ಲಕ್ನೊ ವಿರುದ್ಧ ರಾಜಸ್ಥಾನ್ಗೆ 7 ವಿಕೆಟ್ ಭರ್ಜರಿ ಜಯ ಸಿಕ್ಕಿದ್ದು,ಪ್ಲೇಆಫ್ ಹೊಸ್ತಿಲಲ್ಲಿ ಸಂಜು ಬಳಗ ಇದೆ. ಒಟ್ಟು 16 ಅಂಕಗಳನ್ನು ಪಡೆದಿರುವ ರಾಜಸ್ಥಾನ್ ಬಳಗ ಬಹುತೇಕ ಪ್ಲೇ ಆಫ್ ಹಂತಕ್ಕೇರಿದೆ. ಆದರೆ, ಅದಿನ್ನೂ ಅಧಿಕೃತಗೊಂಡಿಲ್ಲ. ಅತ್ತ ಲಕ್ನೊ ತಂಡ ಸತತ ಎರಡು ಗೆಲುವಿನ ಬಳಿಕ ಸೋಲಿಗೆ ಸಿಲುಕಿದೆ. ಇದು ಆ ತಂಡಕ್ಕೆ ಒಟ್ಟು 9 ಪಂದ್ಯಗಳಲ್ಲಿ 4ನೇ ಸೋಲು. ಆದಾಗ್ಯೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.
Gold Price: ಚಿನ್ನದ ಬೆಲೆಯಲ್ಲಿ ಈ ವಾರ ಭಾರಿ ಇಳಿಕೆ – ಇಲ್ಲಿದೆ ಇವತ್ತಿನ ದರಪಟ್ಟಿ..!
ಇಲ್ಲಿನ ಶ್ರೀ ಅಟಲ್ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯಿತು. ಟಾಸ್ ಗೆದ್ದ ರಾಜಸ್ಥಾನ್ ಆಯ್ಕೆ ಮಾಡಿಕೊಂಡರೆ ಮೊದಲು ಬ್ಯಾಟ್ ಮಾಡಿದ ಲಕ್ನೊ ಬಳಗ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 196 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ಗೆ 199 ರನ್ ಬಾರಿಸಿ ಭರ್ಜರಿಗೆ ಗೆಲವು ತನ್ನದಾಗಿಸಿಕೊಂಡಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ತಂಡ ರನ್ ಗಳಿಸುತ್ತಲೇ ಸಾಗಿತು. ಯಶಸ್ವಿ ಜೈಸ್ವಾಲ್ 24 ರನ್ ಬಾರಿಸಿದರೆ ಜೋಸ್ ಬಟ್ಲರ್ 34 ರನ್ಗಳ ಕೊಡುಗೆ ಕೊಟ್ಟರು. ಆ ಬಳಿಕ ಬಂದ ಸಂಜು ಸ್ಯಾಮ್ಸನ್ ವಿಕೆಟ್ ಉರುಳದಂತೆ ನೋಡಿಕೊಂಡ ಜತೆಗೆ 33 ಎಸೆತಗಳಲ್ಲಿ 71 ರನ್ ಬಾರಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್ 14 ರನ್ಗೆ ಸೀಮಿತಗೊಂಡರು. ಆದರೆ ಐದನೇ ಕ್ರಮಾಂಕದಲ್ಲಿ ಆಡಿದ ಧ್ರುವ್ ಜುರೆಲ್ ಅಮೋಘ ಇನಿಂಗ್ಸ್ ಆಡಿದರು. ಅವರು 34 ಎಸೆತಕ್ಕೆ 52 ರನ್ ಕೊಡುಗೆ ಕೊಟ್ಟರು. ಇದು ಹಾಲಿ ಅವೃತ್ತಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.
ಹಿಂದಿನ ಗೆಲುವಿನ ಉತ್ಸಾಹದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಲಕ್ನೊ ತಂಡಕ್ಕೆ ಕ್ವಿಂಟನ್ ಡಿ ಕಾಕ್ 8 ರನ್ಗೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಕೆ. ಎಲ್ ರಾಹುಲ್ 76 ರನ್ ಬಾರಿಸುವ ಮೂಲಕ ತಂಡವನ್ನು ಕಾಪಾಡಿದರು. ಆದರೆ, ಹಿಂದಿನ ಪಂದ್ಯದ ಹೀರೊ ಮಾರ್ಕಸ್ ಸ್ಟೊಯ್ನಿಸ್ ಶೂನ್ಯಕ್ಕೆ ಔಟಾಗಿ ಹಿನ್ನಡೆ ಉಂಟು ಮಾಡಿದರು. ದೀಪಕ್ ಹೂಡ 50 ರನ್ ಬಾರಿಸಿದರು. ಕೊನೆಯ ಬ್ಯಾಟರ್ಗಳ ಸಣ್ಣ ಪುಟ್ಟ ರನ್ಗಳ ಕೊಡುಗೆಗಳೊಂದಿಗೆ ಸ್ಪರ್ಧಾತ್ಮ ಮೊತ್ತ ಪೇರಿಸಿತು ಎನ್ನಲಾಗಿದೆ.