ರಾಮನಗರ:- ಮಹಿಳೆಯರ ಗೌರವಕ್ಕೆ ಚ್ಯುತಿ ತಂದಿರುವ ಡಿಕೆಶಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಯೋಗೇಶ್ವರ್ ಹೇಳಿದ್ದಾರೆ.
ಗುಜರಾತ್ ತಂಡದ ನಾಯಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟ ಕಿಂಗ್ ಕೊಹ್ಲಿ.. ಕಾರಣ ಇಲ್ಲಿದೆ!
ಈ ಸಂಬಂಧ ಮಾತನಾಡಿದ ಅವರು,ಅಶ್ಲೀಲ ವಿಡಿಯೋಗಳನ್ನು ಬಹಿರಂಗ ಮಾಡುವಲ್ಲಿ ನೇರವಾಗಿ ಭಾಗಿಯಾಗಿರುವ ಡಿಕೆ ಶಿವಕುಮಾರ್ ತಾವು ನಿರ್ವಹಿಸುತ್ತಿರುವ ಹುದ್ದೆಗೆ ಕಳಂಕ ತಂದಿದ್ದಾರೆ, ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ತನಿಖೆ ನಡೀತಾ ಇದೆ, ಅಶ್ಲೀಲ ವಿಡಿಯೋಗಳು ಪ್ರಜ್ವಲ್ ರೇವಣ್ಣನ ಖಾಸಗಿ ವಿಚಾರ ಅದರ ಬಗ್ಗೆ ಕಾಮೆಂಟ್ ಮಾಡಲ್ಲ, ಅದರೆ ವಿಡಿಯೋಗಳಿಂದಾಗಿ ನೂರಾರು ಮಹಿಳೆಯ ಗೌರವ ಮಣ್ಣುಪಾಲಾಯಿತಲ್ಲ? ಶಿವಕುಮಾರ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದರೂ, ಮಾದರಿಯೆನಿಸುವ ಆಡಳಿತ ನಡೆಸದೆ ಅಡ್ಡದಾರಿ ಹಿಡಿದಿದ್ದಾರೆ. ಹಿಂದೆ ಅವರು ನಡೆಸಿದ ಅಡ್ಡ ಕಸುಬುಗಳು ಸಾಬೀತಾಗಿವೆ. ಈಗ ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಅವರು ಹುದ್ದೆಯ ಘನತೆಗೆ ತಕ್ಕಂತೆ ವರ್ತಿಸದೆ, ಹೆಚ್ ಡಿ ದೇವೇಗೌಡರ ಕುಟುಂಬವನ್ನು ತೇಜೋವಧೆ ಮಾಡುವ ಮತ್ತು ಅವರ ಪಕ್ಷವನ್ನು ಮಟ್ಟಹಾಕುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.