ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇದೀಗ ರಿಷಭ್ ಪಂತ್ ವಿಚಾರಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಪಂತ್ ಅವರೊಂದಿಗೆ ಮದುವೆ ವಿಚಾರಕ್ಕೆ ನಟಿ ಕೊಟ್ಟ ಪ್ರತಿಕ್ರಿಯೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆಯುವಂತೆ ಮಾಡಿದೆ. ಹೌದು. ಪಾಡ್ಕಾಸ್ಟ್ವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ರೌಟೆಲಾ ಉತ್ತರ ನೀಡುತ್ತಿದ್ದರು.
Car airbags: ನಿಮ್ಮ ಕಾರಿನಲ್ಲಿರುವ ಏರ್ʼಬ್ಯಾಗ್ ಅಸಲಿಯೋ, ನಕಲಿಯೋ ತಿಳಿಯುವುದೇಗೆ ಗೊತ್ತಾ..? ಈ ಸ್ಟೋರಿ ನೋಡಿ
ಇದೇ ವೇಳೆ ಆಂಕರ್, ʻರಿಷಭ್ ಪಂತ್ ನಿಮ್ಮನ್ನು ತುಂಬಾ ಗೌರವಿಸುತ್ತಾರೆ, ತುಂಬಾ ಚೆನ್ನಾಗಿಯೂ ನೋಡಿಕೊಳ್ಳುತ್ತಾರೆ, ನೀವು ಅವರನ್ನು ಮದುವೆಯಾಗಬೇಕು ಅನ್ನೋದು ನಮ್ಮ ಬಯಕೆ, ಇದಕ್ಕೆ ಏನಂತೀರಾ?ʼ ಎಂದು ನೆಟ್ಟಿಗನ ಪ್ರಶ್ನೆಯೊಂದನ್ನು ಪ್ರಸ್ತಾಪಿಸಿದರು. ಆದ್ರೆ ಊರ್ವಶಿ ಇದಕ್ಕೆ ನೋ ಕಾಮೆಂಟ್ಸ್ ಎನ್ನುತ ಮುಂದಿನ ಪ್ರಶ್ನೆಗೆ ಸಾಗಿದರು.
Urvashi Rautela talking about comments on marrying Rishabh Pant in a latest podcast 😵
Video Credits @filmygyan #ipl pic.twitter.com/1Ps5s3xvk2
— Riseup Pant (@riseup_pant17) May 3, 2024
ಇದೇ ವೇಳೆ ಪಾಕಿಸ್ತಾನ ತಂಡದ ಸ್ಟಾರ್ ಬೌಲರ್ ನಸೀಮ್ ಶಾ (Naseem Shah) ಬಗ್ಗೆ ಕೇಳಿದಾಗ, ಖುಷಿಯಿಂದಲೇ ಉತ್ತರಿಸಿದ ಊರ್ವಶಿ ಹ್ಯಾಶ್ಟ್ಯಾಗ್ (ಟ್ರೆಂಡಿಂಗ್) ಬೌಲರ್ ಎಂದು ಹೇಳಿದರು. ಮುಂದುವರಿದು, ನಸೀಮ್ ಒಳ್ಳೆಯ ಬೌಲರ್ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಲ್ಲಂತೂ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ನಟಿ ನೀಡಿರುವ ಪ್ರತಿಕ್ರಿಯೆಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಟಿಯ ಕಾಲೆಳೆದಿದ್ದಾರೆ.