ಐಪಿಎಲ್ 2024ರಲ್ಲಿ ಆರ್ಸಿಬಿ ವಿರುದ್ಧ ಗುಜರಾತ್ ಟೈಟನ್ಸ್! ಕೆಟ್ಟ ದಾಖಲೆ ಬರೆದಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂದ್ಯ ನಡೆಯುತ್ತಿದೆ.
Breaking News: 14 ವರ್ಷದ ಅಪ್ರಾಪ್ತೆಗೆ ಹೆರಿಗೆ.. ಪೊಲೀಸರಿಂದ ತನಿಖೆ..!
ಮೊದಲು ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೇಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಫಾಫ್ ತಂತ್ರದಂತೆ ಆರ್ಸಿಬಿ ಬೌಲರ್ಸ್ ಸಹ ಭರ್ಜರಿ ಬೌಲಿಂಗ್ ದಾಳಿ ಮಾಡಿದರು.
ಹೌದು, ಮೊದಲು ಬ್ಯಾಟಿಂಗ್ ಮಾಡಲು ಬಂದಿದ್ದ ಗುಜರಾತ್ ಟೈಟನ್ಸ್ ತಂಡದ ಆರಂಭಿಕರಿಂದ ನೀರಸ ಪ್ರದರ್ಶನ ಹೊರಬಂದಿತು. ಕ್ರಮವಾಗಿ ಗುಜರಾತ್ ತಂಡ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. ಅದರಂತೆ 1 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ 10 ರನ್ಗೆ 2ನೇ ವಿಕೆಟ್, ಮತ್ತು 19 ರನ್ಗೆ 3ನೇ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಸತತ ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕುವ ನಡುವೆ ಐಪಿಎಲ್ 2024ರಲ್ಲಿ ಗುಜರಾತ್ ತಂಡ ಬೇಡದ ಕೆಟ್ಟ ದಾಖಲೆ ಬರೆದಿದೆ. ಈ ವೇಳೆ ಗುಜರಾತ್ ತಂಡದ ಆಟಗಾರರಾದ ವೃದ್ಧಿಮಾನ್ ಸಾಹಾ 7 ಎಸೆತದಲ್ಲಿ 1 ರನ್ ಗಳಿಸಿ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರೆ, 2 ರನ್ ಗಳಿಸಿದ್ದ ನಾಯಕ ಶುಭ್ಮನ್ ಗಿಲ್ ಸಹ ಸಿರಾಜ್ ಓವರ್ ನಲ್ಲಿ ವಿಕೆಟ್ ಕೈಚಲ್ಲಿದರು. ನಂತರ ಕ್ಯಾಮರೂನ್ ಗ್ರೀನ್ ಓವರ್ ನಲ್ಲಿ ಸಾಯಿ ಸುದರ್ಶನ್ 6 ರನ್ ಗಳಿಸಿ ಔಟ್ ಆದರು. ಈ ಮೂಲಕ 19 ರನ್ಗೆ 3 ವಿಕೆಟ್ ಕಳೆದುಕೊಂಡಿತು.
ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಅತ್ಯಂತ ಕಡಿಮೆ ಪವರ್ಪ್ಲೇ ಸ್ಕೋರ್ ದಾಖಲಿಸುವ ಮೂಲಕ ಕೆಟ್ಟ ದಾಖಲೆ ಬರೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ , ಗುಜರಾತ್ ಬ್ಯಾಟ್ಸ್ಮನ್ಗಳು ಮೊದಲ ಆರು ಓವರ್ಗಳಲ್ಲಿ (ಪವರ್ ಪ್ಲೇ) 23/3 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಇದಕ್ಕೂ ಮುನ್ನ ಏಪ್ರಿಲ್ 9ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಪವರ್ ಪ್ಲೇ ಅಲ್ಲಿ ಕೇವಲ 27 ರನ್ ಗಳಿಸಿತ್ತು. ಈ ಹಿಂದೆ ಪವರ್ಪ್ಲೇನಲ್ಲಿ ತಂಡವು ಅತ್ಯಂತ ಕಡಿಮೆ ಮೊತ್ತ ಇದಾಗಿತ್ತು. ಆದರೆ ಇದೀಗ ಗುಜರಾತ್ ತಂಡವು 23 ರನ್ ಗಳಿಸುವ ಮೂಲಕ ಪವರ್ ಪ್ಲೇ ಅಲ್ಲಿ ಕಡಿಮೆ ಸ್ಕೋರ್ ದಾಖಲಿಸಿದ ಕೆಟ್ಟ ದಾಖಲೆ ಬರೆದಿದೆ.