ್ಟಕ್ಕೂ ದೂರುದಾರೆ ಅನುಶ್ರೀ ಹಾಗೂ ರೇಣುಕಾ ಇಬ್ಬರು ಪರಿಚಯಸ್ಥರೇ ರೇಣುಕಾ ಕೆಂಗೇರಿ ಬಳಿಯಲ್ಲಿ ಮಸಾಜ್ ಪಾರ್ಲರ್ ನಡೆಸ್ತಿದ್ದಾಳೆ..ಆಕೆ ಗಂಡ ಗುರುನೊಂದಿಗೆ ಸಂಚು ಹಾಕಿದ್ಳು..ಪ್ರಭಾವತಿ ಸೇರಿದಂತೆ ನಾಲ್ಕು ಜನರ ಟೀಂ ಮಾಡಿ ಫೀಲ್ಡಿಗೆ ಇಳಿಸಿದ್ಳು.ಒಂದು ದಿನ ಮುಂಚಿತವಾಗೆ ಆಯುರ್ವೇದಿಕ್ ಮಸಾಜ್ ಸೆಂಟರ್ ಗೆ ಬಂದಿದ್ದ ಪ್ರಭಾವತಿ ವಿಚಾರಣೆ ಮಾಡೊ ರೂಪದಲ್ಲಿ ಬಂದು ಹೊಂಚು ಹಾಕಿ ಹೋಗಿದ್ಳು..ಮರು ದಿನ ಬಂದವರೇ ಬೆಳಗಿನ ಹೊತ್ತಲ್ಲೇ ರಾಬರಿ ಮಾಡಿ ಪರಾರಿಯಾಗಿದ್ರು..
ಸದ್ಯ ಪ್ರಕರಣ ದಾಖಲಿಸಿಕೊಂಡ ಕೊಡಿಗೆಹಳ್ಲಿ ಪೊಲೀಸರು ಐವರನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.ವಿಚಾರಣೆ ವೇಳೆ ಮಾಡಿದ್ದ ಸಾಲ ತೀರಿಸಲು ರಾಬರಿ ಮಾಡಿರೋದಾಗಿ ಹೇಳಿಕೊಂಡಿದ್ದಾರೆ..ಘಟನೆಗೆ ಬೇರೆ ಏನಾದ್ರು ಕಾರಣ ಇದ್ಯಾ ಅನ್ನೋ ಬಗ್ಗೆ ತನಿಖೆ ಮುಂದುವರೆಸಿದ್ದಾರೆ