ಬೆಂಗಳೂರು: ಏಪ್ರಿಲ್ 26 ರಂದು ಕರ್ನಾಟಕದ ಮೊದಲ ಹಂತದ ಲೋಕ ಕದನಕ್ಕೆ ಭರ್ಜರಿ ಸಿದ್ಧತೆಯನ್ನ ಪಕ್ಷಗಳು ಮಾಡಿಕೊಳ್ತಿದೆ.ಶತಾಯಗತಾಯ ಗೆಲ್ಲೊ ಹಠದಿಂದ ಮತದಾರರನ್ನ ಸೆಳೆಯೋಕೆ ನಾನ ಕಸರತ್ತು ಮಾಡ್ತಿವೆ…ಇದ್ರ ನಡುವೆ ದೂರದ ಊರಲ್ಲಿರೋ ಮತದಾರರನ್ನು ತಮ್ಮ ಊರಿನತ್ತ ಕರೆತರಲು ಬಸ್ ವ್ಯವಸ್ಥೆ ಕೂಡ ಕಲ್ಪಿಸೋಕೆ ಮುಂದಾಗಿವೆ…ಖಾಸಗಿ ಬಸ್ಗಳಿಗೆ ಡಿಮ್ಯಾಂಡ್ ಹೆಚ್ಚಿದ್ದು ,ಬೇಡಿಕೆ ಜೊತೆ ಬಸ್ ದರವೂ ಕೂಡ ದುಪ್ಪಾಟಾಗಿದೆ.
ಲೋಕಾ ಚುನಾವಣೆ ಅಖಾಡದ ಫೈನಲ್ಗೆ ಮುಹೂರ್ತ ಹತ್ರ ಬರ್ತಿದೆ..ಮತದಾರ ಪ್ರಭುಗಳ ಮನವನ್ನ ಗೆಲ್ಲೋ ಹಠಕ್ಕೆ ಬಿದ್ದಿರೋ ಪಕ್ಷಗಳು ನಾನಾ ಸ್ಟ್ರಾಟಜೀ ಮಾಡ್ಕೊಂಡು ಗೆಲುವಿನ ನಗೆ ಬೀರಲು ಪ್ರಯತ್ನಿಸ್ತಿವೆ..ಲೋಕಾ ಚುನಾವಣೆಯ ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿದೆ ಮತದಾನ.ಮತದಾನಕ್ಕಾಗಿ ಬೆಂಗಳೂರಿನಿಂದ ಊರಿಗೆ ತೆರಳಲು ಜನರು ಸಜ್ಜಾಗಿದ್ದಾರೆ.
ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ!
ಏಫ್ರಿಲ್ 25ರ ರಾತ್ರಿ ಊರಿಗೆ ತೆರಳಲು ಜನ ಸಜ್ಜಾಗಿದ್ದು…ಖಾಸಗಿ ಬಸ್ಗಳಿಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ, ಮೈಸೂರಿಗೆ ಹೋಗುವ ಬಸ್ ಗೆ ಡಿಮ್ಯಾಂಡ್ ಹೆಚ್ಚಿದ್ದು ,ರಾಜಕೀಯ ಪಕ್ಷಗಳಿಂದ ,ಮಾಮೂಲಿ ಬಸ್ ಹೊರತು ಪಡಿಸಿ ಕರಾವಳಿ ಭಾಗಕ್ಕೆ ಹೆಚ್ಚುವರಿ 300ಕ್ಕೂ ಅಧಿಕ ಬಸ್ ಬುಕ್ಕಿಂಗ್ ಆಗಿವೆ.
ಪ್ರಮುಖವಾಗಿ 7 ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ಗಳನ್ನು ಒದಗಿಸುವಂತೆ ಡಿಮ್ಯಾಂಡ್ ಹೆಚ್ಚಿದ್ಯಂತೆ.ಖಾಸಗಿ ಬಸ್ ಮಾಲೀಕರ ಸಂಘಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಬೇಡಿಕೆಯನ್ನ ಇಟ್ಟಿದ್ದಾರೆ..ಇತ್ತ ಬೇಡಿಕೆ ಹೆಚ್ಚಾಗ್ತಿದ್ದಂತೆ ಖಾಸಗಿ ಬಸ್ ದರ ಒನ್ ಟು ಡಬಲ್ ಏರಿಕೆಯಾಗಿದೆ..ಅತ್ತ ಸ್ವಯಂ ಪ್ರೇರಿತರಾಗಿ ಊರಿಗೆ ತೆರಳಲು ಜನ್ರೇ ಬಸ್ ಬುಕ್ ಮಾಡ್ತಿದ್ದಾರೆ…ಇದನ್ನೇ ಬಂಡವಾಳ ಮಾಡ್ಕೊಂಡಿರೋ ಖಾಸಗಿ ಬಸ್ ಬುಕ್ಕಿಂಗ್ ಆ್ಯಪ್ ನಲ್ಲಿ ಮನಬಂದಂತೆ ದರ ನಿಗದಿ ಮಾಡಿವೆ..ಇನ್ನೂ ಖಾಸಗಿ ಬಸ್ಗಳು ಕೂಡ 300-500 ರೂ ಹೆಚ್ಚಳ ದರ ಏರಿಕೆ ಮಾಡಿವೆ..
ಯಾವ ಜಿಲ್ಲೆಗೆ ಎಷ್ಟು ಬಸ್..?
- ಬೆಂಗಳೂರು- ಮಂಗಳೂರು 350 ಖಾಸಗಿ ಬಸ್
- ಬೆಂಗಳೂರು – ಉಡುಪಿ 150 ಖಾಸಗಿ ಬಸ್
- ಬೆಂಗಳೂರು – ಚಿಕ್ಕಮಗಳೂರು 65 ಖಾಸಗಿ ಬಸ್
- ಬೆಂಗಳೂರು-ಹಾಸನ. 70 ಖಾಸಗಿ ಬಸ್
- ಬೆಂಗಳೂರು- ಚಿತ್ರದುರ್ಗ 201 ಖಾಸಗಿ ಬಸ್
- ಬೆಂಗಳೂರು- ಮೈಸೂರು. 100 ಖಾಸಗಿ ಬಸ್
- ಬೆಂಗಳೂರು- ಚಾಮರಾಜನಗರ. 50 ಖಾಸಗಿ ಬಸ್
ಖಾಸಗಿ ಬಸ್ ಗೆ ಡಿಮ್ಯಾಂಡ್
ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ ₹500- ₹1000
ಏಪ್ರಿಲ್ 25 ದರ ₹1600- ₹1950
ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ ₹600- ₹950
ಏಪ್ರಿಲ್ 25 ದರ ₹1650-₹1950
ಬೆಂಗಳೂರು – ಚಿಕ್ಕಮಗಳೂರು
ಸಾಮಾನ್ಯ ದಿನದ ದರ ₹550 ₹600
ಇಂದಿನ ದರ ₹1100-₹1600
ಬೆಂಗಳೂರು-ಹಾಸನ
ಸಾಮಾನ್ಯ ದಿನದ ದರ ₹650 ₹850
ಏಪ್ರಿಲ್ 25 ದರ ₹1200-₹1600
ಬೆಂಗಳೂರು- ಚಿತ್ರದುರ್ಗ
ಸಾಮಾನ್ಯ ದಿನದ ದರ ₹450- ₹650
ಏಪ್ರಿಲ್ 25 ದರ ₹800-₹1200
ಇನ್ನೂ, ಬಸ್ಗಳ ಬೇಡಿಕೆ ಹೆಚ್ಚಿರೋ ಕಾರಣ ,ಪಕ್ಷಗಳೇ ಬಸ್ ಬುಕ್ ಮಾಡಿ ಖಾಸಗಿ ಬಸ್ಗಳಲ್ಲಿ ತಮ್ಮ ಕ್ಷೇತ್ರದ ಮತದಾರರ ಸೆಳೆಯುವ ಪ್ರಯತ್ನ ಕೂಡ ನಡೀತಿದೆ…ಒಟ್ನಲ್ಲಿ ಪ್ರಜಾಪ್ರಭುತ್ವ ದೊಡ್ಡ ಹಬ್ಬ ಚುನಾವಣೆಗೂ ಬಸ್ ದರ ಏರಿಕೆ ಮಾಡಿರೋದು ಜನ್ರ ಕಣ್ಣು ಕೆಂಪಂಗೆ ಮಾಡಿದ್ರೆ ,ಪಕ್ಷಗಳೇ ಬಸ್ ಬುಕ್ ಮಾಡಿರೋದು ಖಾಸಗಿ ಬಸ್ಗಳಿಗೆ ಭರ್ಜರಿ ಆದಾಯಮಾನವಾಗಿದೆ..