ಬಳ್ಳಾರಿ:– ರಾಜಕೀಯದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ, ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ..
ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಕೌಲ್ಬಜಾರ್ ಗೆ ಬಂದಂತ ಸಮಯದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು, ಅಭಿಮಾನಿಗಳು ಧೃತಿಗೇಡಬೇಡಿ, ರಾಜಕೀಯದಲ್ಲಿ ಸೋಲು- ಗೆಲ್ಲುವು ಸಾಮಾನ್ಯ , ಕಾರ್ಯಕರ್ತರಿಗೆ ಯಾವುದೇ ತೊಂದರೆಯಾದರೆ ಸಹಿಸುವ ಮಾತೆ ಇಲ್ಲ, ರಾಜಕೀಯ ನಾಯಕರಿಗೆ ಜೀವಾಳವೇ ಕಾರ್ಯಕರ್ತರು ಮತ್ತು ಅಭಿಮಾನಿಗಳು,ಅವರಿಗೆ ತೊಂದರೆಯಾದರೆ ಮೌನವಹಿಸುವ ಜಾಯಮಾನ ನನ್ನದಲ್ಲ, ಹಿಂದಿನ ಅವರ ಅವಧಿಯ ರಾಜಕೀಯ ನೆನೆದು ರಾಮುಲು ಭಾವುಕರಾಗಿದ್ದಾರೆ
ರಾಜಕೀಯದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂದು ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಕೌಲ್ಬಜಾರ್ ಗೆ ಬಂದಂತ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ. ನೇರದಿರುವ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಸಿಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಇನ್ನೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಂದ ಅಭಯದ ಮಾತುಗಳು ಕೇಳಿ ಕಾರ್ಯಕರ್ತರು ಸಂತಸಗೊಂಡರು