ಹೈದರಾಬಾದ್: ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಬ್ಯಾಟರ್ಗಳರು ಸಿಕ್ಸರ್, ಬೌಂಡರಿಗಳನ್ನು ಸಿಡಿಸಿದ ಪರಿಣಾಮ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಐಪಿಎಲ್ನಲ್ಲಿ (IPL) ಹೊಸ ದಾಖಲೆ ಬರೆದಿದೆ.
ಈ ಹಿಂದೆ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರಿನಲ್ಲಿ ಇತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಔಟಾಗದೇ 175 ರನ್ ಚಚ್ಚಿದ್ದರು.
ಮೊಹಮ್ಮದ್ ಸಿರಾಜ್;ನನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿದ ಸೆಹ್ವಾಗ್! ಕಾರಣ
ಟಾಸ್ ಸೋತು ಬ್ಯಾಟ್ ಮಾಡಿದ ಹೈದರಾಬಾದ್ ಬ್ಯಾಟರ್ಗಳು ಆರಂಭದಿಂದಲೇ ಚಚ್ಚಲು ಆರಂಭಿಸಿದರು. ಮೊದಲ ವಿಕೆಟಿಗೆ 4.1 ಓವರ್ಗಳಲ್ಲಿ 45 ರನ್ ಬಂದಿತ್ತು. ಎರಡನೇ ವಿಕೆಟಿಗೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 23 ಎಸೆತಗಳಲ್ಲಿ 68 ರನ್ ಹೊಡೆದರು. ಟ್ರಾವಿಸ್ ಹೆಡ್ 62 (24 ಎಸೆತ, 9 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.
ಅಭಿಷೇಕ್ ಶರ್ಮಾ ಮತ್ತು ಮಾರ್ಕ್ರಾಮ್ 19 ಎಸೆತಗಳಲ್ಲಿ 48 ರನ್ ಜೊತೆಯಾಟವಾಡಿದರು. ಅಭಿಷೇಕ್ ಶರ್ಮಾ 63 ರನ್ (23 ಎಸೆತ, 3 ಬೌಂಡರಿ, 7 ಸಿಕ್ಸರ್) ಹೊಡೆದು ವಿಕೆಟ್ ಒಪ್ಪಿಸಿದರು.
ಮಾರ್ಕ್ರಾಮ್ ಮತ್ತು ಹೆನ್ರಿಕ್ ಕ್ಲಾಸನ್ (Heinrich Klaasen) ಮುಂಬೈ ಬೌಲರ್ಗಳನ್ನು ಅಕ್ಷರಶ: ಚೆಂಡಾಡಿದರು. ಸಿಕ್ಸ್, ಬೌಂಡರಿ ಹೊಡೆದು ಬೆವರಿಳಿಸಿದರು. ಇಬ್ಬರು ಮುರಿಯದ ನಾಲ್ಕನೇ ವಿಕೆಟಿಗೆ 55 ಎಸೆತಗಳಲ್ಲಿ 116 ರನ್ ಹೊಡೆದು ತಂಡದ ಮೊತ್ತವನ್ನು 270 ರನ್ಗಳ ಗಡಿಯನ್ನು ದಾಟಿಸಿದರು. ಕ್ಲಾಸನ್ ಔಟಾಗದೇ 80 ರನ್ ( 34 ಎಸೆತ, 4 ಬೌಂಡರಿ, 7 ಸಿಕ್ಸರ್), ಮಾರ್ಕ್ರಾಮ್ ಔಟಾಗದೇ 42 ರನ್ ( 28 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರು.