ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳ್ಲಲಿ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು ಹಾಗೂ ತುಮಕೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಒಣಹವೆ ಇರಲಿದ್ದು, ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಇದೆ. ವಿಜಯಪುರದಲ್ಲಿ 15.6 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ ರಾಜ್ಯಾದ್ಯಂತ ಮುಂಗಾರು ಮಳೆ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದೆ. ಅಕ್ಟೋಬರ್ನಲ್ಲಿ ಹಿಂಗಾರು ಮಳೆ ಕೂಡ ಕಡಿಮೆಯಾಗಿದ್ದರಿಂದ ಶೇ.65ರಷ್ಟು ಮಳೆ ಕೊರತೆ ಎದುರಾಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ಸೂಚನೆ ಸಿಕ್ಕಿತ್ತು. ಆದರೆ, ನವೆಂಬರ್ ತಿಂಗಳ ಆರಂಭದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆಯ ಪರಿಣಾಮದಿಂದ ಮಳೆ ಕೊರತೆ ಶೇ.35ಕ್ಕೆ ಇಳಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಶೇ.108ರಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Author: AIN Author
ಬೆಂಗಳೂರು:-ಕಾಳೇನ ಅಗ್ರಹಾರ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಮೂರು ವಾಹನಗಳಿಗೆ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕಿರಣ್ ಮೇಲೆ ಹಾರಿಕೆಳಗೆ ಬಿದ್ದಿದ್ದಾರೆ. ಮತ್ತೊಂದು ಬೈಕ್ ನಲ್ಲಿದ್ದ ಜಸ್ಮಿತ ಹಾಗು ಬಸಂತ್ ಕುಮಾರ್ ಇವರಿಬ್ಬರಲ್ಲಿ ಜಸ್ಮಿತಾಗೆ ಗಂಭೀರಗಾಯವಾಗಿದೆ. ಅಭಿಷೇಕ್ ಅಗರವಾಲ್ ಕಾರು ಚಾಲಕ ಎನ್ನಲಾಗಿದ್ದು, ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ವಿದ್ಯೆಯಿಂದ ಉದ್ಯೋಗದ ಜೊತೆಗೆ ಸಂಸ್ಕಾರವೂ ಪ್ರಾಪ್ತಿಯಾಗಬೇಕು ಆಗ ಮಾತ್ರ ಬದುಕಿಗೆ ಸಾರ್ಥಕತೆ ಇರುತ್ತದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಸರ್ಕಾರದ ಆಶಯ ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು. ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ , ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳೂ ವಿಕ್ತತ್ವ ವಿಕಾಸಕ್ಕೆ ಸಹಕಾರಿ ಎಂದರು. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಪ್ರಾಮುಖ್ಯತೆ ನೀಡದೆ ಸಾಮಾನ್ಯ ಜ್ಞಾನ, ವಿವೇಕ ಬೆಳೆಸಿಕೊಳ್ಳಬೇಕು ಎಂದು ಸಚಿವರು ಕಿವುಮಾತು ಹೇಳಿದರು. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಇದೇ ವೇಳೆ ಕೃಷಿ ಸಚಿವರು ಸಿದ್ದಗಂಗಾ ಹಾಗೂ ಆದಿ ಚುಂಚನಗಿರಿ ಮಠಗಳಲ್ಲಿ ತಾವು ಕಲಿತ ಶಿಕ್ಷಣ , ಸಂಸ್ಕಾರರವನ್ನು ಸ್ಮರಿಸಿದರು. ನಾಗಮಂಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಜೊತೆಗೆ ಹೊಸದಾಗಿ ಬಿ.ಎಸ್.ಸಿ, ಎಂ.ಎಸ್.ಸಿ., ಎಂ.ಎಸ್.ಸಿ., ಎಂ.ಎಸ್ .ಡಬ್ಲ್ಯೂ ಮತ್ತಿತರ ಕೋರ್ಸ್ ಗಳನ್ನು ಪ್ರಾರಂಭಿಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ನವದೆಹಲಿ: ಮೃತನಾಗಿದ್ದಾನೆ ಎಂದು ಹೇಳಲಾಗಿದ್ದ 11 ವರ್ಷದ ಬಾಲಕ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ದಿಢೀರನೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ. ಚರಮ್ ಸಿಂಗ್ ಅವರು 2010 ರಲ್ಲಿ ಪುತ್ರಿ ಮೀನಾರನ್ನು ಭಾನುಪ್ರಕಾಶ್ ಅವರಿಗೆ ಮದುವೆ ಮಾಡಿಕೊಟ್ಟಿದ್ದರು. ಇವರ ಪುತ್ರನೇ ಅಭಯ್ ಸಿಂಗ್. 2013ರಲ್ಲಿ ಮೀನಾ ಮೃತಪಟ್ಟರು. ಪತಿಯ ಕುಟುಂಬದ ವಿರುದ್ಧ ಮೀನಾ ಪೋಷಕರು ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದರು. ಬಾಲಕ ಅಭಯ್ ಸಿಂಗ್‌ನನ್ನು ಚರಮ್ ಸಿಂಗ್ ಕುಟುಂಬವು ತಮ್ಮ ಸುಪರ್ದಿಗೆ ತೆಗೆದುಕೊಂಡಿತು. 2021ರಲ್ಲಿ ಕೌಟುಂಬಿಕ ನ್ಯಾಯಾಲಯವು ತೀರ್ಪು ನೀಡಿ ಅಭಯ್‌ನನ್ನು ತಂದೆಯ ಉಸ್ತುವಾರಿಗೆ ಒಪ್ಪಿಸಿತು. ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಚರಮ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದರು. ಈ ನಡುವೆ ಚರಮ್ ಸಿಂಗ್ ಕುಟುಂಬದ ವಿರುದ್ದ ಭಾನುಪ್ರಕಾಶ್ ತಮ್ಮ ಮಗನನ್ನು ಕೊಲೆ ಮಾಡಿದ ಆರೋಪದ ಹೊರಿಸಿ, ಪೊಲೀಸರಿಂದ ಪ್ರಕರಣ ದಾಖಲಾಗುವಂತೆ ನಿಗಾವಹಿಸುತ್ತಾರೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಇದರ ವಿರುದ್ಧವಾಗಿ ಅಭಯ್ ಪರವಾಗಿ ಹೈಕೋರ್ಟ್‌ನಲ್ಲಿ ವಾದಿಸಿದ ವಕೀಲರು, ‘ಬಾಲಕ ಕೊಲೆಯಾಗಿಲ್ಲ, ಬದುಕಿದ್ದಾನೆ ಎಫ್‌ಐಆರ್ ರದ್ದು…
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಅಪ್ಲಿಕೇಶನ್‌ಗಳನ್ನು ಒದಗಿಸುವ ಗೂಗಲ್‌ನ ಅಧಿಕೃತ ಪ್ಲೇ ಸ್ಟೋರ್‌ನಲ್ಲಿ ಸೇರಿಕೊಂಡಿದ್ದ ನಕಲಿ ಮತ್ತು ಅನಧಿಕೃತ ಸುಮಾರು 36 ಕ್ಯಾಮರಾ ಆಯಪ್‌ಗಳನ್ನು ತೆಗೆದುಹಾಕಲಾಗಿದೆ. ಹೀಗಾಗಿ ನೀವು ಕೂಡ ನಿಮ್ಮ ಫೋನ್‌ನಲ್ಲಿ ಅವುಗಳನ್ನು ಬಳಸುತ್ತಿದ್ದರೆ, ತಕ್ಷಣ ತೆಗೆದುಹಾಕುವುದು ಉತ್ತಮ. ಅಂದರೆ, ಗೂಗಲ್ ಪ್ಲೇ ಸ್ಟೋರ್ ನಿಯಮ ಪಾಲಿಸದ, ಅನಧಿಕೃತ ಮತ್ತು ನಕಲಿ ಆಯಪ್‌ಗಳನ್ನು ಗೂಗಲ್ ತೆಗೆದುಹಾಕುತ್ತದೆ. ಈ ಬಾರಿ ಗ್ರಾಹಕರ ಮಾಹಿತಿ ಕದಿಯುವ ಮತ್ತು ಫೋನ್‌ನಲ್ಲಿ ಅನಗತ್ಯ ಅಕ್ಸೆಸ್ ಪಡೆದುಕೊಳ್ಳುವ, ಸುಳ್ಳು ಜಾಹೀರಾತು ಹರಡುವ ಕ್ಯಾಮರಾ ಆಯಪ್‌ಗಳನ್ನು ಗೂಗಲ್ ಕಿತ್ತುಹಾಕಿದೆ. ಅವುಗಳ ವಿವರ ಇಲ್ಲಿದೆ. ಈ ಆಯಪ್‌ಗಳನ್ನು ನೀವು ಬಳಸುತ್ತಿದ್ದರೆ ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿ. ಆ ಮೂಲಕ ಸಮಸ್ಯೆಯಿಂದ ಪಾರಾಗಿ ಗೂಗಲ್ ಎಚ್ಚರಿಕೆ ನೀಡಿದೆ. ಇಲ್ಲಿದೆ ನೋಡಿ ಈ ಕ್ಯಾಮರಾ ಆಯಪ್ ಯೊರೋಕೊ ಕ್ಯಾಮರಾ ಆಯಪ್ ಸೋಲು ಕ್ಯಾಮರಾ ಆಯಪ್ ಲೈಟ್ ಬ್ಯೂಟಿ ಕ್ಯಾಮರಾ ಆಯಪ್ ಬ್ಯೂಟಿ ಕೊಲಾಜ್ ಲೈಟ್ ಬ್ಯೂಟಿ ಕೊಲಾಜ್ ಲೈಟ್ ಫೋಟೋ ಕೊಲಾಜ್ & ಬ್ಯೂಟಿ ಆಯಪ್ ಬ್ಯೂಟಿ…
ಬಳ್ಳಾರಿ:- ರಾಜಕೀಯದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ, ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ.. ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಕೌಲ್ಬಜಾರ್ ಗೆ ಬಂದಂತ ಸಮಯದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು, ಅಭಿಮಾನಿಗಳು ಧೃತಿಗೇಡಬೇಡಿ, ರಾಜಕೀಯದಲ್ಲಿ ಸೋಲು- ಗೆಲ್ಲುವು ಸಾಮಾನ್ಯ , ಕಾರ್ಯಕರ್ತರಿಗೆ ಯಾವುದೇ ತೊಂದರೆಯಾದರೆ ಸಹಿಸುವ ಮಾತೆ ಇಲ್ಲ, ರಾಜಕೀಯ ನಾಯಕರಿಗೆ ಜೀವಾಳವೇ ಕಾರ್ಯಕರ್ತರು ಮತ್ತು ಅಭಿಮಾನಿಗಳು,ಅವರಿಗೆ ತೊಂದರೆಯಾದರೆ ಮೌನವಹಿಸುವ ಜಾಯಮಾನ ನನ್ನದಲ್ಲ, ಹಿಂದಿನ ಅವರ ಅವಧಿಯ ರಾಜಕೀಯ ನೆನೆದು ರಾಮುಲು ಭಾವುಕರಾಗಿದ್ದಾರೆ ರಾಜಕೀಯದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂದು ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಕೌಲ್ಬಜಾರ್ ಗೆ ಬಂದಂತ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ. ನೇರದಿರುವ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಸಿಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಂದ ಅಭಯದ ಮಾತುಗಳು ಕೇಳಿ ಕಾರ್ಯಕರ್ತರು ಸಂತಸಗೊಂಡರು
ಹುಬ್ಬಳ್ಳಿ: ಪೊಲೀಸರು ತಪ್ಪು ಮಾಡಿದ್ದರೆ ಬುದ್ದಿ ಹೇಳಿ ಬಹಿರಂಗವಾಗಿ ಹೀಗೆ ಮಾಡಿದ್ದು ಸರಿನಾ ಎಂದು ಎಸ್ ಎಸ್ ಕೆ ಸಮಾಜದ ಯುವ ಮುಖಂಡ ರಾಜು ಹನಮಂತಸಾ ನಾಯಕವಾಡಿ ಪ್ರಶ್ನೆ ಮಾಡಿದ್ದಾರೆ . ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ್ದು, ಪ್ರಕರಣವೊಂದರಲ್ಲಿ ಧಾರವಾಡದ ಉಪನಗರ ಪೊಲೀಸ್ ಠಾಣೆ ಇನಸ್ಪೇಕ್ಟರ್ ಕಾಡದೇವರ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ತರಾಟೆಗೆ ತಗೆದುಕೊಂಡಿದ್ದಾರೆ.ಪೊಲೀಸ್ ಅಧಿಕಾರಿಗಳನ್ನು ತರಾಟಗೆ ತಗೆದುಕೊಂಡಿರುವ ವಿಡಿಯೋ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಕೇಂದ್ರ ಸಚಿವರ ಈ ಒಂದು ನಡೆಯನ್ನು ಅವರು ಖಂಡಿಸಿದ್ದಾರೆ.ಸರಳ ಸಜ್ಜನಿಕೆಗೆ ತಾವೊಬ್ಬರು ಹೆಸರಾಗಿದ್ದು ಪೊಲೀಸರು ತಪ್ಪು ಮಾಡಿದ್ದರೆ ಸಮಸ್ಯೆಗಳನ್ನು ಸಾರ್ವಜನಿಕರು ನಿಮ್ಮ ಮುಂದೆ ತಗೆದುಕೊಂಡು ಬಂದಿದ್ದರೆ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಅವರಿಗೆ ಬುದ್ದಿ ಹೇಳಿ ಆದರೆ ಹೀಗೆ ಬಹಿರಂಗವಾಗಿ ಮಾಡಿದ್ದು ಸರಿನಾ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಹೀಗಾಗಿ ಈ ಕೂಡಲೇ ಆ ಒಂದು ಪೊಲೀಸ್ ಅಧಿಕಾರಿಯನ್ನು ಕರೆಯಿಸಿ ಆತ್ಮಸ್ಥೈರ್ಯವನ್ನು ತುಂಬಿ ಕ್ಷಮೆ ಕೇಳುವಂತೆ ಒತ್ತಾಯವನ್ನು ಮಾಡಿದ್ದಾರೆ.ಹೀಗೆ…
ದೀಪಾವಳಿ ಹಬ್ಬ ಬಂತು ಎಂದರೆ ಚಳಿಗಾಲವೂ ಆರಂಭವಾಯ್ತು ಎಂದರ್ಥ. ಈ ಸಂದರ್ಭದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ತುಂಬಾ ಮುಖ್ಯ. ತಣ್ಣಗಿನ ಈ ದಿನಗಳಲ್ಲಿ ಹೆಚ್ಚಾಗಿ ಒಣ ಹಣ್ಣುಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ನಾವು ಈ ವಿಶೇಷ ದಿನಕ್ಕೆ ವಾಲ್ನಟ್ ಬರ್ಫಿ ಮಾಡೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ಬೇಕಾಗುವ ಪದಾರ್ಥಗಳು: ಒರಟಾಗಿ ಪುಡಿ ಮಾಡಿದ ವಾಲ್ನಟ್ – 1 ಕಪ್ ಸಕ್ಕರೆ – 4 ಟೀಸ್ಪೂನ್ ಹಾಲಿನ ಪುಡಿ – 4 ಟೀಸ್ಪೂನ್ ಹಾಲು – 4 ಟೀಸ್ಪೂನ್ ಜಾಯಿಕಾಯಿ ಪುಡಿ – ಚಿಟಿಕೆ ತುಪ್ಪ – 4 ಟೀಸ್ಪೂನ್ ಮಾವಾ – ಕಾಲು ಕಪ್ ಬೇಕಾಗುವ ಪದಾರ್ಥಗಳು: * ಮೊದಲಿಗೆ ಮೈಕ್ರೊವೇವ್ ಸೇಫ್ ಬೌಲ್‌ನಲ್ಲಿ ಮಾವಾ ಮತ್ತು 2 ಟೀಸ್ಪೂನ್ ತುಪ್ಪವನ್ನು ಸೇರಿಸಿ ಮತ್ತು 1 ನಿಮಿಷ ಬಿಸಿ ಮಾಡಿ. * ಸಕ್ಕರೆ, ಹಾಲಿನ ಪುಡಿ, ಹಾಲು ಮತ್ತು ಜಾಯಿಕಾಯಿ ಪುಡಿ ಸೇರಿಸಿ ಪಕ್ಕಕ್ಕೆ ಇರಿಸಿ. * ಉಳಿದ ತುಪ್ಪವನ್ನು ವಾಲ್ನಟ್‌ಗೆ ಸೇರಿಸಿ…
ಖೇಣಿಗೆ ಇಟ್ಟಿದ್ದ ಅಡಿಕೆಯನ್ನ ಕಳ್ಳತನ ಮಾಡಿಕೊಂಡು ಹೋಗಿದ್ದ ಮೂವರು ಅಡಿಕೆ ಕಳ್ಳರನ್ನ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 12.50 ಲಕ್ಷ ಮೌಲ್ಯದ ಅಡಿಕೆ ಮತ್ತು ಒಂದು ಕಾರ್ ನ್ನ ಜಪ್ತಿ ಮಾಡಿದ್ದಾರೆ. ಕರೆಕಟ್ಟೆ ಗ್ರಾಮದ ಛತ್ರಪತಿ, ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಗ್ರಾಮದ ಧನಂಜಯ ನಾಯ್ಕ್ ಮತ್ತು ಗಿರೀಶ್ ಎಂಬುವರು ಬಂಧಿತರು. ಈ ಮೂವರು ವಡ್ನಾಳ ಗ್ರಾಮದ ಈಶ್ವರಪ್ಪ ಎಂಬುವರ ಅಡಿಕೆಯನ್ನ ಖೇಣಿಗೆ ಹಾಕಿದ್ದ ಸಂದರ್ಭದಲ್ಲಿ ಮೂವರು 6 ಕ್ವಿಂಟಲ್ ಅಡಿಕೆಯನ್ನ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು. ಬಳಿಕ ಈಶ್ವರಪ್ಪ ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ನೇತೃತ್ವದ ತಂಡ ಮೂವರು ಅಡಿಕೆ ಕಳ್ಳರನ್ನ ಬಂಧಿಸಿದೆ. ಮತ್ತೆ ವಿಚಾರಣೆ ನಡೆಸಿದಾಗ ಮೂವರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ 4 ಕೇಸ್ ಹಾಗೂ ಹೊಳೆಹಬ್ಬೂರು ಠಾಣೆಯಲ್ಲಿ 1 ಪ್ರಕರಣ ಇರುವುದು ಗೊತ್ತಾಗಿದೆ. ಒಟ್ಡು ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಂದ 12.50 ಲಕ್ಷ…
ರೋಹಿತ್ ಶರ್ಮ ಬೌಲಿಂಗ್ ಸ್ಟೈಲ್ಗೆ ಪತ್ನಿ ಕ್ಲೀನ್ ಬೋಲ್ಡ್ ಆಗಿದ್ದು, ರಿತಿಕಾ ರಿಯಾಕ್ಷನ್ ಭಾರೀ ವೈರಲ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. ಅವು ಯಾವುವೆಂದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮ ಬೌಲಿಂಗ್ ಮಾಡಿದ್ದು, ಅಲ್ಲದೆ, ಇಬ್ಬರೂ ಕೂಡ ಒಂದೊಂದು ವಿಕೆಟ್ ಪಡೆದಿದ್ದು. ಕೊಹ್ಲಿ 9 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಪಡೆದರೆ, ರೋಹಿತ್ 4284 ದಿನಗಳ ಬಳಿಕ ಅಂದರೆ, 7 ವರ್ಷಕ್ಕೂ ಅಧಿಕ ಸಮಯದ ನಂತರ ಬೌಲಿಂಗ್ ಮಾಡಿದರು. ಅಲ್ಲದೆ, ವಿಕೆಟ್ ಕೂಡ ಪಡೆದರು. ರೋಹಿತ್ ಶರ್ಮ ಅವರು ಪಂದ್ಯದ ಎರಡನೇ ಇನಿಂಗ್ಸ್ನ 48ನೇ ಓವರ್ ಎಸೆದರು. ತಮ್ಮ 5ನೇ ಎಸೆತದಲ್ಲಿ ನೆದರ್ಲೆಂಡ್ಸ್ ಬ್ಯಾಟರ್ ತೇಜ ನಿಡಮನೂರು ವಿಕೆಟ್ ಪಡೆದರು. 54 ರನ್ ಬಾರಿಸಿದ್ದ ನಿಡಮನೂರು ಸಿಕ್ಸರ್ ಬಾರಿಸಲು ಯತ್ನಿಸಿ, ಮೊಹಮ್ಮದ್ ಶಮಿಗೆ ಕ್ಯಾಚ್ ನೀಡಿ, ಡಗೌಟ್ಗೆ ಮರಳಿದರು. ಈ…