ನವದೆಹಲಿ: ಮೃತನಾಗಿದ್ದಾನೆ ಎಂದು ಹೇಳಲಾಗಿದ್ದ 11 ವರ್ಷದ ಬಾಲಕ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ದಿಢೀರನೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ. ಚರಮ್ ಸಿಂಗ್ ಅವರು 2010 ರಲ್ಲಿ ಪುತ್ರಿ ಮೀನಾರನ್ನು ಭಾನುಪ್ರಕಾಶ್ ಅವರಿಗೆ ಮದುವೆ ಮಾಡಿಕೊಟ್ಟಿದ್ದರು. ಇವರ ಪುತ್ರನೇ ಅಭಯ್ ಸಿಂಗ್. 2013ರಲ್ಲಿ ಮೀನಾ ಮೃತಪಟ್ಟರು. ಪತಿಯ ಕುಟುಂಬದ ವಿರುದ್ಧ ಮೀನಾ ಪೋಷಕರು ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದರು.
ಬಾಲಕ ಅಭಯ್ ಸಿಂಗ್ನನ್ನು ಚರಮ್ ಸಿಂಗ್ ಕುಟುಂಬವು ತಮ್ಮ ಸುಪರ್ದಿಗೆ ತೆಗೆದುಕೊಂಡಿತು. 2021ರಲ್ಲಿ ಕೌಟುಂಬಿಕ ನ್ಯಾಯಾಲಯವು ತೀರ್ಪು ನೀಡಿ ಅಭಯ್ನನ್ನು ತಂದೆಯ ಉಸ್ತುವಾರಿಗೆ ಒಪ್ಪಿಸಿತು. ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಚರಮ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದರು. ಈ ನಡುವೆ ಚರಮ್ ಸಿಂಗ್ ಕುಟುಂಬದ ವಿರುದ್ದ ಭಾನುಪ್ರಕಾಶ್ ತಮ್ಮ ಮಗನನ್ನು ಕೊಲೆ ಮಾಡಿದ ಆರೋಪದ ಹೊರಿಸಿ, ಪೊಲೀಸರಿಂದ ಪ್ರಕರಣ ದಾಖಲಾಗುವಂತೆ ನಿಗಾವಹಿಸುತ್ತಾರೆ.
Kolar: ಹುಡುಗಿಗೆ ಮೆಸೇಜ್ ಕಳಿಸಿದ್ದೇ ಕೊಲೆಗೆ ಕಾರಣವಾಯ್ತಾ..? ಐಜಿಪಿ ರವಿಕಾಂತೇಗೌಡ ಹೇಳೋದೇನು?
ಇದರ ವಿರುದ್ಧವಾಗಿ ಅಭಯ್ ಪರವಾಗಿ ಹೈಕೋರ್ಟ್ನಲ್ಲಿ ವಾದಿಸಿದ ವಕೀಲರು, ‘ಬಾಲಕ ಕೊಲೆಯಾಗಿಲ್ಲ, ಬದುಕಿದ್ದಾನೆ ಎಫ್ಐಆರ್ ರದ್ದು ಮಾಡರಿ,” ಎಂದು ಕೋರುತ್ತಾರೆ. ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಸುಪ್ರಿಂ ಕೋರ್ಟ್ಗೆ ಪ್ರಕರಣ ವರ್ಗಾವಣೆಯಾಗುತ್ತದೆ. ಇಬ್ಬರು ನ್ಯಾಯಮೂರ್ತಿಗಳ ಪೀಠದಲ್ಲಿಪ್ರಕರಣ ವಿಚಾರಣೆ ವೇಳೆ ಕಟಕಟೆಯಲ್ಲಿ ಹಾಜರಾದ ಬಾಲಕ ಅಭಯ್ ಸಿಂಗ್, ‘ ನಾನು ಬದುಕಿದ್ದೇನೆ. ನಮ್ಮ ಅಜ್ಜನ ಮನೆಯಲ್ಲಿ ವಾಸ ಇದ್ದೇನೆ’ ಎಂದು ಹೇಳಿಕೆ ನೀಡಿದ್ದಾನೆ.