ಬೆಂಗಳೂರು:- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪುತ್ರಿ ವೀರ ನಾರಿ ಒನಕೆ ಓಬವ್ವನ ರೂಪ ತಾಳಿದ್ದಾರೆ. ಸಧ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಏಕಕಾಲಕ್ಕೆ 6 ಮಕ್ಕಳಿಗೆ ಜನ್ಮ: 4 ಗಂಡು, 2 ಹೆಣ್ಣು, ಎಲ್ಲಾ ಶಿಶುಗಳು ಆರೋಗ್ಯ ಎಂದ ವೈದ್ಯರು!
ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಶಿವಕುಮಾರ್ ಅವರು ಒನಕೆ ಓಬವ್ವ ಅವರ ವೇಷ ತೊಟ್ಟು ಫೋಟೋಶೂಟ್ ಮಾಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಾವು ಒನಕೆ ಓಬವ್ವ ಅವರ ವೇಷ ತೊಟ್ಟ ಬಗ್ಗೆ ಐಶ್ವರ್ಯ ಶಿವಕುಮಾರ್ ಅರ್ಥ ಪೂರ್ಣ ಕ್ಯಾಪ್ಷನ್ವೊಂದನ್ನು ಬರೆದುಕೊಂಡಿದ್ದಾರೆ.
ಹೆಣ್ಣು ಅಬಲೆಯಲ್ಲ, ಎಲ್ಲವನ್ನೂ ಸಾಧಿಸಬಲ್ಲ ಶಕ್ತಿ ಆಕೆಗಿದೆ. ಧೈರ್ಯ, ಸಾಹಸದ ಮೂಲಕ ನಾರಿಶಕ್ತಿಯ ಪ್ರತೀಕವಾಗಿ ಒನಕೆ ಓಬವ್ವ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ. ‘ಧೈರ್ಯಂ ಸರ್ವತ್ರ ಸಾಧನಂ.’ ಧೈರ್ಯ ಇದ್ದರೆ ಎಂತಹ ಸಮಸ್ಯೆ ಎದುರಾದರೂ ಜಯಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಒನಕೆ ಓಬವ್ವ ಅವರು ಇತಿಹಾಸ ಪುಟದಲ್ಲಿ ಅಜರಾಮರವಾಗಿದ್ದಾರೆ.
ನನ್ನ ಬಾಲ್ಯದ ರೋಲ್ ಮಾಡೆಲ್ ಒನಕೆ ಓಬವ್ವ, ನಾನು ಮೊದಲು 6ನೇ ತರಗತಿಯಲ್ಲಿ ನಾಟಕವೊಂದರಲ್ಲಿ ಓಬವ್ವನ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ ಐಕಾನಿಕ್ ವುಮೆನ್ ಪಾಡ್ಕ್ಯಾಸ್ಟ್ ಸೀಸನ್ 2ಗೆ ಇತ್ತೀಚಿಗೆ ನೀಡಿದ ಸಂದರ್ಶನದ ಸಂಚಿಕೆಗಾಗಿ ಆ ಪ್ರಮುಖ ಕ್ಷಣವನ್ನು ಮರುಸೃಷ್ಟಿಸಲು ನಾನು ಗೌರವ ಮತ್ತು ಸ್ಫೂರ್ತಿ ಪಡೆದಿದ್ದೇನೆ. ಓಬವ್ವನ ಸಾಂಪ್ರದಾಯಿಕ ಪರಂಪರೆಯನ್ನು ಗೌರವಿಸುವುದು ಮತ್ತು ನನ್ನ ಪ್ರಯಾಣಕ್ಕೆ ಸ್ಫೂರ್ತಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯ ಶಿವಕುಮಾರ್ ಅವರ ಒನಕೆ ಓಬವ್ವ ವೇಷ ತೊಟ್ಟ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.