ಖೇಣಿಗೆ ಇಟ್ಟಿದ್ದ ಅಡಿಕೆಯನ್ನ ಕಳ್ಳತನ ಮಾಡಿಕೊಂಡು ಹೋಗಿದ್ದ ಮೂವರು ಅಡಿಕೆ ಕಳ್ಳರನ್ನ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 12.50 ಲಕ್ಷ ಮೌಲ್ಯದ ಅಡಿಕೆ ಮತ್ತು ಒಂದು ಕಾರ್ ನ್ನ ಜಪ್ತಿ ಮಾಡಿದ್ದಾರೆ.
ಕರೆಕಟ್ಟೆ ಗ್ರಾಮದ ಛತ್ರಪತಿ, ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಗ್ರಾಮದ ಧನಂಜಯ ನಾಯ್ಕ್ ಮತ್ತು ಗಿರೀಶ್ ಎಂಬುವರು ಬಂಧಿತರು. ಈ ಮೂವರು ವಡ್ನಾಳ ಗ್ರಾಮದ ಈಶ್ವರಪ್ಪ ಎಂಬುವರ ಅಡಿಕೆಯನ್ನ ಖೇಣಿಗೆ ಹಾಕಿದ್ದ ಸಂದರ್ಭದಲ್ಲಿ ಮೂವರು 6 ಕ್ವಿಂಟಲ್ ಅಡಿಕೆಯನ್ನ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು.
ಬಳಿಕ ಈಶ್ವರಪ್ಪ ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ನೇತೃತ್ವದ ತಂಡ ಮೂವರು ಅಡಿಕೆ ಕಳ್ಳರನ್ನ ಬಂಧಿಸಿದೆ. ಮತ್ತೆ ವಿಚಾರಣೆ ನಡೆಸಿದಾಗ ಮೂವರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ 4 ಕೇಸ್ ಹಾಗೂ ಹೊಳೆಹಬ್ಬೂರು ಠಾಣೆಯಲ್ಲಿ 1 ಪ್ರಕರಣ ಇರುವುದು ಗೊತ್ತಾಗಿದೆ. ಒಟ್ಡು ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಂದ 12.50 ಲಕ್ಷ ಮೌಲ್ಯದ ಅಡಿಕೆ ಹಾಗೂ ಕಾರ್ ನ್ನ ವಶಕ್ಕೆ ಪಡೆದು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.