ಬಿಟೌನ್ ಕಿರುತೆರೆಯಲ್ಲಿ ನಟಿ ದಿವ್ಯಾಂಕಾ ತ್ರಿಪಾಠಿ ಸಖತ್ ಕ್ರೇಜ್ ಹೊಂದಿದ್ದಾರೆ. ಅಲ್ಲದೆ, ಧಾರಾವಾಹಿ ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಸಹ ಹೌದು.. ತಮ್ಮ ವೃತ್ತಿಜೀವನದ ಕುರಿತು ಮಾತನಾಡಿರುವ ದಿವ್ಯಾಂಕಾ, ಸಿನಿ ಲೋಕಕ್ಕೆ ಎಂಟ್ರಿ ಕೊಡುವ ಮುನ್ನ ಟೂತ್ ಪೇಸ್ಟ್ ಬಾಕ್ಸ್ಗಳನ್ನು ಮಾರಾಟ ಮಾಡುತ್ತಿದ್ದರು.. ಇದರಿಂದ ಅವರಿಗೆ ತಿಂಗಳಿಗೆ 2 ಸಾವಿರ ರೂ. ಸಿಗುತ್ತಿತ್ತು ಅಂತ ಹೇಳಿಕೊಂಡಿದ್ದಾರೆ.
ವೀರ ನಾರಿ ಒನಕೆ ಓಬವ್ವನ ರೂಪ ತಾಳಿದ ಡಿಕೆಶಿ ಪುತ್ರಿ! – ಕಾರಣ ಇಲ್ಲಿದೆ!
ಸಧ್ಯ ದಿವ್ಯಾಂಕಾ ಕಾಸ್ಟಿಂಗ್ ಕೌಚ್ ಮೌನ ಮುರಿದಿದ್ದಾರೆ. ಸಿನಿಮಾದಲ್ಲಿ ನಟಿಸಲು ಚಾನ್ಸ್ ಬೇಕು ಅಂದ್ರೆ ಏನೇಲ್ಲಾ ಮಡ್ಬೇಕು ಅಂತ ಬಿಟೌನ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನನಗೊಂದು ಸೀರಿಯಲ್ನಲ್ಲಿ ನಟಿಸುವ ಅವಕಾಶ ಬಂದಿತ್ತು. ಒಳ್ಳೆ ಅವಕಾಶ ಸಿಕ್ಕದೆ ಅಂತ ಅಂದುಕೊಂಡು ಅಲ್ಲಿಗೆ ಹೋದ್ರೆ, ಡೈರೆಕ್ಟರ್ ತನ್ನ ಜೊತೆ ಒಂದು ರಾತ್ರಿ ಕಳೆದರೆ ಮಾತ್ರ ಸೀರಿಯಲ್ ಆಫರ್ ಕೊಡುತ್ತೇನೆ ಎಂದು ಹೇಳಿದ್ದ ಅಂತ ಶಾಕಿಂಗ್ ನ್ಯೂಸ್ ಹೊರ ಹಾಕಿದ್ದಾರೆ. ಒಪ್ಪಿಕೊಳ್ಳದಿದ್ದರೆ, ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ, ಅಂತಹ ಜನರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ನೀವು ನಿಮ್ಮ ಪ್ರತಿಭೆಯನ್ನು ನಂಬಿ ಅಂತ ಯುವ ಪಿಳೀಗೆಗೆ ಸಲಹೆ ನೀಡಿದ್ದಾರೆ.