ಬೆಂಗಳೂರು:- ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀಗಾಗಲೇ ಮಾಜಿ ಸಚಿವ ಹೆಚ್ ಡಿ ರೇವಣ್ಣನನ್ನು SIT ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
Breaking: ಕಿಡ್ನಾಪ್ ಕೇಸಲ್ಲಿ ರೇವಣ್ಣ ಅರೆಸ್ಟ್: ಇಂದು ವೈದ್ಯಕೀಯ ಪರೀಕ್ಷೆ ಸಾಧ್ಯತೆ!
ಇಂದು ಇಡೀ ರಾತ್ರಿ ಎಸ್ ಐ ಟಿ ಕಚೇರಿಯಲ್ಲೇ ಹೆಚ್ ಡಿ ರೇವಣ್ಣ ಇರಲಿದ್ದು, ಎಸ್ ಪಿ ನೇತೃತ್ವದಲ್ಲಿ ಹೆಚ್ ಡಿ ರೇವಣ್ಣಗೆ ಗ್ರಿಲ್ ನಡೆಯಲಿದೆ. ಈಗಾಗ್ಲೇ ರೇವಣ್ಣ ವಿಚಾರಣೆಗೇ SIT ಸಿದ್ದತೆ ಮಾಡಿಕೊಂಡಿದ್ದು, ನಾಳೆ ನ್ಯಾಯಾಧೀಶರ ಮುಂದೆ SIT ಹಾಜರುಪಡಿಸಲಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನ ಮೆಡಿಕಲ್ ಟೆಸ್ಟ್ ನಡೆಸಲಾಗುತ್ತದೆ,
ಬೌರಿಂಗ್ ಆಸ್ಪತ್ರೆಯಲ್ಲಿ ರೆವಣ್ಣಗೆ ಮೆಡಿಕಲ್ ಟೆಸ್ಟ್ ನಡೆಸಲಾಗುತ್ತದೆ. ಮೆಡಿಕಲ್ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದೆ.
ರೇವಣ್ಣ ಪ್ರಭಾವಿಯಾಗಿರುವುದರಿಂದ ರೇವಣ್ಣನವರ ಅಭಿಮಾನಿಗಳು, ಹಿತೈಷಿಗಳು ಬರುವ ಸಾಧ್ಯತೆ ಇದೆ. ಸಿಐಡಿ ಮುಂದೆ ಬಂದು ಪ್ರತಿಭಟನೆ ಮಾಡುವ ಸಾಧ್ಯತೆ ಇದ್ದು, ಇದ್ರಿಂದ ಲೋಕಲ್ ಪೊಲೀಸರ ಜೊತೆಗೆ ಕೆ.ಎಸ್.ಆರ್ ಪಿ ನಿಯೋಜನೆ ಮಾಡಲಾಗಿದೆ.